ಐಎಸ್‌ಎಲ್: ಗೋಲಿಲ್ಲದೆ ಡೆಲ್ಲಿ ಡೈನಮೋಸ್ vs ಚೆನ್ನೈಯಿನ್ ಪಂದ್ಯ ಸಮಬಲ

ನವದೆಹಲಿ, ಅಕ್ಟೋಬರ್ 23: ಫ್ರಾನ್ಸಿಸ್ಕೋ ಡೊರಾನ್ಸೊರೊ ಇಂಡಿಯನ್ ಸೂಪರ್ ಲೀಗ್ ನ 16ನೇ ಪಂದ್ಯದ ಹೀರೋ ಎನಿಸಿದರು. ಡೆಲ್ಲಿ ಹಾಗೂ ಚೆನ್ನೈ ನಡುವಿನ ಪಂದ್ಯ ಗೋಲಿಲ್ಲದೆ (0-0) ಕೊನೆಗೊಂಡಿತು. ಚೆನ್ನೈ ತಂಡಕ್ಕೆ ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಉತ್ತಮ ಅವಕಾಶ ಇದ್ದಿತ್ತು. ಆದರೆ ಫ್ರಾನ್ಸಿಸ್ಕೋ ಡೊರಾನ್ಸೊರೊ ಎಲ್ಲ ಅವಕಾಶವನ್ನು ಹುಸಿಗೊಳಿಸಿದರು.
ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಫ್ರಾನ್ಸಿಸ್ಕೋ ಡೊರಾನ್ಸೊರೊ ಇಂಡಿಯನ್ ಸೂಪರ್ ಲೀಗ್ ನ 16ನೇ ಪಂದ್ಯದ ಹೀರೋ ಎನಿಸಿದರು. ಡೆಲ್ಲಿ ಹಾಗೂ ಚೆನ್ನೈ ನಡುವಿನ ಪಂದ್ಯ ಗೋಲಿಲ್ಲದೆ (0-0) ಕೊನೆಗೊಂಡಿತು. ಚೆನ್ನೈ ತಂಡಕ್ಕೆ ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಉತ್ತಮ ಅವಕಾಶ ಇದ್ದಿತ್ತು. ಆದರೆ ಫ್ರಾನ್ಸಿಸ್ಕೋ ಡೊರಾನ್ಸೊರೊ ಎಲ್ಲ ಅವಕಾಶವನ್ನು ಹುಸಿಗೊಳಿಸಿದರು.
ಈ ಫಲಿತಾಂಶ ಡೆಲ್ಲಿ ತಂಡಕ್ಕೆ ಸ್ವಲ್ಪಮಟ್ಟಿನ ಖುಷಿ ತಂದಿರಬಹುದು. ಆದರೆ ಚೆನ್ನೈ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವುದು ತಂಡಕ್ಕೆ ನಿರಾಸೆಯನ್ನುಂಟುಮಾಡಿರುವುದು ಸಹಜ. ಹಾಲಿ ಚಾಂಪಿಯನ್ ಚೆನ್ನೈ ಆಡಿರುವ ನಾಲ್ಕನೇ ಪಂದ್ಯದಲ್ಲಿ ಒಂದು ಅಂಕಕ್ಕೆ ತೃಪ್ತಿ ಪಟ್ಟಿತು.
ಎರಡೂ ತಂಡಗಳಿಗೂ ಜಯದ ಅನಿವಾರ್ಯತೆ ಇದ್ದಾಗ ಅಲ್ಲಿ ಗೋಲ್‌ಕೀಪರ್‌ಗಳು ಹೆಚ್ಚು ಕಾರ್ಯಪ್ರವೃತ್ತರಾಗಿರುತ್ತಾರೆ ಎಂಬುದಕ್ಕೆ ಡೆಲ್ಲಿ ಹಾಗೂ ಚೆನ್ನೈ ನಡುವಿನ ಪಂದ್ಯದ ಮೊದಲಾರ್ಧ ಸಾಕ್ಷಿಯಾಯಿತು. 42 ಹಾಗೂ 43ನೇ ನಿಮಿಷಗಳಲ್ಲಿ ಡೆಲ್ಲಿ ತಂಡಕ್ಕೆ ಗೋಲು ಗಳಿಸಲು ಉತ್ತಮ ಅವಕಾಶವಿದ್ದಿತ್ತು. ಆದರೆ ಕರಣ್‌ಜಿತ್ ಸಿಂಗ್ ಅದಕ್ಕೆ ಅವಕಾಶ ನೀಡಲಿಲ್ಲ. ಚೆನ್ನೈನ ಗೋಲಿನ ಅವಕಾಶಕ್ಕೂ ಫ್ರಾನ್ಸಿಸ್ಕೋ ಡೊರಾನ್ಸೊರೊ ತಣ್ಣೀರೆರಚಿದರು.
ಪಂದ್ಯದ ಆರಂಭದಲ್ಲಿ ಕುತೂಹಲದ ಕ್ಷಣಗಳಿಗೆ ಅವಕಾಶ ಇರಲಿಲ್ಲ. ಆದರೆ ಚೆನ್ನೈ ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತಲ್ಲದೆ ಆಕ್ರಮಣಕಾರಿ ಆಟಕ್ಕೆ ಮನ ಮಾಡಿತು. ಡೆಲ್ಲಿಯ ಡಿಫೆನ್ಸ್ ವಿಭಾಗದ ಮೇಲೆ ಒತ್ತಡ ಹೇರಲು ಯತ್ನಿಸಿದರೂ ಗೋಲು ಗಳಿಸುವ ಹಂತ ತಲುಪಲಿಲ್ಲ. ಎಂದಿನಂತೆ ಡೆಲ್ಲಿ ಡೈನಮೋಸ್ ತಂಡಕ್ಕೆ ಗೋಲು ಗಳಿಸಲು ಉತ್ತಮ ಅವಕಾಶ ಸಿಕ್ಕರೂ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ತಂಡ ವಿಲವಾಯಿತು. ಆಂಡ್ರೆಜಾ ಕಲುಜೆರೋವಿಕ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದರು.
ಡೆಲ್ಲಿ ಡೈನಮೋಸ್ (4-2-3-1): ಫ್ರಾನ್ಸಿಸ್ಕೋ ಡೊರೊನ್ಸೊರೊ, ಪ್ರೀತಮ್ ಕೋಟಾಲ್, ಮಾರ್ಟಿ ಕ್ರೆಸ್ಪಿ, ರಾಣಾ ಘರಾಮಿ, ನಾರಾಯಣ್ ದಾಸ್, ವಿನೀತ್ ರಾಯ್, ಗಿಯಾನಿ, ಝುವೇವರ್ಲೂನ್, ರೋಮಿಯೋ ಫೆರ್ನಾಂಡಿಸ್, ರೆನೆ ಮಿಹೇಲಿಕ್, ಲಲ್ಲಿಯಾಂಜೌಲಾ ಚಾಂಗ್ಟೆ, ಆಂಡ್ರಿಜಾ ಕಲ್ಡುಜೆರೋವಿಕ್.
ಚೆನೈಯಿನ್ ಎಫ್.ಸಿ (4-2-3-1): ಕರಣ್‌ಜೀತ್ ಸಿಂಗ್, ಇನಿಗೊ ಕಾಲ್ಡೆರಾನ್, ಎಲಿ ಸಬಿಯಾ, ಮೈಲ್ಸನ್ ಅಲ್ವೆಸ್, ಜೆರಿ ಲಲ್ರಿನ್ಝುವಾಲಾ, ಅನಿರುದ್ಧ್ ಥಾಪಾ, ಫ್ರಾನ್ಸಿಸ್ಕೊ ಫೆರ್ನಾಂಡಿಸ್, ಥೋಯಿ ಸಿಂಗ್, ರಾಫೆಲ್ ಅಗಸ್ಟೊ, ಗ್ರೆಗೊರಿ ನೆಲ್ಸನ್, ಜೆಜೆ ಲಾಲ್ಪೆಕ್ಲುವಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications