ಹಾಕಿ: ಬ್ರಿಟನ್ ವಿರುದ್ಧ ಭಾರತದ ಅಂಡರ್ -23 ಪುರುಷರಿಗೆ ಸೋಲು

ಆಂಟ್ವೆರ್ಪ್, ಜುಲೈ 16: ಬೆಲ್ಜಿಯಂನ ಆಂಟ್ವೆರ್ಪ್ ನಲ್ಲಿ ಭಾನುವಾರ ನಡೆದ ಅಂಡರ್ - 23 ವಯೋಮಾನದವರ ಐದು ರಾಷ್ಟ್ರಗಳ ಹಾಕಿ ಟೂರ್ನಮೆಂಟ್ ನಲ್ಲಿ ಭಾರತದ ಪುರುಷರ ತಂಡ ಗ್ರೇಟ್ ಬ್ರಿಟನ್ ವಿರುದ್ಧ 1-3 ಅಂತರದ ಸೋಲನುಭವಿಸಿದೆ.
ಹಿಂದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು 5-0 ಅಂತರದಿಂದ ಸೋಲಿಸಿದ್ದ ತಂಡ, ಆಂಗ್ಲರನ್ನು ಹಿಮ್ಮೆಟ್ಟಿಸಲು ವಿಫಲವಾಯಿತು. ಪಂದ್ಯದ ಫಸ್ಟ್ ಕ್ವಾರ್ಟರ್ ಅವಧಿ ಮುಗಿಯುತ್ತಲೇ ಬ್ರಿಟನ್ ನ ಟಿಮ್ ನರ್ಸ್ ಅವರು 19ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು.
34ನೇ ನಿಮಿಷದಲ್ಲಿ ಬ್ರಿಟನ್ ಮತ್ತೊಂದು ಗೋಲ್ ಬಾರಿಸಿ ಅಂತರವನ್ನು ಹೆಚ್ಚಿಸಿಕೊಂಡಿತು. ಡಂಕನ್ ಸ್ಕಾಟ್ ಸಿಡಿಸಿದ ಗೋಲ್ ಆಂಗ್ಲರನ್ನು ಬೆಂಬಲಿಸಿತು. ಅದಾಗಿ 50ನೇ ನಿಮಿಷದಲ್ಲಿ ಬ್ರಿಟನ್ ಪರ ಕ್ಯಾಮೆರಾನ್ ಗೋಲ್ಡ್ ಮೂರನೇ ಗೋಲ್ ಬಾರಿಸಿದರು. ಪಂದ್ಯ ಮುಗಿಯಲು ಇನ್ನೇನು 3 ನಿಮಿಷಗಳಿರುವಾಗ ಭಾರತದ ಪ್ರದೀಪ್ ಸಿಂಗ್ ಗೋಲ್ ದಾಖಲಿಸಿದರಾದರೂ ಅದು ತಂಡದ ನೆರವಿಗೆ ಬರಲಿಲ್ಲ. ಜುಲೈ 16ರಂದು ಭಾರತ ಆತಿಥೇಯ ಬೆಲ್ಜಿಯಂ ಸವಾಲು ಸ್ವೀಕರಿಸಲಿದೆ.
ವನಿತಾ ತಂಡಕ್ಕೆ ಗೆಲುವು: ಭಾನುವಾರವೇ ನಡೆದ ಅಂಡರ್ -23ರ ಹರೆಯದ ಆರು ರಾಷ್ಟ್ರಗಳ ಜೂನಿಯರ್ ವನಿತಾ ವಿಭಾಗದ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನನ್ನು 1-0 ಅಂತರದಿಂದ ಹಿಮ್ಮೆಟ್ಟಿಸಿದೆ. ಮೊದಲ ಪಂದ್ಯದಲ್ಲಿ ಈ ತಂಡ ಐರ್ಲೆಂಡನ್ನು 4-1 ಅಂತರದಿಂದ ಸೋಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications