Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ISL: ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್‌ಸಿ-ಕೇರಳ ಬ್ಲಾಸ್ಟರ್ಸ್‌ ಅಭಿಮಾನಿಗಳ ಮಧ್ಯೆ ಗಲಾಟೆ

Indian Super League : Bengaluru FC Beat Kerala blasterS 1-0 To Secure Fit Spots In Points Table

ಇಂಡಿಯನ್ ಸೂಪರ್ ಲೀಗ್‌ನ ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್‌ ನಡುವಿನ ಪಂದ್ಯದ ವೇಳೆ ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್‌ಸಿ ತಂಡ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಸೆಣೆಸಿತು. ಎರಡೂ ತಂಡದ ಅಭಿಮಾನಿಗಳು ತಮ್ಮ ತಂಡವನ್ನು ಬೆಂಬಲಿಸಲು ಕಿಕ್ಕಿರಿದು ಸೇರಿದ್ದರು. ಪಂದ್ಯ ನಡೆಯುವ ವೇಳೆ ಕೇರಳ ಬ್ಲಾಸ್ಟರ್ಸ್ ತಂಡದ ಅಭಿಮಾನಿಗಳು ಪುಂಡಾಟಿಕೆ ಮಾಡಿದ್ದಾರೆ.

ಬೆಂಗಳೂರು ಎಫ್‌ಸಿ ಅಭಿಮಾನಿಗೆ ಹೊಡೆಯುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಂತರ ಬೆಂಗಳೂರು ಎಫ್‌ಸಿ ಅಭಿಮಾನಿಗಳು ಕೂಡ ತಿರುಗಿಬಿದ್ದಿದ್ದು ಉಭಯ ತಂಡಗಳ ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ. ಅಭಿಮಾನಿಗಳ ವರ್ತನೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ.

ಈ ರೋಚಕ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಕೇರಳ ಬ್ಲಾಸ್ಟರ್ಸ್‌ ವಿರುದ್ಧ 1-0 ಅಂತರದಲ್ಲಿ ಗೆದ್ದು ಬೀಗಿದೆ. ಬೆಂಗಳೂರು ಎಫ್‌ಸಿ ಗೋಲು ಗಳಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಕೇರಳ ಬ್ಲಾಸ್ಟರ್ಸ್ ತಂಡವನ್ನು ಮಣಿಸುವ ಮೂಲಕ ಬೆಂಗಳೂರು ಎಫ್‌ಸಿ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Indian Super League : Bengaluru FC Beat Kerala blasterS 1-0 To Secure Fit Spots In Points Table

ಏಳನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿತ

ಬೆಂಗಳೂರು ಎಫ್‌ಸಿ ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ನಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲುವಿನ ಸರಣಿಯನ್ನು ಮುಂದುವರೆಸಿದೆ. ಸತತ 6 ಬಾರಿ ಅವರು ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯಗಳಿಸಿದ್ದಾರೆ.

ಬೆಂಗಳೂರು ಎಫ್‌ಸಿಯ ರಾಯ್‌ ಕೃಷ್ಣ ಈ ಋತುವಿನ 5ನೇ ಗೋಲು ಗಳಿಸುವ ಮೂಲಕ ಬೆಂಗಳೂರು ಎಫ್‌ಸಿ ತಂಡಕ್ಕೆ 1-0 ಗೋಲುಗಳ ರೋಚಕ ಜಯ ತಂದುಕೊಟ್ಟರು.ಹೀರೋ ಐಎಸ್‌ಎಲ್ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದ ಬೆಂಗಳೂರು ಎಫ್‌ಸಿ 5ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಅವರು ಗೋವಾ ಮತ್ತು ಒಡಿಶಾ ತಂಡಗಳನ್ನು ಹಿಂದಿಕ್ಕಿದ್ದಾರೆ. ಈ ಗೆಲುವಿನ ಮೂಲಕ ಬೆಂಗಳೂರು ಎಫ್‌ಸಿ ಫ್ಲೇ ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಅಭಿಮಾನಿಗಳ ನಡುವೆ ಗಲಾಟೆ

ಎರಡೂ ತಂಡಗಳನ್ನು ಉತ್ತೇಜಿಸಲು ಉಭಯ ತಂಡಗಳ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಮೊದಲಾರ್ಧದಲ್ಲಿ ಬೆಂಗಳೂರು ಎಫ್‌ಸಿ ತಂಡ ಗೋಲು ಗಳಿಸುವಲ್ಲಿ ಸಫಲವಾಯಿತು. ಹರ್ನಾಂಡೆಜ್ ಪಾಸ್ ಮಾಡಿದ ಚೆಂಡನ್ನು ರಾಯ್‌ ಕೃಷ್ಣ ಸ್ಲೈಡ್ ಮಾಡುವ ಮೂಲಕ ಗೋಲು ಗಳಿಸಿ ಬೆಂಗಳೂರು ಎಫ್‌ಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ದ್ವಿತೀಯಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ಆಕ್ರಮಣಕಾರಿ ಆಟವಾಡಿತು. ಆದರೆ, ಬೆಂಗಳೂರು ಎಫ್‌ಸಿ ಭದ್ರಕೋಟೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಕೇರಳ ಬ್ಲಾಸ್ಟರ್ಸ್ ವಿರುದ್ಧ ಸುದೀರ್ಘ ಗೆಲುವಿನ ಸರಣಿಯನ್ನು ಬೆಂಗಳೂರು ಎಫ್‌ಸಿ ಹೊಂದಿದೆ. ಬೆಂಗಳೂರು ಎಫ್‌ಸಿ ತಮ್ಮ ಮುಂದಿನ ಪಂದ್ಯವನ್ನು ಫೆಬ್ರವರಿ 15ರಂದು ಮುಂಬೈ ಸಿಟಿ ಎಫ್‌ಸಿ ವಿರುದ್ಧ ಆಡಲಿದ್ದಾರೆ.

ಪಂದ್ಯದ ವೇಳೆ ಅಭಿಮಾನಿಗಳು ಹೊಡೆದುಕೊಂಡಿದ್ದು ಮಾತ್ರ ಆಟಕ್ಕೆ ಕಪ್ಪುಚುಕ್ಕೆಯಾಗಿದೆ.

Story first published: Sunday, February 12, 2023, 9:55 [IST]
Other articles published on Feb 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+