21 ವರ್ಷಗಳ ನಂತರ ಟಾಪ್ 100ನೇ ಸ್ಥಾನ ಗಳಿಸಿದ ಭಾರತ ಫುಟ್ಬಾಲ್ ತಂಡ
ನವದೆಹಲಿ, ಮೇ 4: ಭಾರತೀಯ ಫುಟ್ಬಾಲ್ ಅಭಿಮಾನಿಗಳಿಗೆ ಸಂತಸ ಪಡುವ ವಿಚಾರವಿದು. ಸುಮಾರು 21 ವರ್ಷಗಳ ಬಳಿಕ ಭಾರತೀಯ ಫುಟ್ಬಾಲ್ ತಂಡ, ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ನೀಡುವ ಶ್ರೇಯಾಂಕ ಪಟ್ಟಿಯಲ್ಲಿ (FIFA Ranking) 100ನೇ ಸ್ಥಾನಕ್ಕೇರಿದೆ.
ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಹೀಗೆ, ಟಾಪ್ 100ರಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದು ಆರನೇ ಬಾರಿ.

1996ರಲ್ಲಿ 100ನೇ ಸ್ಥಾನಕ್ಕೇರಿದ್ದ ಭಾರತ ತಂಡ, ಅಲ್ಲಿಂದ ಈವರೆಗೆ ಸತತವಾಗಿ ಕುಸಿತ ಕಾಣುತ್ತಲೇ ಬಂದಿತ್ತು. ಆದರೆ, ಇತ್ತೀಚೆಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರುತ್ತಿರುವ ಭಾರತ ತಂಡ, ಶ್ರೇಯಾಂಕ ಪಟ್ಟಿಯಲ್ಲಿ ಕ್ರಮೇಣ ಮೇಲೇರುತ್ತಲೇ ಬಂದಿತ್ತು.
ಕಳೆದ 13 ಪಂದ್ಯಗಳಲ್ಲಿ (ಭೂತಾನ್ ವಿರುದ್ಧದ ಒಂದು ಅನಧಿಕೃತ ಪಂದ್ಯ ಸೇರಿದಂತೆ) 11 ಜಯ ದಾಖಲಿಸಿರುವ ಭಾರತೀಯ ಫುಟ್ಬಾಲ್ ತಂಡ ಒಟ್ಟು 31 ಗೋಲುಗಳನ್ನು ದಾಖಲಿಸಿ ಹೊಸ ಸಾಧನೆ ಮಾಡಿರುವುದು ಶ್ರೇಯಾಂಕದಲ್ಲಿ ಏರಿಕೆ ಕಾಣಲು ಸಾಧ್ಯವಾಗಿದೆ.
ಆದರೆ, ಈಗ ತಲುಪಿರುವ 100ನೇ ಸ್ಥಾನವೇ ಭಾರತ ತಂಡದ ಶ್ರೇಷ್ಠ ಸಾಧನೆ ಎನ್ನುವಂತಿಲ್ಲ. 1994ರ ಫೆಬ್ರವರಿಯಲ್ಲಿ 94ನೇ ಶ್ರೇಯಾಂಕ ದಾಖಲಿಸಿತ್ತು.
ಅಂದಹಾಗೆ, ಏಷ್ಯನ್ ಫುಟ್ಬಾಲ್ ಕಾನ್ಫಿಡರೇಷನ್ (ಎಎಫ್ ಸಿ) ನಲ್ಲಿ ಭಾರತ ತಂಡ, 11ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications