Indian Super League : ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಹುಡುಗರ ಅಬ್ಬರ: ಗೋವಾ ವಿರುದ್ಧ 3-1 ಗೋಲುಗಳ ಭರ್ಜರಿ ಜಯ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಗುರುವಾರ ಫೆಬ್ರವರಿ 23ರಂದು ನಡೆದ ಪಂದ್ಯದಲ್ಲಿ ಎಫ್‌ಸಿ ಗೋವಾ ವಿರುದ್ಧ 3-1 ಗೋಲುಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಸತತ 8ನೇ ಗೆಲುವನ್ನು ದಾಖಲಿಸಿತು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಗೋವಾ ವಿರುದ್ಧ ಅಬ್ಬರಿಸಿತು. ವೇಗದ ಆರಂಭ ಪಡೆದ ಪಂದ್ಯದಲ್ಲಿ 6ನೇ ನಿಮಿಷದಲ್ಲೇ ಶಿವಶಕ್ತಿ ನಾರಾಯಣ್ ಮೊದಲನೇ ಗೋಲು ಗಳಿಸುವ ಮೂಲಕ ಬೆಂಗಳೂರಿಗೆ 1-0 ಮುನ್ನಡೆ ತಂದುಕೊಟ್ಟರು. ಆದರೆ, 33ನೇ ನಿಮಿಷದಲ್ಲಿ ಎಫ್‌ಸಿ ಗೋವಾದ ಇಕರ್ ಗುರೊಟ್ಕ್ಸೆನಾ ಗೋಲು ಗಳಿಸುವ ಮೂಲಕ 1-1 ಗೋಲುಗಳನ್ನು ಸಮಗೊಳಿಸಿದರು.
ದ್ವಿತೀಯಾರ್ಧದಲ್ಲಿ, ಎರಡೂ ತಂಡಗಳು ಗೋಲು ಗಳಿಸಲು ಸಾಕಷ್ಟು ಹೋರಾಟ ನಡೆಸಿದವು. ಆದರೆ 76ನೇ ನಿಮಿಷದಲ್ಲಿ ಶಿವಶಕ್ತಿ ನಾರಾಯಾಣ್ ಪಂದ್ಯದಲ್ಲಿ ತಮ್ಮ ಎರಡನೇ ಗೋಲು ಗಳಿಸುವ ಮೂಲಕ ಅಂತರವನ್ನು 2-1ಕ್ಕೆ ಹೆಚ್ಚಿಸಿದರು. 81ನೇ ನಿಮಿಷದಲ್ಲಿ ಪಾಬ್ಲೋ ಪೆರೆಜ್ ಬೆಂಗಳೂರು ಎಫ್‌ಸಿ ತಂಡದ ಪರವಾಗಿ ಮೂರನೇ ಗೋಲು ದಾಖಲಿಸುವ ಮೂಲಕ ಬೆಂಗಳೂರು ಎಫ್‌ಸಿ ಭರ್ಜರಿ ಜಯವನ್ನು ಖಚಿತಪಡಿಸಿದರು.

ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು ಎಫ್‌ಸಿ
ಎಫ್‌ಸಿ ಗೋವಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದು ಪ್ಲೇ ಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಬೆಂಗಳೂರು ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಬೇಕು ಎಂದುಕೊಂಡಿದ್ದ ಎಫ್‌ಸಿ ಗೋವಾ ಈ ಸೋಲಿನೊಂದಿಗೆ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.
ಬೆಂಗಳೂರು ಎಫಿಸಿ ಮತ್ತು ಎಫ್‌ಸಿ ಗೋವಾ ಇಂಡಿಯನ್ ಸೂಪರ್ ಲೀಗ್‌ನಲ್ಲಿ 12 ಬಾರಿ ಮುಖಾಮುಖಿಯಾಗಿದ್ದು ಬೆಂಗಳೂರು ಎಫ್‌ಸಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ, ಎಫ್‌ಸಿ ಗೋವಾ ಮೂರು ಬಾರಿ ಗೆದ್ದಿದೆ. ಅದರಲ್ಲೂ ಕಂಠೀರವ ಕ್ರೀಡಾಂಗಣದಲ್ಲಿ ಎಫ್‌ಸಿ ಗೋವಾ ಆಡಿರುವ ಯಾವ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಗೋವಾ ಸೋತ ಬಳಿಕ ಒಡಿಶಾ ಎಫ್‌ಸಿ ಪ್ಲೇ ಆಪ್‌ಗೆ ಅರ್ಹತೆ ಪಡೆದುಕೊಂಡಿದೆ.
ಬೆಂಗಳೂರು ಎಫ್‌ಸಿ ಕಳೆದ ಪಂದ್ಯದಲ್ಲಿ ಕೇರಳ ಬ್ಲ್ಯಾಸ್ಟರ್ಸ್ ವಿರುದ್ಧ 2-1 ಗೋಲುಗಳ ರೋಚಕ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೋವಾವನ್ನು ಮಣಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications