ಐಎಸ್‌ಎಲ್: ಗೋವಾಕ್ಕೆ ಆಘಾತವಿತ್ತ ಬೆಂಗಳೂರು ಅಗ್ರ ಸ್ಥಾನಕ್ಕೆ ಲಗ್ಗೆ!

ಗೋವಾ, ನವೆಂಬರ್ 22: ಅತ್ಯಂತ ರೋಚಕವಾಗಿ ನಡೆದ ಇಂಡಿಯನ್ ಸೂಪರ್ ಲೀಗ್ ನ 36ನೇ ಪಂದ್ಯದಲ್ಲಿ ರಾಹುಲ್ ಭಿಕೆ (34ನೇ ನಿಮಿಷ ) ಹಾಗೂ ಸುನಿಲ್ ಛೆಟ್ರಿ (77ನೇ ನಿಮಿಷ ) ಗಳಿಸಿದ ಗೋಲಿನಿಂದ ಗೋವಾ ತಂಡವನ್ನು 2-1ರಿಂದ ಮಣಿಸಿದ ಬೆಂಗಳೂರು ಎಫ್‌ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಗೋವಾ ಪರ ಬ್ರೆನ್ದಾನ್ ಫೆರ್ನಾಂಡಿಸ್ 72ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯಕ್ಕೆ ಕುತೂಹಲ ತಂದೀತೇ ಹೊರತು ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಸ್ಕೋರ್ ಕಾರ್ಡ್
ದ್ವಿತೀಯಾರ್ಧದಲ್ಲಿ ಗೋವಾ ಹಾಗೂ ಬೆಂಗಳೂರು ತಂಡಗಳು ಆಕ್ರಮಣಕಾರಿ ಫುಟ್ಬಾಲ್ ಆಡಿದವು. 47ನೇ ನಿಮಿಷದಲ್ಲಿ ಗೋವಾದ ಮೊಹಮ್ಮದಾಲಿ ಉದ್ದೇಶಪೂರ್ವಕವಾಗಿ ಚೆಂಡನ್ನು ಕೈಯಿಂದ ಮುಟ್ಟಿದ ಕಾರಣ ರೆಡ್ ಕಾರ್ಡ್ ಪಡೆದು ಅಂಗಣದಿಂದ ಹೊರ ನಡೆದರು. 59ನೇ ನಿಮಿಷದಲ್ಲಿ ಬೆಂಗಳೂರು ತಂಡದ ಡೆಮಾಸ್ ಡೆಲ್ಗಡೊ ಗೋವಾದ ಹ್ಯೂಗೋ ಬೌಮೌಸ್ ಅವರನ್ನು ತುಳಿದ ಕಾರಣ ರೆಡ್ ಕಾರ್ಡ್ ಪಡೆದು ಹೊರ ನಡೆದರು. ಎರಡು ತಂಡಗಳು ಕೊನೆಯ ಅರ್ಧ ಗಂಟೆ ಆಟವನ್ನು ಕೇವಲ ಹತ್ತು ಆಟಗಾರರೊಂದಿಗೆ ಆಡಬೇಕಾಯಿತು.
34ನೇ ನಿಮಿಷದಲ್ಲಿ ರಾಹುಲ್ ಬಿಕೆ ಗಳಿಸಿದ ಗೋಲಿನಿಂದ ಬೆಂಗಳೂರು ತಂಡ ಮೇಲುಗೈ ಸಾಧಿಸಿತು. ಬಲಭಾಗದಿಂದ ಪಾಸ್ ಹೊರಗಡೆಗೆ ಹಾದು ಹೋಗುತ್ತಿತ್ತು. ಆದರೆ ಬ್ಯಾಕ್ ಫ್ಲಿಕ್ ಮೂಲಕ ಬಿಕೆ ಚೆಂಡನ್ನು ಗೋಲ್‌ಬಾಕ್ಸ್ ಕಡೆಗೆ ಸಾಗುವಂತೆ ಮಾಡಿದರು. ಮೊಹಮ್ಮದ್ ನವಾಜ್ ಈ ರೀತಿಯಲ್ಲಿ ಚೆಂಡು ಗೋಲ್‌ಬಾಕ್ಸ್ ಕಡೆಗೆ ಬರುತ್ತದೆ ಎಂದು ಊಹಿಸಿರಲಿಲ್ಲ. ಪರಿಣಾಮ ಚೆಂಡು ನೆಟ್ ಸೇರಿದ ಮೇಲೆ ನೆಲಕ್ಕುರಳಿದರು.
ಬೆಂಗಳೂರು ಗೋಲು ಗಳಿಸಿ ಮೇಲುಗೈ ಸಾಧಿಸಿದರೂ ಗೋವಾ ತಂಡ ಬ್ಲೂ ಬಾಯ್ಸ್‌ನ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಯಶಸ್ವಿಯಾಗಿತ್ತು. ಸಂಧೂ ಬೆಂಗಳೂರು ತಂಡದ ಪಾಲಿಗೆ ಹೀರೋ ಎನಿಸಿದರು.

ಅವಕಾಶ ವಂಚಿತ ಛೆಟ್ರಿ
ಸುನಿಲ್ ಛೆಟ್ರಿಗೆ ಎರಡು ಬಾರಿ ಗೋಲು ಗಳಿಸುವ ಅವಕಾಶ ಸಿಕ್ಕಿತಾದರೂ ಹೊಂದಾಣಿಕೆಯ ಆಟಗಾರ ಮಿಕು ಇಲ್ಲದಿರುವುದು ಅಲ್ಲಿ ಸ್ಪಷ್ಟವಾಗಿತ್ತು. ಬಹಳ ದಿನಗಳ ಬಿಡುವಿದ್ದ ಕಾರಣ ಆಟಗಾರರು ಪಂದ್ಯಕ್ಕೆ ಹೊಂದಿಕೊಳ್ಳಲು ಕೆಲವು ಸಮಯ ಬೇಕಾಯಿತು. ಗೋವಾ ಆರಂಭದಲ್ಲೇ ಮುನ್ನಡೆಯ ಅವಕಾಶ ಕಂಡಿತ್ತು. ಗುರ್‌ಪ್ರೀತ್ ಸಿಂಗ್ ಸಂಧೂ ಅವರು ಗೋಲ್‌ಕೀಪಿಂಗ್‌ನಲ್ಲಿ ಮಿಂಚದೇ ಇರುತ್ತಿದ್ದರೆ ಗೋವಾ ಎರಡು ಗೋಲುಗಳನ್ನು ನಿರಾಯಾಸವಾಗಿ ಗಳಿಸಿರುತ್ತಿತ್ತು. 28ನೇ ನಿಮಿಷದಲ್ಲಿ ಸುನಿಲ್ ಛೆಟ್ರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಅವಕಾಶ ಕೈ ತಪ್ಪಿತು.

ಬಲಿಷ್ಠರ ಮುಖಾಬಲ
ಇಂಡಿಯನ್ ಸೂಪರ್ ಲೀಗ್‌ನ 36ನೇ ಪಂದ್ಯದಲ್ಲಿ ಲೀಗ್‌ನ ಬಲಿಷ್ಠ ತಂಡಗಳಾದ ಗೋವಾ ಹಾಗೂ ಬೆಂಗಳೂರು ತಂಡಗಳು ಮುಖಾಮುಖಿಯಾದವು. ಈ ಪಂದ್ಯದ ಬಗ್ಗೆ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸಾಕಷ್ಟು ಕುತೂಹಲ ಮನೆ ಮಾಡಿದೆ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಎರಡು ತಂಡಗಳ ಮುಖಾಮುಖಿ ಇದಾಗಿತ್ತು. ಇದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ನಡೆಯುತ್ತಿರುವ ಹೋರಾಟ.

ಬೆಂಗಳೂರು ಸಂಘಟಿತ ಹೋರಾಟ
ಗೋವಾ ಈಗಾಗಲೇ ಅಗ್ರ ಸ್ಥಾನದಲ್ಲಿದ್ದರೆ, ಬೆಂಗಳೂರು ಇಲ್ಲಿ ಗೆದ್ದು ಅಗ್ರ ಸ್ಥಾನಕ್ಕೇರುವ ಗುರಿ ಹೊಂದಿತ್ತು. ಫೆರಾನ್ ಕೊರೊಮಿನಾಸ್ ಅವರನ್ನೇ ನಂಬಿರುವ ಗೋವಾ, ಅವರ ಅನುಪಸ್ಥಿತಿಯಲ್ಲಿ ಹೀನಾಯ ಸೋಲನುಭವಿಸಿರುವುದನ್ನು ಮರೆಯುವಂತಿಲ್ಲ. ಬೆಂಗಳೂರು ತಂಡ ಸಂಘಟಿತ ಹೋರಾಟ ನೀಡುತ್ತಿದ್ದು, ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿಸಿಲ್ಲ. ಬೆಂಗಳೂರಿನ ಡಿಫೆನ್ಸ್ ವಿಭಾಗ ಇತ್ತೀಚಿನ ಪಂದ್ಯಗಳಲ್ಲಿ ಸಡಿಲವಾಗಿರುವುದು ಸ್ಪಷ್ಟವಾಗಿತ್ತು.

ಮಿಕು ಗೈರು ಅಚ್ಚರಿ
ಮಿಕು ಅವರು ಪಂದ್ಯದಲ್ಲಿ ಗೈರಾಗಿರುವುದು ಅಚ್ಚರಿ ಮೂಡಿಸಿತ್ತು. ಸುನಿಲ್ ಛೆಟ್ರಿ ಹಾಗೂ ಮಿಕು ಅವರ ಹೊಂದಾಣಿಕೆಯ ಆಟ ಬೆಂಗಳೂರು ತಂಡದ ಜಯಕ್ಕೆ ಪ್ರಮುಖ ಕಾರಣವಾಗಿತ್ತು. ಗೋವಾ ತಂಡದ ರಕ್ಷಣಾಕೋಟೆಯನ್ನು ಮುರಿಯಲು ಹಾಗೂ ಆಕ್ರಮಣಕಾರಿ ಆಟವನ್ನು ನಿಯಂತ್ರಿಸಲು ಮಿಕು ಅವರ ಜಾಣ್ಮೆಯ ಆಟದ ಅಗತ್ಯವಿದೆ. ಅವರ ಅನುಪಸ್ಥಿತಿ ತಂಡದ ಲಿತಾಂಶದ ಮೇಲೆ ಪರಿಣಾಮ ಬೀರದಂತೆ ಬೆಂಗಳೂರು ಆಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications