For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಚೆನ್ನೈಯಿನ್‌ ವಿರುದ್ಧ ಡೆಲ್ಲಿ ಡೈನಮೋಸ್‌ಗೆ ಜಯ

By Isl Media
ISL 2018: Delhi punish wayward Chennaiyin for first win

ಚೆನ್ನೈ ಡಿಸೆಂಬರ್ 16: ಡೇನಿಯಲ್ ಲಾಲ್ ಲಲಿಂಪಿಯ (16ನೇ ನಿಮಿಷ), ವಿಕ್ರಂಜಿತ್ ಸಿಂಗ್ (78ನೇ ನಿಮಿಷ) ಹಾಗೂ ನಂದಕುಮಾರ್ ಶೇಖರ್ (82ನೇ ನಿಮಿಷ) ಗಳಿಸಿದ ಗೋಲಿನಿಂದ ಡೆಲ್ಲಿ ಡೈನಮೋಸ್ ತಂಡ ಚೆನ್ನೈಯಿನ್ ಎಫ್ ಸಿ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯಗಳಿಸಿತು. 39ನೇ ನಿಮಿಷದಲ್ಲಿ ರಾಫೆಲ್ ಅಗಸ್ಟೊ ಗಳಿಸಿದ ಗೋಲು ಚೆನ್ನೈ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ ಚೆನ್ನೈ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ತಲುಪಿತು. ಡೆಲ್ಲಿ ಈ ಬಾರಿಯ ಐಎಸ್ಎಲ್ ನಲ್ಲಿ ಮೊದಲ ಜಯ ಕಂಡಿತು.

ಎರಡು ತಂಡಗಳ ನಡುವೆ ಸಮಬಲದ ಹೋರಾಟ: ಪಂದ್ಯ ಆರಂಭಗೊಂಡ 16ನೇ ನಿಮಿಷದಲ್ಲಿ ಡೇನಿಯಲ್ ಲಾಲ್‌ಲ್ಹಿಮ್ಪುಯಾ ಹೆಡರ್ ಮೂಲಕ ಗಳಿಸಿದ ಗೋಲಿನಿಂದ ಡೆಲ್ಲಿ ತಂಡ ಚೆನ್ನೈ ಮನೆಯಂಗಣದಲ್ಲಿ ಮೇಲುಗೈ ಸಾಧಿಸಿತು. ಆದರೆ ಈ ಸಂಭ್ರಮ ಡೆಲ್ಲಿ ಪಡೆಯಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಏಕೆಂದರೆ 39ನೇ ನಿಮಿಷದಲ್ಲಿ ಪೆನಾಲ್ಟಿ ಶೂಟ್ ಮೂಲಕ ರಾಫೆಲ್ ಆಗಸ್ಟೋ ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು.

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದ ಎರಡು ತಂಡಗಳು ೫೮ನೇ ಪಂದ್ಯಕ್ಕೆ ಸಜ್ಜಾದವು.ಎರಡೂ ತಂಡಗಳು ಅಂತಿಮ ನಾಲ್ಕರ ಹಂತದಿಂದ ದೂರ ಉಳಿದಿವೆ. ಈಗ ಏನಿದ್ದರೂ ಸಮಾಧಾನಪಡವ ಜಯದ ಅಗತ್ಯವಿದೆ. 11 ಪಂದ್ಯಗಳನ್ನು ಆಡಿರುವ ಚೆನ್ನೈ ತಂಡ 21 ಗೋಲುಗಳನ್ನು ನೀಡಿದೆ. ಪುಣೆ ತಂಡ ಕೂಡ ಕೂಡ 21 ಗೋಲುಗಳನ್ನು ನೀಡಿದೆ. ರೆಲ್ ಆಗಸ್ಟೋ ಮಾತ್ರ ತಂಡದ ಪಾಲಿಗೆ 'ರವಸೆಯ ಆಟಗಾರರೆನಿಸಿದ್ದಾರೆ. ಡೆಲ್ಲಿ ವಿರುದ್ಧ ಚೆನ್ನೈ ತಂಡ ಮೇಲುಗೈ ಸಾಧಿಸಿದೆ. ಒಂಬತ್ತು ಪಂದ್ಯಗಳಲ್ಲಿ ಡೆಲ್ಲಿ ನಾಲ್ಕರಲ್ಲಿ ಯಶಸ್ಸು ಕಂಡಿದ್ದು, ಎರಡು ಬಾರಿ ಸೋಲನುಭವಿಸಿದೆ. ಡೆಲ್ಲಿ ಪರ ಚಾಂಗ್ಟೆ ನಾಲ್ಕು ಗೋಲುಗಳನ್ನು ಗಳಿಸಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ.

ಈ ಋತುವಿನಲ್ಲಿ ಜಯಕ್ಕಾಗಿ ಪರದಾಡಿರುವ ಈ ಎರಡೂ ತಂಡಗಳು ಅಂಕ ಪಟ್ಟಿಯಲ್ಲಿ ಅನುಕ್ರಮವಾಗಿ ಒಂಬತ್ತು ಹಾಗೂ ಹತ್ತನೇ ಸ್ಥಾನದಲ್ಲಿವೆ. ಪ್ಲೇ ಆಫ್ ಆಸೆ ದೂರವಾಗಿರುವ ಹಿನ್ನೆಲೆಯಲ್ಲಿ ಉಳಿದಿರುವ ಪಂದ್ಯದಲ್ಲಿ ಮೂರು ಅಂಕಗಳನ್ನು ಗಳಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಯತ್ನದಲ್ಲಿವೆ.

ಎರಡೂ ತಂಡಗಳು ಉತ್ತಮವಾಗಿ ಆಡಿದರೂ ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಲವಾಗಿವೆ. ಫಾರ್ವರ್ಡ್ ವಿಭಾಗದ ವೈಲ್ಯವೇ ಇದಕ್ಕೆ ಕಾರಣ ಎನ್ನಬಹುದು. ಜೆಜೆ ಲಾಲ್ ಫೆಖ್ಲುವಾ ಹಾಗೂ ಕಾರ್ಲೋಸ್ ಸಲೋಮ್ ವಿಲವಾಗಿರುವುದು ತಂಡದ ಯಶಸ್ಸಿನ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು. ಡೆಲ್ಲಿ ಡೈನಮೋಸ್ ಪರ ಅಂಡ್ರಿಜಾ ಕಲುಡೆರೊವಿಕ್ ಕೂಡ ಒಂದು ಗೋಲು ಗಳಿಸಿ ನಿರಾಸೆ ಮೂಡಿಸಿದ್ದಾರೆ.

ಹಾಲಿ ಚಾಂಪಿಯನ್ ತಂಡ ಕೇವಲ ಎಂಟು ಗೋಲುಗಳನ್ನು ಗಳಿಸಿರುವುದು ತಂಡದ ಆಟಗಾರರ ಬಗ್ಗೆ ಕೆಲವೊಮ್ಮೆ ಬೇಸವ ಉಂಟಾಗುವುದು ಸಹಜವಾಗುತ್ತದೆ. ಮುಂದಿನ ತಿಂಗಳು ಏಷ್ಯಾ ಕಪ್ ನಡೆಯುವುದರಿಂದ ಜೆಜೆ ಅವರು ಗೋಲು ಗಳಿಸಿ ಮುಂದಿನ ಹೋರಾಟಕ್ಕೆ ಸಜ್ಜಾಗಲಿದ್ದಾರೆ ಎಂಬುದು ಎಲ್ಲರ ನಿರೀಕ್ಷೆ.

Story first published: Monday, December 17, 2018, 13:17 [IST]
Other articles published on Dec 17, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+