
ಪುಣೆ, ಅಕ್ಟೋಬರ್ 22: ಪುಣೆಯ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಗ್ರಾಮದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಸೋಮವಾರ (ಅಕ್ಟೋಬರ್ 22) ಆತಿಥೇಯ ಪುಣೆ ಎಫ್‌ಸಿ ವಿರುದ್ಧ ಬೆಂಗಳೂರು ಎಫ್‌ಸಿ 3-0 ಅಂತರದಿಂದ ಸುಲಭ ಜಯ ಸಾಧಿಸಿದೆ. ರಾಜ್ಯ ತಂಡದ ಪರ ಹೆಮ್ಮೆಯ ರಾಷ್ಟ್ರೀಯ ಆಟಗಾರ ಸುನಿಲ್ ಛೆಟ್ರಿ ಜೋಡಿ ಗೋಲ್ ಗಳನ್ನು ಬಾರಿಸಿ ಗೆಲುವಿಗೆ ಕಾರಣರಾದರು.
ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಪಂದ್ಯದ ಪ್ರಥಮಾರ್ಧದಲ್ಲಿ ಅಂದರೆ 40 ಮತ್ತು 42ನೇ ನಿಮಿಷಗಳಲ್ಲಿ ಛೆಟ್ರಿ ಗೋಲು ಬಾರಿಸಿ ಬೆಂಗಳೂರು ಎಫ್ಸಿಗೆ 2-0ಯ ಮುನ್ನಡೆ ಕೊಟ್ಟಿದ್ದರು. ಅದಾಗಿ ದ್ವಿತೀಯಾರ್ಧದ 63ನೇ ನಿಮಿಷದಲ್ಲಿ ಬೆಂಗಳೂರಿನ ಮಿಕು ಅವರು ಮತ್ತೊಂದು ಗೋಲ್ ಬಾರಿಸಿ ತಂಡದ ಗೆಲುವಿನ ಅಂತರವನ್ನು ಹಿಗ್ಗಿಸಿದರು. 90+4 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಪುಣೆಯಿಂದ ಒಂದೂ ಗೋಲ್ ದಾಖಲಾಗಲಿಲ್ಲ.
ಬೆಂಗಳೂರು ತಂಡದ ಗೆಲುವನ್ನು ಮೊದಲೇ ನಿರೀಕ್ಷಿಸಲಾಗಿತ್ತು. ಪಂದ್ಯ ಪುಣೆಯಲ್ಲಿ ನಡೆಯುತ್ತಿದ್ದರಿಂದ ಪುಣೆ ಕೂಡ ಪೈಪೋಟಿ ನೀಡುವ ಸಾಧ್ಯತೆಯೂ ಇತ್ತು. ಆದರೆ ಬಲಿಷ್ಟ ತಂಡ ಬೆಂಗಳೂರಿನ ಎದುರು ಆತಿಥೇಯರ ಆಟ ನಡೆಯಲಿಲ್ಲ.
ಪುಣೆ ನಗರ (4-2-3-1): ಕೈತ್, ಗೋಲುಯಿ, ಮಿಲ್ಸ್, ಗುರ್ಟೆಜ್, ಫಾನಾಯ್, ಆದಿಲ್, ಸ್ಟ್ಯಾಂಕೋವಿಕ್, ಪೂಜಾರಿ, ಕಾರ್ಲೋಸ್, ಮಾರ್ಸೆಲಿನ್ಹೋ, ಅಲ್ಫಾರೊ.
ಬೆಂಗಳೂರು ಎಫ್ಸಿ (4-2-3-1): ಗುರ್ಪ್ರೀತ್, ಭೆಕೆ, ಸೆರಾನ್, ಜುವಾನ್, ನಿಶು, ಖಬ್ರಾ, ಪಾರತಲು, ಉದಂಡಾ, ಹೆರ್ನಾಂಡೆಜ್, ಛೆಟ್ರಿ, ಮಿಕು.