Football: ಇಂಟರ್‌ಕಾಂಟಿನೆಂಟಲ್ ಕಪ್ ಗೆದ್ದ ಭಾರತ: 1 ಕೋಟಿ ಬಹುಮಾನ ಘೋಷಿಸಿದ ಒಡಿಶಾ ಸರ್ಕಾರ
ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಇಂಟರ್‌ಕಾಂಟಿನೆಂಟಲ್ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಲೆಬನಾನ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಸುನಿಲ್ ಛೆಟ್ರಿ ನೇತೃತ್ವದ ಭಾರತ ತಂಡ 2-0 ಅಂತರದಿಂದ ಗೆಲುವು ಸಾಧಿಸಿ ಈ ಟ್ರೋಫಿಯನ್ನು ವಶಕ್ಕೆ ಪಡೆದುಕೊಂಡಿದೆ. ಭಾರತ ಫುಟ್ಬಾಲ್ ತಂಡದ ಈ ಸಾಧನೆಗೆ ಕ್ರೀಡಾಭಿಮಾನಿಗಳಿಂದ ಭರಪೂರ ಅಭಿನಂದನೆಗಳು ಹರಿದುಬರುತ್ತಿದೆ.
ಇನ್ನು ಈ ಟೂರ್ನಿಯನ್ನು ಗೆದ್ದ ಭಾರತ ತಂಡಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪ್ರಶಸ್ತಿ ವಿತರಿಸಿದ್ದಾರೆ. ಸಾವಿರಾರು ಪ್ರೇಕ್ಷಕರು ನೆರೆದಿದ್ದ ಈ ಫೈನಲ್ ಪಂದ್ಯದಲ್ಲಿ ಭಾರತ ಅದ್ಭುತ ಜಯವನ್ನು ಎಲ್ಲರ ಸಂತಸಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತೀಯ ಫುಟ್ಬಾಲ್ ತಂಡಕ್ಕೆ ಒಂದು ಕೋಟಿ ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಇನ್ನು ಈ ಪಂದ್ಯದ ಮುಕ್ತಾಯದ ಬಳಿಕ ಭಾರತ ಹಾಗೂ ಲೆಬನಾನ್ ಎರಡೂ ತಂಡಗಳ ಆಟಗಾರರನ್ನು ಗೌರವಿಸಲಾಗಿದೆ.

ಭಾನುವಾರ ಭುವನೇಶ್ವರದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಲೆಬನಾನ್ ವಿರುದ್ಧ 2-0 ಅಂತರದ ಜಯ ಗಳಿಸಿದ ಭಾರತ ತಂಡ ಇಂಟರ್‌ಕಾಂಟಿನೆಂಟಲ್ ಕಪ್ ಅನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ತಮ್ಮ 87 ನೇ ಅಂತಾರಾಷ್ಟ್ರೀಯ ಗೋಲು ಗಳಿಸುವ ಭಾರತದ ಈ ವಿಶೇಷ ಗೆಲುವಿನಲ್ಲಿ ಗಮನಸೆಳೆದರು.
ಇನ್ನು ಲಾಲಿಯಾನ್ಜುವಾಲಾ ಚಾಂಗ್ಟೆ ಭಾರತದ ಪರವಾಗಿ ಎರಡನೇ ಗೋಲು ಬಾರಿಸುವ ಮೂಲಕ ತಂಡವನ್ನು ಸುಸ್ಥಿತಿಯಲ್ಲಿಟ್ಟರು. ಇದು 2018 ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕ ಈ ಟೂರ್ನಿಯಲ್ಲಿ ಭಾರತಕ್ಕೆ ಗೆದ್ದುಕೊಂಡ ಎರಡನೇ ಚಾಂಪಿಯನ್ ಪಟ್ಟ. 2019 ರಲ್ಲಿ ಕೊರಿಯಾ ಚಾಂಪಿಯನ್ ಪಟ್ಟಕ್ಕೇರಿತ್ತು.
ಈ ಪಂದ್ಯದಲ್ಲಿ ಭಾರತ ಆರಂಭದಲ್ಲಿ ತೀವ್ರ ಪೈಪೊಟಿಯನ್ನು ಎದುರಿಸಿತ್ತು. ಮೊದಲಾರ್ಧದಲ್ಲಿ ಲೆಬನಾನ್ ತಂಡ ಅದ್ಭುತ ಪ್ರದರ್ಶನ ನೀಡಿ ಭಾರೀ ಪೈಪೋಟಿ ನೀಡಿತ್ತು. ಈ ಅವಧಿಯಲ್ಲಿ ಭಾರತ ತಂಡ ಒಂದೂ ಗೋಲು ದಾಖಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೊದಲಾರ್ಧ 0-0 ಅಂತರದಿಂದ ಅಂತ್ಯವಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ಭಾರತ ತಂಡ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿ ಮೇಲುಗೈ ಸಾಧಿಸಿದ್ದ್ಲದೆ ಪಂದ್ಯವನ್ನು ಗೆದ್ದು ಚಾಂಪಿಯನ್ ಎನಿಸಿಕೊಂಡಿತು.
ಭಾರತ ತಂಡದ ಅನುಭವಿ ಆಟಗಾರ ಹಾಗೂ ನಾಯಕ ಸುನಿಲ್ ಛೇಟ್ರಿ ತಂಡಕ್ಕೆ ಮೊದಲ ಗೋಲು ಬಾರಿಸಿದರೆ, ಲಾಲಿಯಾನ್ಜುವಾಲಾ ಚಾಂಗ್ಟೆ ಮತ್ತೊಮ್ಮೆ ಚೆಂಡನ್ನು ಗೋಲು ಪೋಸ್ಟ್‌ನ ಒಳಕ್ಕೆ ತಳ್ಳುವಲ್ಲಿ ಯಶಸ್ವಿಯಾರು. ಈ ಮೂಲಕ ಭಾರತ ಪಂದ್ಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications