ಫುಟ್ಬಾಲ್ ಪಂದ್ಯದಲ್ಲಿ ಕ್ಯಾಮರೂನ್ ಸೋಲಿಸಿದ ಭಾರತದ ಕಿರಿಯರು

ಇಸ್ತಾನ್ಬುಲ್, ಆಗಸ್ಟ್ 23: ಟರ್ಕಿಯ ಇನ್ತಾನ್ಬುಲ್ ನಲ್ಲಿ ಬುಧವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತದ ಅಂಡರ್-16 ಫುಟ್ಬಾಲ್ ತಂಡ ಕ್ಯಾಮರೂನ್ ಸೋಲಿಸಿದೆ. ಕ್ಯಾಮರೂನ್ ಎದುರು ಭಾರತ ಕಿರಿಯರ ತಂಡ 2-1 ಅಂತರದ ಗೆಲುವು ದಾಖಲಿಸಿತು.
ಭಾರತದ ರಿಡ್ಜ್ ಮೆಲ್ವಿನ್ ಅವರು ಪಂದ್ಯಾರಂಭಗೊಳ್ಳುತ್ತಲೇ ಗೋಲ್ ಬಾರಿಸಿ ತಂಡದ ಪರ ಖಾತೆ ತೆರೆದರು. ಮೆಲ್ವಿನ್ ಅವರಿಂದ 1ನೇ ನಿಮಿಷದಲ್ಲಿ ಗೋಲ್ ದಾಖಲಾಯಿತು. ಅದಾಗಿ ರೋಹಿತ್ ದಾನು ಅವರು 20ನೇ ನಿಮಿಷದಲ್ಲಿ ಮತ್ತೊಂದು ಗೋಲ್ ಬಾರಿಸಿ ಭಾರತಕ್ಕೆ 2-1ರ ಮುನ್ನಡೆ ಕೊಟ್ಟರು.
ಏಷ್ಯನ್ ಗೇಮ್ಸ್ 2018 ವಿಶೇಷ ಪುಟಕ್ಕೆ ಕ್ಲಿಕ್ ಮಾಡಿ
ಪಂದ್ಯ ಶುರುವಾಗಿ 30 ಸೆಕೆಂಡ್ ಗಳ ಒಳಗೆ ರಿಡ್ಜ್ ಮೊದಲ ಗೋಲ್ ದಾಖಲಿಸಿ ಗಮನ ಸೆಳೆದರು. ಮತ್ತೆ 4ನೇ ನಿಮಿಷದಲ್ಲಿ ಭಾರತದ ವಿಕ್ರಮ್ ಅವರು ಗೋಲ್ ಬಾರಿಸುವ ಪ್ರಯತ್ನ ಮಾಡಿದರು. ಆದರೆ ಕ್ಯಾಮರೂನ್ ಗೋಲ್ ಕೀಪರ್ ಗೋಲ್ ಗೆ ತಡೆ ನೀಡಿದರು.
ಪಂದ್ಯದುದ್ದಕ್ಕೂ ಕ್ಯಾಮರೂನ್ ಗೋಲ್ ಬಾರಿಸಲು ಮಾಡಿದ ಪ್ರಯತ್ನಕ್ಕೆಲ್ಲಾ ಭಾರತ ಪ್ರತಿರೋಧ ನೀಡುತ್ತಲೇ ಬಂತು. ಆದರೆ ಪಂದ್ಯದ ದ್ವಿತೀಯಾರ್ಧದಲ್ಲಿ (63ನೇ ನಿಮಿಷ) ಕ್ಯಾಮರೂನ್ ಒಂದು ಗೋಲ್ ಬಾರಿಸಿ ಭಾರತ ನೀಡಿದ್ದ ಅಂತರವನ್ನು ಕಿರುದುಗೊಳಿಸಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications