ಐಎಸ್‌ಎಲ್ Live Score: ಕೇರಳ ಬ್ಲಾಸ್ಟರ್ಸ್‌ಗೆ ಎಫ್‌ಸಿ ಪುಣೆ ಸಿಟಿ ಸವಾಲು

ಕೊಚ್ಚಿ, ಡಿಸೆಂಬರ್ 7: ಕೇರಳದ ಕೊಚ್ಚಿಯಲ್ಲಿರುವ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಇಂದು (ಡಿಸೆಂಬರ್ 7) ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ಎಫ್‌ಸಿ ಪುಣೆ ಸಿಟಿ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದಿನ ಪಂದ್ಯದಲ್ಲಿ ಕೇರಳ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಅಂಕಪಟ್ಟಿಯನ್ನು ಗಮನಿಸಿದರೂ ಅದರಲ್ಲಿ ಕೇರಳ ಬ್ಲಾಸ್ಟರ್ಸ್, ಪುಣೆ ಸಿಟಿಗಿಂತ ಕೊಂಚ ಮೇಲ್ ಸ್ಥರದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ ಪುಣೆ ಗೆದ್ದಿರೋದು ಕೇವಲ ಒಂದೇ ಪಂದ್ಯ. ಇನ್ನು 2 ಪಂದ್ಯಗಳನ್ನು ಡ್ರಾ ಮಾಡಿಕೊಂಡು, 7ರಲ್ಲಿ ಸೋತಿದೆ.
ಇತ್ತ ಕೇರಳ ಬ್ಲಾಸ್ಟರ್ಸ್ ಕೂಡ 10ರಲ್ಲಿ ಗೆದ್ದಿರೋದು ಒಂದೇ ಪಂದ್ಯ. ಆದರೆ ಉಳಿದ ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡು, ಮೂರರಲ್ಲಿ ಸೋಲು ಕಂಡಿದೆ. ಹೀಗಾಗಿ ಕೇರಳ 9 ಅಂಕಗಳೊಂದಿಗೆ ಅಂಕಪಟ್ಟಿಯ 7ನೇ ಸ್ಥಾನದಲ್ಲಿದೆ. 5 ಅಂಕ ಗಳಿಸಿರುವ ಪುಣೆ 9ನೇ ಸ್ಥಾನದಲ್ಲಿದೆ. ಬೆಂಗಳೂರು ಅಗ್ರ ಸ್ಥಾನದಲ್ಲಿದ್ದರೆ, ಡೆಲ್ಲಿ ಕೊನೆಯ ಸ್ಥಾನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications