Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕತಾರ್ ವಿರುದ್ಧ ಅಕ್ಟೋಬರ್‌ 8ಕ್ಕೆ ಭಾರತದ ವಿಶ್ವಕಪ್ ಅರ್ಹತಾ ಪಂದ್ಯ

India vs Qatar World Cup qualifier on October 8

ಮಾರ್ಚ್‌ನಲ್ಲಿ ನಡೆಯಬೇಕಿದ್ದ ಫುಟ್ಬಾಲ್ ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ದಿನಾಂಕವನ್ನು ಮರು ನಿಗದಿಗೊಳಿಸಲಾಗಿದೆ. ಏಷ್ಯನ್ ಚಾಂಪಿಯನ್ ಕತಾರ್ ವಿರುದ್ಧ ಭಾರತ ತಂಡ ಅಕ್ಟೋಬರ್‌ನಲ್ಲಿ ಫಿಫಾ ವಿಶ್ವಕಪ್ 2022 ರ ಅರ್ಹತಾ ಸುತ್ತಿನ ಪಂದ್ಯ ನಡೆಯಲಿದೆ. ಆದರೆ ದುರಾದೃಷ್ಟವಶಾತ್ ಭಾರತ ಈಗಾಗಲೇ ಫಿಫಾ ವಿಶ್ವಕಪ್‌ಗೆ ಆಡುವ ಅರ್ಹತೆಯನ್ನು ಕಳೆದುಕೊಂಡಿದೆ.

ಫಿಫಾ ಅರ್ಹತಾ ಸುತ್ತಿನ ಪಂದ್ಯವನ್ನು ಭಾರತ ಅಕ್ಟೋಬರ್ 8ರಂದು ಕತಾರ್ ವಿರುದ್ಧ ಆಡಲಿದೆ. ಈ ಪಂದ್ಯದ ಬಳಿಕ ಭಾರತೀಯ ಫುಟ್ಬಾಲ್ ತಂಡ ನವೆಂಬರ್ 12ರಂದು ವಿದೇಶಿ ನೆಲದಲ್ಲಿ ಆಡಲಿದೆ. ನವೆಂಬರ್ 17ರಂದು ಬಾಂಗ್ಲಾದೇಶದ ವಿರುದ್ಧ ಮತ್ತೊಂದು ಪಂದ್ಯವನ್ನು ಆಡಲಿದೆ.

ಏಷ್ಯನ್ ಫುಟ್ಬಾಲ್ ಕಾನ್ಫಡರೇಷನ್(ಎಎಫ್‌ಸಿ) ಫಿಫಾದೊಂದಿಗೆ ಸಮಾಲೋಚಿಸಿದ ಬಳಿಕ ಫಿಫಾ ವಿಶ್ವಕಪ್ ಕತಾರ್ 2022 ಮತ್ತು ಎಎಫ್‌ಸಿ ಏಷ್ಯನ್ ಕಪ್ ಚೀನಾ 2023ರ ಏಷ್ಯನ್ ಕ್ವಾಲಿಫಯರ್‌ಗಳಲ್ಲಿ ಎರಡನೇ ಸುತ್ತಿನ ಉಳಿದ ಪಂದ್ಯಗಳಿಗೆ ಪ್ರಸ್ತಾವಿತ ಪಂದ್ಯದ ದಿನಾಂಕಗಳನ್ನು ಘೋಷಿಸಿತು. ಈ ಎಲ್ಲಾ ಪಂದ್ಯಗಳು ಮಾರ್ಚ್‌ನಲ್ಲಿ ನಡೆಯಬೇಕಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.

ಭಾರತ ಫಿಫಾ ವಿಶ್ವಕಪ್‌ಗೆ ಅರ್ಹತೆಗಳಿಸುವ ಸ್ಪರ್ಧೆಯಿಂದ ಹೊರಬಿದ್ದಿದೆ. ಆದರೆ 2023ರ ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ಸ್ಥಾನವನ್ನು ಪಡೆಯುವ ನಿಟ್ಟಿನಲ್ಲಿ ಭಾರತಕ್ಕೆ ಇದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಭಾರತ ಫುಟ್ಬಾಲ್ ತಂಡ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ.

Story first published: Monday, June 8, 2020, 16:15 [IST]
Other articles published on Jun 8, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+