Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Football: ಇಂಟರ್‌ಕಾಂಟಿನೆಂಟಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಭಾರತ ಫುಟ್ಬಾಲ್ ತಂಡ

ಇಂಟರ್‌ಕಾಂಟಿನೆಂಟರ್ ಕಪ್‌ನ ಫೈನಲ್ ಪಂದ್ಯದಲ್ಲಿ ಗೆದ್ದು ಭಾರತ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಭಾನುವಾರ ಭುವನೇಶ್ವರದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಲೆಬನಾನ್ ವಿರುದ್ಧ 2-0 ಅಂತರದ ಜಯ ಗಳಿಸಿದ ಭಾರತ ತಂಡ ಇಂಟರ್‌ಕಾಂಟಿನೆಂಟಲ್ ಕಪ್ ಅನ್ನು ಗೆದ್ದುಕೊಂಡಿದೆ. ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ತಮ್ಮ 87 ನೇ ಅಂತಾರಾಷ್ಟ್ರೀಯ ಗೋಲು ಗಳಿಸುವ ಭಾರತದ ಈ ವಿಏಷ ಗೆಲುವಿನಲ್ಲಿ ಮಿಂಚಿದ್ದಾರೆ.

ಲಾಲಿಯಾನ್ಜುವಾಲಾ ಚಾಂಗ್ಟೆ ಭಾರತದ ಪರವಾಗಿ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡವನ್ನು ಸುಸ್ಥಿತಿಯಲ್ಲಿಟ್ಟರು. ಇದು 2018 ರ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಬಳಿಕಈ ಟೂರ್ನಿಯಲ್ಲಿ ಭಾರತಕ್ಕೆ ಗೆದ್ದುಕೊಂಡ ಎರಡನೇ ಪ್ರಶಸ್ತಿಯಾಘಿದೆ. ಕೊರಿಯಾ 2019 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು.

Intercontinental Cup: Indian Football Team won final match against Lebanon Clinch Title

ಅಂದಹಾಗೆ ಈ ಪಂದ್ಯದಲ್ಲಿ ಭಾರತದ ಗೆಲುವು ಸುಲಭವಾಗಿರಲಿಲ್ಲ. ಮೊದಲಾರ್ಧದಲ್ಲಿ ಲೆಬನಾನ್ ತಂಡ ಭಾರತಕ್ಕೆ ಅದ್ಭುತವಾಗಿ ಪೈಪೋಟಿ ನೀಡಿತ್ತು. ಈ ಅವಧಿಯಲ್ಲಿ ಭಾರತ ತಂಡ ಒಂದೂ ಗೋಲು ದಾಖಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ 0-0 ಅಂತರದಿಂದ ಮೊದಲಾರ್ಧ ಮುಕ್ತಾಯವಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ಭಾರತ ತಂಡ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿ ಮೇಲುಗೈ ಸಾಧಿಸಿದೆ.

ದ್ವಿತಿಯಾರ್ಧದಲ್ಲಿಯೂ ಮೊದಲಿಗೆ ಎರಡು ತಂಡಗಳಿಂದಲೂ ಅದ್ಭುತ ಹೋರಾಟ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಭಾರತ ತಂಡದ ಅನುಭವಿ ಆಟಗಾರ ಹಾಗೂ ನಾಯಕ ಸುನಿಲ್ ಛೇಟ್ರಿ ತಂಡಕ್ಕೆ ಮೊದಲ ಗೋಲು ಬಾರಿಸಿದರು. ನಿರ್ಣಾಯಕ ಸಂದರ್ಭದಲ್ಲಿ ಭಾರತದ ನಾಯಕ ಮತ್ತೊಮ್ಮೆ ಮಿಂಚಿನ ಪ್ರದರ್ಶನ ನೀಡಿ ಭಾರತ ತಂಡದ ಮೇಲುಗೈಗೆ ಕಾರಣವಾದರು. ಈ ಮೂಲಕ ಭಾರತ 1-0 ಅಂತರದಿಂದ ಮೇಲುಗೈ ಸಾಧಿಸಲು ಯಶಸ್ವಿಯಾಯಿತು.

ಈ ಗೋಲಿನ ಬಳಿಕ ಭಾರತದ ಆಟ ಮತ್ತಷ್ಟು ಆಕ್ರಮಣಕಾರಿಯಾಯಿತು. ಹೀಗಾಗಿ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿತು. ಇದರ ಪರಿಣಾಮವಾಗಿ ಮೊದಲ ಗೋಲು ಬಾರಿಸಿ 20 ನಿಮಿಷದ ಅಂತರದಲ್ಲಿ ಭಾರತ ಮತ್ತೊಂದು ಗೋಲು ಬಾರಿಸಿತು. ಲಾಲಿಯಾನ್ಜುವಾಲಾ ಚಾಂಗ್ಟೆ ಮತ್ತೊಮ್ಮೆ ಚೆಂಡನ್ನು ಗೋಲು ಪೋಸ್ಟ್‌ನ ಒಳಕ್ಕೆ ತಳ್ಳುವಲ್ಲಿ ಯಶಸ್ವಿಯಾರು. ಈ ಮೂಲಕ ಭಾರತ ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Story first published: Sunday, June 18, 2023, 22:24 [IST]
Other articles published on Jun 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+