ಐಎಸ್‌ಎಲ್: ಎಫ್‌ಸಿ ಪುಣೆ ಸಿಟಿ ವಿರುದ್ಧ ಮನೆಯಂಗಣದಲ್ಲಿ ಗೆದ್ದ ಎಟಿಕೆ

ಕೋಲ್ಕತ್ತಾ, ನವೆಂಬರ್ 10: ಗೆರ್ಸನ್ ವಿಯೆರಾ 82ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಝೆಡ್'ಎಟಿಕೆ ತಂಡ ಮನೆಯಂಗಣದಲ್ಲಿ ಎಫ್ಸಿ ಪುಣೆ ಸಿಟಿ ವಿರುದ್ಧದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ 1-0 ಗೋಲಿನಿಂದ ಜಯ ಗಳಿಸಿದೆ. ಪ್ರಥಮಾರ್ಧದಲ್ಲಿ ಇತ್ತಂಡಗಳು ಗೋಲು ಗಳಿಸಲು ಉತ್ತಮ ರೀತಿಯಲ್ಲಿ ಯತ್ನಿಸಿದವು. ಪುಣೆಗೆ ಗೋಲು ಗಳಿಸಲು ಉತ್ತಮ ಅವಕಾಶವಿದ್ದಿತ್ತು. ಆದರೆ ಯಶಸ್ಸು ಸಿಗಲಿಲ್ಲ.
ಗೆರ್ಸನ್ ವಿಯೆರಾ ಗೋಲ್ ಗಳಿಕೆಗಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದರು. ಆದರೆ ಕಮಲ್‌ಜಿತ್ ಸಿಂಗ್ ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. 76ನೇ ನಿಮಿಷದಲ್ಲೂ ವಿಯೆರಾ ಅವರ ಉತ್ತಮ ಯತ್ನ ಯಶಸ್ಸು ತಂದುಕೊಡಲಿಲ್ಲ. ಆದರೆ 82ನೇ ನಿಮಿಷದಲ್ಲಿ ಎಟಿಕೆ ಜಯಕ್ಕಾಗಿಯೇ ಎಂಬಂತೆ ಗೋಲು ಗಳಿಸಿತು. ಅದು ಬೇರೆ ಯಾರೂ ಆಗಿರದೆ ಗೆರ್ಸನ್ ವಿಯೆರಾ ಅವರದ್ದೇ ಗೋಲು. ಎಟಿಕೆಗೆ ಜಯಕ್ಕೆ ಅಗತ್ಯವಿರುವ ಗೋಲು ಅದಾಗಿತ್ತು.
ಲಾನ್ಜೆರೋಟ್ ನೀಡಿದ ಪಾಸ್ ಜಯೇಶ್ ಅವರ ನಿಯಂತ್ರಣಕ್ಕೆ ಬಂತು. ನಂತರ ಗೆರ್ಸನ್ ವಿಯೆರಾ ಹೆಡರ್ ಮೂಲಕ ಈ ಬಾರಿ ಕಮಲ್‌ಜಿತ್ ಸಿಂಗ್ ಅವರನ್ನು ವಂಚಿತಿ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಲುಪಿಸಿದರು. ಯುವಭಾರತೀ ಕ್ರೀಡಾಂಗಣದಲ್ಲಿ ಸಂಭ್ರಮದ ಅಲೆ. ಕೊನೆಯ ಕ್ಷಣದವರೆಗೂ ಹೋರಾಟವನ್ನು ಮುಂದುವರಿಸಿದರೆ ಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿತ್ತು.

ಗೋಲಿಲ್ಲದ ಪ್ರಥಮಾರ್ಧ
ಎಟಿಕೆ ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹದೊಂದಿಗೆ ಪ್ರಥಮಾರ್ಧದಲ್ಲಿ ಗೋಲು ಗಳಿಸಬಹುದೆಂಬ ನಿರೀಕ್ಷೆ ಇದ್ದಿತ್ತು. ಆದರೆ ಪುಣೆಯ ಗೋಲ್‌ಕೀಪರ್ ಕಮಲ್‌ಜಿತ್ ಸಿಂಗ್ ಉತ್ತಮ ಶ್ರಮದ ನೆರವಿನಿಂದ ಎರಡು ಬಾರಿ ಗೋಲ್ ಆಗುವ ಅವಕಾಶ ತಪ್ಪಿಹೋಯಿತು. ಅರಿಂದಮ್ ಭಟ್ಟಾಚಾರ್ಯ ಕೂಡ ಗೋಲಾಗುವ ಅವಕಾಶವನ್ನು ತಡೆದು ಪುಣೆಯ ಮುನ್ನಡೆಗೆ ಅಡ್ಡಿಯಾದರು. ಇದರೊಂದಿಗೆ ಮೊದಲ ಹಂತದ ಪಂದ್ಯದಲ್ಲಿ ಇತ್ತಂಡಗಳು ಉತ್ತಮವಾಗಿ ಆಡಿದ ಪರಿಣಾಮ ಗೋಲು ಗಳಿಸುವ ಅವಕಾಶ ತಪ್ಪಿತು.

ಆಕ್ರಮಣಕಾರಿ ಆಟ
ಮೊದಲ ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಇತ್ತಂಡಗಳು ಆಕ್ರಮಣಕಾರಿ ಆಟವಾಡಿದವು, ಎರಡನೇ ನಿಮಿಷದಲ್ಲಿ ಮಾರ್ಟಿನ್ ಡಿಯಾಜ್ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟರೂ ಕಮಲ್‌ಜಿತ್ ಸಿಂಗ್ ಉತ್ತಮ ರೀತಿಯಲ್ಲಿ ತಡೆದರು.

ಎಂಟುಬಾರಿ ಮುಖಾಮುಖಿ
ಇಂಡಿಯನ್ ಸೂಪರ್ ಲೀಗ್‌ನ 33ನೇ ಪಂದ್ಯಕ್ಕೆ ಎಟಿಕೆ ಹಾಗೂ ಪುಣೆ ಸಿಟಿ ತಂಡಗಳು ಸಜ್ಜಾದವು. ಇದಕ್ಕೂ ಮುನ್ನ ಇತ್ತಂಡಗಳು ಎಂಟು ಬಾರಿ ಮುಖಾಮುಖಿಯಾಗಿದ್ದವು. ಪುಣೆ ತಂಡ ಐದ ಬಾರಿ ಜಯ ಗಳಿಸಿತ್ತು. ಎಟಿಕೆ ಗೆದ್ದಿರುವುದು ಕೇವಲ ಒಂದು ಬಾರಿ. ಆದರೆ ಪುಣೆ ತಂಡ ಹಿಂದಿನ ಹಾಗಿಲ್ಲ. ಇದುವರೆಗೂ ಜಯದ ಖಾತೆ ತೆರೆಯುವಲ್ಲಿ ತಂಡ ವಿಲವಾಗಿದೆ. ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಎಟಿಕೆ ಪಾಲಿಗೆ ಇದು ಮನೋಬಲವನ್ನು ಹೆಚ್ಚಿಸಲಿದೆ. ಮನೆಯಂಗಣದ ಹೊರಗಡೆ ನಡೆದ ಪಂದ್ಯದಲ್ಲಿ ಪುಣೆ ಈ ಬಾರಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ.

ಡಿಫೆನ್ಸ್ ವಿಭಾಗದ ಹಿನ್ನಡೆ
ಆತಿಥೇಯ ಎಟಿಕೆ ಕೂಡ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ. ಕೇವಲ ಎರಡು ಪಂದ್ಯಗಳನ್ನು ಗೆದ್ದಿರುವ ಕೋಲ್ಕೊತಾ ಪಡೆ ಅಂಕಪಟ್ಟಿಯಲ್ಲಿ ಮಧ್ಯಮ ಸ್ಥಾನವನ್ನು ಕಾಯ್ದುಕೊಂಡಿದೆ. ತಂಡದ ಡಿಫೆನ್ಸ್ ವಿಭಾಗದಲ್ಲಿ ಸಮಸ್ಯೆ ಇರುವುದು ಪ್ರತಿಯೊಂದು ಪಂದ್ಯದಲ್ಲೂ ಸಾಬೀತಾಗುತ್ತಿದೆ. ಎದುರಾಳಿ ತಂಡಕ್ಕೆ ಅತಿ ಹೆಚ್ಚು ಗೋಲುಗಳನ್ನು ನೀಡಿದ ಪಟ್ಟಿಯಲ್ಲಿ ತಂಡ ಸೇರಿದೆ. ಇಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಸುಧಾರಣೆ ಕಂಡುಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications