Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ vs ಡೆಲ್ಲಿ ಡೈನಮೋಸ್ ಪಂದ್ಯ ಸಮಬಲ

ISL 2018–19: Kerala Blasters vs Delhi Dynamos, Live Score

ಕೊಚ್ಚಿ, ಅಕ್ಟೋಬರ್ 20: ಕೊಚ್ಚಿಯ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ 2018ರ ಇಂದಿನ (ಅಕ್ಟೋಬರ್ 20) ಕೇರಳ ಬ್ಲಾಸ್ಟರ್ಸ್ ಮತ್ತು ಡೆಲ್ಲಿ ಡೈನಮೋಸ್ ನಡುವಿನ ಪಂದ್ಯ 1-1ರಿಂದ ಸಮಬಲಗೊಂಡಿದೆ. ಪಂದ್ಯದ ದ್ವಿತೀಯಾರ್ಧದಲ್ಲಿ ಇತ್ತಂಡಗಳು ತಲಾ ಒಂದೊಂದು ಗೋಲ್ ಬಾರಿಸಿ ಟೈ ಮಾಡಿಕೊಂಡವು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022308

ದ್ವಿತೀಯಾರ್ಧದ 47ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ಪರ ಸಿಕೆ ವಿನೀತ್ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಅದಾಗಿ ಪಂದ್ಯ ಮುಕ್ತಾಯದ ಹೊತ್ತಿಗೆ ಅಂದರೆ 83ನೇ ನಿಮಿಷದಲ್ಲಿ ಡೆಲ್ಲಿ ಡೈನಾಮೋಸ್ ನಿಂದ ಆಂಡ್ರಿಜಾ ಕಲ್ಡುಜೆರೋವಿಕ್ ಗೋಲ್ ಸಿಡಿಸಿ ಫಲಿತಾಂಶವನ್ನು ಸರಿದೂಗಿಸಿದರು. 90+6 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಇತ್ತಂಡಗಳಿಂದ ಮತ್ತೆ ಗೋಲ್ ದಾಖಲಾಗಲಿಲ್ಲ.

ಕೇರಳ ತಂಡ ಟೂರ್ನಿಯ ಮೊದಲ ಜಯಕ್ಕಾಗಿ ಕಣ್ಣಿಟ್ಟಿತ್ತು. ತವರಿನಲ್ಲೂ ಪಂದ್ಯ ನಡೆಯುತ್ತಿರುವುದರಿಂದ ಕೇರಳಕ್ಕೆ ಇದು ಪ್ರತಿಷ್ಠೆಯ ಪಂದ್ಯವೂ ಆಗಿತ್ತು. ಆದರೆ ಡೆಲ್ಲಿ ಕೂಡ ಪಂದ್ಯ ಗೆಲ್ಲುವ ನಿಟ್ಟಿನಲ್ಲಿ ಪೈಪೋಟಿ ನೀಡಿತು. ಅಂತೂ ಪಂದ್ಯ ಸಮಬಲದೊಂದಿಗೆ ಅಂತ್ಯ ಕಂಡಿತು.

ಕೇರಳ ಬ್ಲಾಸ್ಟರ್ಸ್ ತಂಡ: ಧೀರಜ್, ರಾಕಿಪ್, ಜಿಂಖನ್, ಲಕ್ಯಾಕ್-ಪೆಸಿಕ್, ಲಲ್ರುತ್ಥಾರ, ಕ್ರಾಕ್ರೆವಿಕ್, ವಿನೀತ್, ಸಹಲ್, ನರ್ಜಾರಿ, ಸ್ಟೋಜಾನೊವಿಕ್, ಪೋಪ್ಲಾಟ್ನಿಕ್.
ದೆಹಲಿ ಡೈನಮೊಸ್ ತಂಡ: ಡೊರೊನ್ಸೊರೊ, ಕೋಟಾಲ್, ಘರಾಮಿ, ಕ್ರೆಸ್ಪಿ, ದಾಸ್, ಸಾರಂಗಿ, ರಾಯ್, ಚಾಂಗ್ಟೆ, ಮಿಹೇಲಿಕ್, ರೋಮಿಯೋ, ಕಲ್ಡುಜೆರೋವಿಕ್.

Story first published: Saturday, October 20, 2018, 22:32 [IST]
Other articles published on Oct 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+