Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್‌ Live Score: ನಾಲ್ಕನೇ ಸ್ಥಾನಕ್ಕೆ ನಾರ್ತ್ ಈಸ್ಟ್ ಯುನೈಟೆಡ್ ಗುರಿ

ISL 2018-19: NorthEast United vs ATK live Score

ಗುವಾಹಟಿ, ಡಿಸೆಂಬರ್ 8: ಸತತ ಎರಡು ಪಂದ್ಯಗಳಲ್ಲಿ ಜಯ ಗಳಿಸುವಲ್ಲಿ ವಿವಾಗಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಶನಿವಾರ (ಡಿಸೆಂಬರ್ 8) ಎಟಿಕೆ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ನಾಲ್ಕನೇ ಸ್ಥಾನವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್‌ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022351

ಹಿಂದಿನ ನಾಲ್ಕು ಪಂದ್ಯಗಳಲ್ಲಿ ಇತ್ತಂಡಗಳು ಸೋಲನ್ನು ಅನುಭವಿಸಿರಲಿಲ್ಲ. ಜೆಮ್ಷೆಡ್ಪುರ ಹಾಗೂ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ನಾರ್ತ್ ಈಸ್ಟ್ ಡ್ರಾ ಕಂಡಿತ್ತು. ಚೆನ್ನೆ'ಯಿನ್ ತಂಡದ ವಿರುದ್ದದ ಪಂದ್ಯದಲ್ಲಿ ಎಟಿಕೆ 3-2 ಗೋಲುಗಳ ರೋಚಕ ಜಯ ಗಳಿಸಿ ಗುವಾಹಟಿ ತಲುಪಿದೆ.

10 ಪಂದ್ಯಗಳು ಮುಗಿದಿರುವಂತೆ ನಾರ್ತ್ ಈಸ್ಟ್ ತಂಡ 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಎಟಿಕೆ ತಂಡ 15 ಅಂಕಗಳನ್ನು ಗಳಿಸಿ ಆರನೇ ಸ್ಥಾನದಲ್ಲಿದೆ. 2015ರಲ್ಲಿ ನಾರ್ತ ಈಸ್ಟ್ ತಂಡ 20 ಅಂಕಗಳನ್ನು ಗಳಿಸಿ ಲೀಗ್ ಹಂತದಲ್ಲಿ ಐದನೇ ಸ್ಥಾನ ತಲುಪಿದ್ದು ಈ ತಂಡದ ಉತ್ತಮ ಸಾಧನೆಯಾಗಿತ್ತು. ಶನಿವಾರ ನಡೆಯುವ ಪಂದ್ಯದಲ್ಲಿ ಜಯ ಗಳಿಸಿದರೆ ಐಎಸ್‌ಎಲ್ ಋತುವಿನಲ್ಲಿ ಇದುವರೆಗೂ ಉತ್ತಮ ಸಾ'ನೆ ಮಾಡಿದಂತಾಗುತ್ತದೆ. ಷೆಟೋರಿ ಅವರು ತಂಡದ ಕೋಚಿಂಗ್ ಜವಾಬ್ದಾರಿ ವಹಿಸಿಕೊಂಡ ನಂತರ ತಂಡ ಉತ್ತಮ ಪ್ರದರ್ಶನ ತೋರಿದೆ.

ಹಿಂದಿನ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ಋತುವಿನ ಮೊದಲ ಸೋಲಿನ ಕಹಿ ನೀಡಲು ನಾರ್ತ್ ಈಸ್ಟ್ ಸಜ್ಜಾಗಿತ್ತು, ಆದರೆ ಚೆಂಕೊ ಗೈಲ್‌ಷೇನ್ ಗಳಿಸಿದ ಗೋಲಿನಿಂದ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಆ ಪಂದ್ಯ ಮಾತ್ರ ನಾರ್ತ್ ಈಸ್ಟ್ ತಂಡದಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ಮೂಡಿಸುವಂತೆ ಮಾಡಿತ್ತು. ಎಂಟು ದಿನಗಳಲ್ಲಿ ನಾರ್ತ್ ಈಸ್ಟ್ ತಂಡ ಮೂರನೇ ಪಂದ್ಯವನ್ನಾಡುತ್ತಿರುವ ಕಾರಣ ಆಟಗಾರರಿಗೆ ಇದು ಸವಾಲಿನ ವಿಚಾರವಾಗಿದೆ.

Story first published: Saturday, December 8, 2018, 19:42 [IST]
Other articles published on Dec 8, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+