2015ರ ಪ್ರಶಸ್ತಿ ಚೆನ್ನೈಯಿನ್ ತಂಡಕ್ಕೆ ಮುಂಬೈ ಎದುರಿಸಲು ಸ್ಫೂರ್ತಿ

ಚೆನ್ನೈ , ನವೆಂಬರ್ 2: ಚೆನ್ನೈಯಿನ್ ಎಫ್ಸಿ ತಂಡ ಈ ಬಾರಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕಳಪೆ ಪ್ರದರ್ಶನ ತೋರುತ್ತಿದೆ. ಆದರೆ ಶನಿವಾರ (ನ.3) ನೆಹರು ಕ್ರೀಡಾಂಗಣದಲ್ಲಿ ಮುಂಬೈ ಸಿಟಿ ಎಫ್ಸಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ತಮ್ಮ ತಂಡ ಜಯ ದಾಖಲಿಸಲಿದೆ ಎಂಬ ಆತ್ಮವಿಶ್ವಾಸದಲ್ಲಿ ಜಾನ್ ಗ್ರೆಗೋರಿ ಪಡೆ ಅಂಗಣಕ್ಕಿಳಿಯಲಿದೆ.
ಪಂದ್ಯದ Live Score ಇಲ್ಲಿದೆ
ಕಳೆದ ಐದು ಪಂದ್ಯಗಳಲ್ಲಿ ಜಯ ಗಳಿಸಲು ಪರದಾಡುತ್ತಿರುವ ಚೆನ್ನೈಯಿನ್ ತಂಡ ಮನೆಯಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮೂರು ಅಂಕಗಳನ್ನು ಗಳಿಸಲು ತನ್ನೆಲ್ಲ ಶಕ್ತಿಯನ್ನು ಪ್ರದರ್ಶಿಸಲು ಸಜ್ಜಾಗಿದೆ.
ತಂಡಕ್ಕಿರುವ ಒಂದೇ ಒಂದು ಆತ್ಮವಿಶ್ವಾಸವೆಂದರೆ 2015ರ ಚಾಂಪಿಯನ್ ಪಟ್ಟ. ತಂಡದ ಸಾಧನೆಯ ಬಗ್ಗೆ ಟೀಕಿಸುವವರಿಗೆ ಕೋಚ್ ಗ್ರೆಗೊರಿ ಎಚ್ಚರಿಕೆಯ ಕರೆ ನೀಡಿದ್ದಾರೆ. 2015ರಲ್ಲಿ ತಂಡ ಅಂಕ ಪಟ್ಟಿಯಲ್ಲಿ ಕೆಳ ಹಂತದಲ್ಲಿದ್ದರೂ ನಂತರ ಉತ್ತಮ ಪ್ರದರ್ಶನ ತೋರಿ, ಮಾರ್ಕೋ ಮೆಟರಜಿ ಅವರ ನೈತೃತ್ವದಲ್ಲಿ ಪ್ರಶಸ್ತಿ ಗೆದ್ದಿತ್ತು.
'ಕಳೆದ ಋತುವಿನ ಪ್ರದರ್ಶನವನ್ನೇ ಮುಂದಿಟ್ಟುಕೊಂಡು ಅದೇ ರೀತಿಯ ಪ್ರದರ್ಶನ ತೋರುವ ಗುರಿ ಹೊಂದಿದ್ದೆವು. ಆದರೆ ಅದು ಇದುವರೆಗೂ ಸಾಧ್ಯವಾಗಲಿಲ್ಲ. 2015ರ ಮಾರ್ಕೋ ಋತುವಿನಲ್ಲೂ ನಾವು ಅಂಕ ಪಟ್ಟಿಯಲ್ಲಿ ಕೆಳ ಭಾಗದಲ್ಲಿದ್ದಿದ್ದೆವು. ನಂತರ ಪುಟಿದೆದ್ದು ನಾವು ಪ್ರಶಸ್ತಿ ಗೆದ್ದೆವು. ನಮ್ಮನ್ನು ಅಷ್ಟು ಸುಲಭವಾಗಿ ಕಡೆಗಣಿಸಬೇಡಿ. ವಿಶೇಷವಾಗಿ ನಮ್ಮದು ಚಾಂಪಿಯನ್ ತಂಡ. ನಾವು ಮತ್ತೆ ಮರಳಿ ಬರುವೆವು ಎಂಬ ಆತ್ಮವಿಶ್ವಾಸವಿದೆ,' ಎಂದು ಗ್ರೆಗೊರಿ ಹೇಳಿದ್ದಾರೆ.
ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಒಂದು ಹಂತದಲ್ಲಿ ಚೈನ್ನೈ 3-1 ಗೋಲಿನಿಂದ ಮುನ್ನಡೆ ಸಾಧಿಸಿತ್ತು. ಆದರೆ ಡಿಫೆನ್ಸ್ ವಿಭಾಗದ ವೈಫಲ್ಯದಿಂದಾಗಿ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು. ತಂಡ ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ರೀತಿಯಲ್ಲಿ ಗೋಲು ಗಳಿಸುವ ಅವಕಾಶವನ್ನು ಸೃಷ್ಟಿಸಿತ್ತು. ಆದರೆ ಗೋಲು ಗಳಿಸುವಲ್ಲಿ ವಿಲವಾಗಿತ್ತು.

ಅವಕಾಶಗಳನ್ನು ಸೃಷ್ಟಿಸಿದ್ದರು
'ಪ್ರತಿಯೊಬ್ಬರೂ ಅಂತಿಮವಾಗಿ ನೋಡುವುದು ಲಿತಾಂಶವನ್ನು. ಮುಂಬೈ ಸಿಟಿ ಕೂಡ ನಮ್ಮಂತೆಯೇ ಇದೆ. ಗೋವಾ ವಿರುದ್ಧದ ಪಂದ್ಯದಲ್ಲಿ ಅವರು ನಾವು ಎಟಿಕೆ ವಿರುದ್ಧ ತೋರಿದ ಪ್ರದರ್ಶನವನ್ನೇ ತೋರಿದರು. ಅತ್ಯಂತ ಅಪಾಯಕಾರಿ ತಂಡದಂತೆ ಕಂಡು ಬಂದಿತ್ತು. ಮೊದಲ 45 ನಿಮಿಷಗಳ ಆಟದಲ್ಲಿ ಅವರು ಉತ್ತಮ ಅವಕಾಶಗಳನ್ನು ಸೃಷ್ಟಿಸಿದ್ದರು. ಎಟಿಕೆ ವಿರುದ್ಧದ ಪಂದ್ಯದಲ್ಲಿ ನಮಗೆ 1-2 ಗೋಲಿನಿಂದ ಸೋಲಾಗಿತ್ತು. ಆದರೆ ನಾವು ವಿಭಿನ್ನವಾಗಿಯೇ ಆಡಿದೆವು. ನಮಗೆ ಗೋಲು ಗಳಿಸಲು ಬಹಳ ಅವಕಾಶ ಇದ್ದಿತ್ತು' ಎಂದು ಪಾಶಾ ಹೇಲಿದ್ದಾರೆ. ಗ್ರಿಗೋರಿ ಅವರಿಗೆ ಅನಾರೋಗ್ಯದ ಕಾರಣ ಪಾಶಾ ಅವರು ತಂಡವನ್ನು ಮುನ್ನಡೆಸುತ್ತಿದ್ದಾರೆ.

ಅಂತರ ಹೆಚ್ಚಾಗಲಿದೆ
ಕಳೆದ ನಾಲ್ಕು ಋತುಗಳಲ್ಲಿ ಉತ್ತಮವಾಗಿ ಆಡಿದ್ದ ಜೆಜೆ ಲಾಲ್‌ಪೆಕ್ಲುವಾ ಇದುವರೆಗೂ ತಮ್ಮ ನೈಜ ಆಟ ಆಡಿಲ್ಲ, ಅದೇ ರೀತಿ ಕಾರ್ಲೋಸ್ ಸಲೋಮ್ ಕೂಡ ಇನ್ನೂ ಪರ್ಪಲ್ ಪಿಚ್‌ನಲ್ಲಿ ಮಿಂಚಿಲ್ಲ. ಒಂದು ವೇಳೆ ಶನಿವಾರದ ಪಂದ್ಯದಲ್ಲಿ ಚೆನ್ನೈ ಪಡೆ ಮೂರು ಅಂಕ ಗಳಿಸುವಲ್ಲಿ ವಿಲವಾದರೆ, ಅಂತಿಮ ನಾಲ್ಕ ಹಂತ ತಲುಪುವ ತಂಡ ಹಾಗೂ ಚೆನ್ನೈ ತಂಡದ ನುಡವಿನ ಅಂಕಗಳ ಅಂತರ ಹೆಚ್ಚಾಗಲಿದೆ.

ಜಯದ ಹಾದಿಗೆ
ಗೋವಾ ವಿರುದ್ಧದ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಸೋಲನುಭವಿಸಿದ ಮುಂಬೈ ಸಿಟಿ ತಂಡ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ 2-1 ಗೋಲಿನಿಂದ ಜಯ ಗಳಿಸಿ ಜಯದ ಹಾದಿಗೆ ಬಂದಿತ್ತು. ಆದರೆ ತಂಡದ ಕೋಚ್ ಜಾರ್ಜ್ ಕೋಸ್ಟಾ ಸ್ಥಿರ ಪ್ರದರ್ಶನವನ್ನು ನೀಡುವಂತೆ ತಂಡವನ್ನು ಒತ್ತಾಯಿಸಿದ್ದಾರೆ. ಇದಕ್ಕೆ ಪುಣೆ ವಿರುದ್ಧದ ಲಿತಾಂಶವನ್ನು ಅವರು ಉದಾಹರಣೆಯಾಗಿ ನೀಡಿದ್ದಾರೆ.

ಉತ್ತಮ ಆಟ ಪ್ರದರ್ಶನ
‘ಗೋವಾ ವಿರುದ್ಧದ ಪಂದ್ಯದಲ್ಲಿ ನಾವು ಮೊದಲ ಅರ್ಧದ ಅವಧಿಯಲ್ಲಿ ಉತ್ತಮವಾಗಿಯೇ ಆಡಿದೆವು. ಗೋಲು ಗಳಿಸಲು ಆರರಿಂದ ಎಂಟು ಅವಕಾಶ ಇದ್ದಿತ್ತು. ಆದರೂ ನನಗೆ ಕೊನೆಯ 20-25 ನಿಮಿಷಗಳ ಆಟ ಇಷ್ಟವಾಗಿಲ್ಲ. ಪುಣೆ ವಿರುದ್ಧದ ಪಂದ್ಯದಲ್ಲಿ ನಾವು ಉತ್ತಮವಾಗಿಯೇ ಆಡಿದೆವು,‘ ಎಂದು ಕೋಸ್ಟಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications