Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಛೆಟ್ರಿ ಗೋಲ್ ದಾಖಲೆ: ಇಂಟರ್ ಕಾಂಟಿನೆಂಟಲ್ ಕಪ್ ಭಾರತದ ಮಡಿಲಿಗೆ

ಇಂಟರ್ ಕಾಂಟಿನೆಂಟಲ್ ಕಪ್ ಭಾರತದ ಮಡಿಲಿಗೆ | Oneindia Kannada
Intercontinental Cup Final: Sunil Chhetri’s brace gives India title

ಮುಂಬೈ, ಜೂ.10: ನಾಯಕ ಸುನಿಲ್ ಛೆಟ್ರಿ ಸಾಹಸದೊಂದಿಗೆ ಭಾನುವಾರ ಮುಂಬೈಯ ಫುಟ್ಬಾಲ್ ಅರೇನಾದಲ್ಲಿ ನಡೆದ ಇಂಟರ್ ಕಾಂಟಿನೆಂಟಲ್ ಕಪ್ ಪುಟ್ಬಾಲ್ ಫೈನಲ್ ಪಂದ್ಯದಲ್ಲಿ ಭಾರತ, ಕೀನ್ಯಾ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿದೆ.

ಎರಡೂ ಗೋಲುಗಳೂ ಛೆಟ್ರಿಯಿಂದಲೇ ಸಿಡಿದವು. 8ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಭಾರತ ಪರ ಖಾತೆ ತೆರೆದ ನಾಯಕ ಛೆಟ್ರಿ 29ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಪಂದ್ಯದ ಮೊದಲಾರ್ಧದಲ್ಲೇ ಭಾರತ 2-0 ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲೂ ಉತ್ತಮ ಪ್ರದರ್ಶನ ನೀಡಿದ ಭಾರತ ಎದುರಾಳಿಯಿಂದ ಗೋಲ್ ದಾಖಲಾಗದಂತೆ ನೋಡಿಕೊಂಡಿತು. ಅಂತಿಮವಾಗಿ ಭಾರತ ಕೀನ್ಯಾ ವಿರುದ್ಧ ಗೆಲುವನ್ನು ಸಂಭ್ರಮಿಸಿತು.

ಈ ಪಂದ್ಯದಲ್ಲಿ ಎರಡು ಗೋಲು ಸಿಡಿಸಿದ ಛೆಟ್ರಿ ಮತ್ತೊಂದು ದಾಖಲೆ ಬರೆಯುವುದರೊಂದಿಗೆ ಭಾರತದ ಹೆಮ್ಮೆಗೆ ಕಾರಣವಾದರು. ಒಟ್ಟು 64 ಗೋಲ್ ದಾಖಲೆಯೊಂದಿಗೆ ಛೆಟ್ರಿ ಅಧಿಕ ಗೋಲ್ ಸಿಡಿಸಿದ ವಿಶ್ವದ 2ನೇ ಆಟಗಾರನಾಗಿ ಅರ್ಜೆಂಟೀನಾ ಆಟಗಾರ ಲಿಯೋನೆಲ್ ಮೆಸ್ಸಿಗೆ ಸರಿ ಸಮಾನ ಸಾಧನೆ ಮೆರೆದಿದ್ದಾರೆ.

ವಿಶ್ವದ ಅಧಿಕ ಗೋಲ್ ಸಾಧಕರಲ್ಲಿ 81 ಗೋಲ್ ಗಳೊಂದಿಗೆ ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಮೊದಲ ಸ್ಥಾನದಲ್ಲಿದ್ದರೆ, ಮೆಸ್ಸಿ ಮತ್ತು ಛೆಟ್ರಿ ತಲಾ 64 ಗೋಲ್ ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

Story first published: Monday, June 11, 2018, 10:11 [IST]
Other articles published on Jun 11, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+