Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಲಿಯೋನೆಲ್ ಮೆಸ್ಸಿ ಹಿಂದಿಕ್ಕಿದ ಸುನಿಲ್ ಛೆಟ್ರಿ!

India Football Captain Sunil Chhetri Surpasses Lionel Messis Tally Of International Goals

ನವದೆಹಲಿ: ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಸಕ್ರಿಯ ಆಟಗಾರರ ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಜಾಗತಿಕ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ್ದಾರೆ. ಫೀಫಾ ವಿಶ್ವಕಪ್‌ ಕ್ವಾಲಿಫೈಯರ್ ಸುತ್ತಿನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಛೆಟ್ರಿ ಈ ಸಾಧನೆ ಮಾಡಿದ್ದಾರೆ. ಕ್ವಾಲಿಫೈಯರ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 2 ಗೋಲ್ ಬಾರಿಸುವುದರೊಂದಿಗೆ ಛೆಟ್ರಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

ದೋಹಾದಲ್ಲಿ ಸೋಮವಾರ ನಡೆದ 2022ರ ಫೀಫಾ ವಿಶ್ವಕಪ್‌ ಮತ್ತು 2023ರ ಎಎಫ್‌ಸಿ ಏಷ್ಯನ್ ಕಪ್‌ಗಾಗಿ ಕ್ವಾಲಿಫೈಯರ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 2-ಯ ಜಯ ದಾಖಲಿಸಿತ್ತು. ಇದರಲ್ಲಿ ಭಾರತಕ್ಕೆ ಎರಡೂ ಗೋಲ್ ಬಾರಿಸಿದ್ದು ಸುನಿಲ್ ಛೆಟ್ರಿ. 79ನೇ ನಿಮಿಷ ಮತ್ತು 90+2ನೇ ನಿಮಿಷದಲ್ಲಿ ಛೆಟ್ರಿ ಗೋಲ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಭಾರತದ ಹೆಸರಿನಲ್ಲಿ ದಾಖಲೆ

ಭಾರತದ ಹೆಸರಿನಲ್ಲಿ ದಾಖಲೆ

ಛೆಟ್ರಿ ಬಾರಿಸಿದ ಎರಡು ಗೋಲ್‌ಗಳ ಸಹಾಯದಿಂದ ಭಾರತ ಕಳೆದ 6 ವರ್ಷಗಳಲ್ಲಿ ವಿಶ್ವಕಪ್‌ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಗೆಲುವು ಕಂಡಿದೆಯಲ್ಲದೆ ವಿಶೇಷ ದಾಖಲೆಯೂ ನಿರ್ಮಿಸಿದೆ. ಛೆಟ್ರಿ ಈಗ ಒಟ್ಟು 74 ಗೋಲ್‌ಗಳೊಂದಿಗೆ ಸಕ್ರಿಯ ಆಟಗಾರರಲ್ಲಿ ಅರ್ಜೆಂಟೀನಾ ಸ್ಟಾರ್ ಮೆಸ್ಸಿ ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ರೊನಾಲ್ಡೋಗೆ ಮೊದಲ ಸ್ಥಾನ

ರೊನಾಲ್ಡೋಗೆ ಮೊದಲ ಸ್ಥಾನ

ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಕ್ರಿಯರಾಗಿರುವ ಆಟಗಾರರಲ್ಲಿ ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಸದ್ಯ ಪೋರ್ಚುಗಲ್‌ನ ಕ್ರಿಸ್ಚಿಯಾನೊ ರೊನಾಲ್ಡೋ ಮೊದಲ ಸ್ಥಾನದಲ್ಲಿದ್ದಾರೆ. ರೊನಾಲ್ಡೋ 103 ಗೋಲ್‌ಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಯುಎಇಯ ಅಲಿ ಮಾಬ್‌ಖೌಟ್ ಇದ್ದಾರೆ.

4ನೇ ಸ್ಥಾನದಲ್ಲಿ ಮೆಸ್ಸಿ

4ನೇ ಸ್ಥಾನದಲ್ಲಿ ಮೆಸ್ಸಿ

72 ಗೋಲ್‌ ಬಾರಿಸಿರುವ ಮೆಸ್ಸಿ ಸಕ್ರಿಯ ಫುಟ್ಬಾಲ್ ಆಟಗಾರರಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕಳೆದ ಗುರುವಾರ (ಜೂನ್ 3) ನಡೆದ ವಿಶ್ವಕಪ್‌ ಕ್ವಾಲಿಫೈಯರ್ ಪಂದ್ಯದಲ್ಲಿ ಚಿಲಿ ವಿರುದ್ಧ ಮೆಸ್ಸಿ 72ನೇ ಗೋಲ್ ಬಾರಿಸಿದ್ದರು. ಕಳೆದ ವಾರವೇ ಮಾಬ್‌ಖೌಟ್ ಅವರು ಮಲೇಷ್ಯಾ ವಿರುದ್ಧ 73ನೇ ಗೋಲ್ ಬಾರಿಸಿದ್ದರು.

ವಿಶ್ವದ ಸಕ್ರಿಯ ಆಟಗಾರರ ಅತ್ಯಧಿಕ ಗೋಲ್ ಪಟ್ಟಿ

ವಿಶ್ವದ ಸಕ್ರಿಯ ಆಟಗಾರರ ಅತ್ಯಧಿಕ ಗೋಲ್ ಪಟ್ಟಿ

1. ಕ್ರಿಸ್ಚಿಯಾನೊ ರೊನಾಲ್ಡೋ, ಪೋರ್ಚುಗಲ್, 103 ಗೋಲ್‌ಗಳು
2. ಸುನಿಲ್ ಛೆಟ್ರಿ, ಭಾರತ, 74 ಗೋಲ್‌ಗಳು
3. ಅಲಿ ಮಾಬ್‌ಖೌಟ್, ಯುಎಇ, 73 ಗೋಲ್‌ಗಳು
4. ಲಿಯೋನೆಲ್ ಮೆಸ್ಸಿ, ಅರ್ಜೆಂಟೀನಾ, 72 ಗೋಲ್‌ಗಳು
5. ರಾಬರ್ಟ್ ಲೆವಾಂಡೋವ್ಸ್ಕಿ, ಪೋಲೆಂಡ್, 66 ಗೋಲ್‌ಗಳು

Story first published: Wednesday, June 9, 2021, 9:53 [IST]
Other articles published on Jun 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+