FIFA World Cup Qualifiers ಪಂದ್ಯಗಳಿಗೆ ಟೀಮ್ ಇಂಡಿಯಾ ಪ್ರಕಟ; ಕೊನೆ ಬಾರಿ ಕಣಕ್ಕೆ ಸುನಿಲ್ ಛೆಟ್ರಿ!
ಮೇ 24 ಶುಕ್ರವಾರ, ಬಹು ನಿರೀಕ್ಷಿತ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಭಾರತದ ಹಿರಿಯ ಪುರುಷರ ಫುಟ್‌ಬಾಲ್ ತಂಡ ಪ್ರಕಟವಾಗಿದೆ. ಟೀಮ್ ಇಂಡಿಯಾ ಹೆಡ್ ಕೋಚ್ ಇಗೊರ್ ಸ್ಟಿಮ್ಯಾಕ್ ಅವರು 27 ಆಟಗಾರರ ತಂಡವನ್ನು ಪ್ರಕಟಿಸಿದ್ದಾರೆ.
ಕುವೈತ್ ಮತ್ತು ಕತಾರ್ ವಿರುದ್ಧ ಎರಡು ಅರ್ಹತೆ ಪಂದ್ಯಗಳಿಗೆ ಫಾರ್ವರ್ಡ್ ಆಟಗಾರ ಪಾರ್ಥಿಬ್ ಗೊಗೊಯ್ ಮತ್ತು ಡಿಫೆಂಡರ್ ಮುಹಮ್ಮದ್ ಹಮ್ಮದ್ ಅವರನ್ನು ಗಾಯದ ಕಾರಣ ತಂಡದಿಂದ ಹೊರಗುಳಿದಿರದ್ದಾರೆ.

ಕುವೈತ್ ವಿರುದ್ಧ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಅವರ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಗಿದೆ. ಛೆಟ್ರಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ನಿವೃತ್ತಿ ಘೋಷಿಸಿದ್ದಾರೆ.
ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಿಗಾಗಿ ಭುವನೇಶ್ವರದಲ್ಲಿ ನಡೆಯುತ್ತಿರುವ ಅಭ್ಯಾಸ ಶಿಬಿರದಲ್ಲಿ ಒಟ್ಟು 32 ಆಟಗಾರರು ಇದ್ದರು. ಅವರಲ್ಲಿ ಫುರ್ಬಾ ಲಚೆನ್ಪಾ, ಪಾರ್ಥಿಬ್, ಇಮ್ರಾನ್ ಖಾನ್, ಹಮ್ಮದ್ ಮತ್ತು ಜಿತಿನ್ ಎಂಎಸ್ ಸೇರಿದಂತೆ 5 ಆಟಗಾರರನ್ನು ಈಗ ಶಿಬಿರದಿಂದ ದೂರ ಸರಿದಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವ ತಂಡದ ಹೆಡ್ ಕೋಚ್ ಇಗೊರ್ ಸ್ಟಿಮ್ಯಾಕ್, ಫುರ್ಬಾ ಲಚೆನ್ಪಾ, ಪಾರ್ಥಿಬ್, ಇಮ್ರಾನ್ ಖಾನ್, ಹಮ್ಮದ್ ಮತ್ತು ಜಿತಿನ್ ಎಂಎಸ್ ಈ 5 ಆಟಗಾರರು ತುಂಬಾ ಶ್ರಮಪಟ್ಟು ಆಡುತ್ತಿದ್ದರು. ಅದರಲ್ಲೂ ಜಿತಿನ್ ಮತ್ತು ಪಾರ್ತಿಬ್ ಸ್ಥಾನಕ್ಕೆ ಅವರ ನಡುವೆ ಪೈಪೋಟಿ ಪ್ರಬಲವಾಗಿದೆ.
ಪಾರ್ತಿಬ್ ಮತ್ತು ಹಮ್ಮದ್ ಕೆಲವು ದಿನಗಳ ಹಿಂದೆ ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದು, 14 ದಿನಗಳ ವಿಶ್ರಾಂತಿ ಅಗತ್ಯವಿದೆ. ಇದರೊಂದಿಗೆ ಉಳಿದ ಆಟಗಾರರು ಭುವನೇಶ್ವರದಲ್ಲಿ ತರಬೇತಿ ಮುಂದುವರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಎ ಗುಂಪಿನಲ್ಲಿ ಎರಡು ಪಂದ್ಯಗಳನ್ನು ಆಡಲಿರುವ ಭಾರತ
ಭಾರತ ತಂಡ ಮೇ 29ರಂದು ಕೋಲ್ಕತ್ತಾಗೆ ಪ್ರಯಾಣ ಬೆಳೆಸಲಿದೆ. ಎ ಗುಂಪಿನ ಕೊನೆಯ ಎರಡು ಪಂದ್ಯಗಳಲ್ಲಿ ಭಾರತ ಜೂನ್ 6 ರಂದು ವಿವೇಕಾನಂದ ಯುವ ಭಾರತಿ ಕ್ರಿರಂಗನ್ ನಲ್ಲಿ ಕುವೈತ್ ತಂಡವನ್ನು ಎದುರಿಸಲಿದೆ. ಕುವೈತ್ ವಿರುದ್ಧದ ಪಂದ್ಯದ ನಂತರ ಭಾರತವು ಜೂನ್ 11 ರಂದು ಕತಾರ್ ವಿರುದ್ಧ ಪಂದ್ಯವಾಡಲಿದೆ.
ಕುವೈತ್ ವಿರುದ್ಧದ ಪಂದ್ಯವು ಸುನಿಕ್ ಛೆಟ್ರಿ ಅವರ 19 ವರ್ಷಗಳ ಅದ್ಭುತ ಫುಟ್‌ಬಾಲ್ ವೃತ್ತಿಜೀವನವನ್ನು ಕೊನೆಗೊಳಿಸಲಿದೆ. ಛೆಟ್ರಿ 94 ಸ್ಟ್ರೈಕ್‌ಗಳೊಂದಿಗೆ ಭಾರತದ ಅಗ್ರ ಗೋಲ್ ಸ್ಕೋರರ್ ಆಗಿದ್ದಾರೆ. ಜೊತೆಗೆ ಭಾರತದ ಪರ ಅತಿ ಹೆಚ್ಚು (150) ಪಂದ್ಯಗಳನ್ನು ಆಡಿರುವ ದಾಖಲೆಯೊಂದಿಗೆ ಕೊನೆ ಬಾರಿಗೆ ಮೈದಾನದಲ್ಲಿ ಸುನಿಲ್ ಛೆಟ್ರಿ ಕಾಣಿಸಿಕೊಳ್ಳಲಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ ಸಕ್ರಿಯ ಆಟಗಾರರ ಪೈಕಿ ಗೋಲ್ ಗಳಿಸಿರುವವರ ಪಟ್ಟಿಯಲ್ಲಿ ಛೆಟ್ರಿ 3ನೇ ಸ್ಥಾನದಲ್ಲಿದ್ದಾರೆ. ಅವರು ಪ್ರಸ್ತುತ ಅಂತರರಾಷ್ಟ್ರೀಯ ಗೋಲುಗಳ ಸಾರ್ವಕಾಲಿಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
ಟೀಮ್ ಇಂಡಿಯಾ ಫುಟ್ಬಾಲ್ ತಂಡ
ಗೋಲ್‌ಕೀಪರ್ಸ್: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ವಿಶಾಲ್ ಕೈತ್.
ಡಿಫೆಂಡರ್ಸ್: ಅಮಿ ರಾನವಾಡೆ, ಅನ್ವರ್ ಅಲಿ, ಜೈ ಗುಪ್ತಾ, ಲಾಲ್ಚುಂಗ್ನುಂಗಾ, ಮೆಹ್ತಾಬ್ ಸಿಂಗ್, ನರೇಂದ್ರ, ನಿಖಿಲ್ ಪೂಜಾರಿ, ರಾಹುಲ್ ಭೇಕೆ, ಸುಭಾಶಿಶ್ ಬೋಸ್.
ಮಿಡ್‌ಫೀಲ್ಡರ್ಸ್: ಅನಿರುದ್ಧ್ ಥಾಪಾ, ಬ್ರಾಂಡನ್ ಫೆರ್ನಾಂಡಿಸ್, ಎಡ್ಮಂಡ್ ಲಾಲ್ರಿಂಡಿಕಾ, ಜಾಕ್ಸನ್ ಸಿಂಗ್ ತೌನೊಜಮ್, ಲಾಲಿಯಾನ್‌ಜುವಾಲಾ ಚಾಂಗ್ಟೆ, ಲಿಸ್ಟನ್ ಕೊಲಾಕೊ, ಮಹೇಶ್ ಸಿಂಗ್ ನೌರೆಮ್, ನಂದಕುಮಾರ್ ಸೇಕರ್, ಸಹಲ್ ಅಬ್ದುಲ್ ಸಮದ್, ಸುರೇಶ್ ಸಿಂಗ್ ವಾಂಗ್ಜಾಮ್.
ಫಾರ್ವರ್ಡ್: ಡೇವಿಡ್ ಲಾಲ್‌ಲನ್‌ಸಂಗ, ಮನ್ವಿರ್ ಸಿಂಗ್, ರಹೀಮ್ ಅಲಿ, ಸುನಿಲ್ ಛೆಟ್ರಿ, ವಿಕ್ರಮ್ ಪ್ರತಾಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications