ಐಎಸ್‌ಎಲ್ 2018: ಡೆಲ್ಲಿ ಡೈನಮೋಸ್‌ಗೆ ಬಲಿಷ್ಠ ಜೆಮ್ಷೆಡ್ಪುರ ಸವಾಲು

ಹೊಸದಿಲ್ಲಿ, ನವೆಂಬರ್ 3: ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ (ನವೆಂಬರ್ 4) ನಡೆಯಲಿರುವ ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ ತಂಡ ಬಲಿಷ್ಠ ಜೆಮ್ಷೆಡ್ಪುರದ ವಿರುದ್ಧ ತನ್ನ ಅದೃಷ್ಟ ಪರೀಕ್ಷೆ ನಡೆಸಲಿದೆ.
ಆಡಿರುವ ಆರು ಪಂದ್ಯಗಳಲ್ಲಿ ಡೆಲ್ಲಿ ಡೈನಮೋಸ್ ಮೂರು ಪಂದ್ಯಗಳಲ್ಲಿ ಡ್ರಾ ಕಂಡು, ಮೂರು ಪಂದ್ಯಗಳಲ್ಲಿ ಸೋಲನುಭವಿಸಿದೆ. ಕೋಚ್ ಜೊಸೆಪ್ ಗೊಂಬಾವ್ ಅವರ ಪಡೆ ಮನೆಯಂಗಣದಲ್ಲಿ ಐದನೇ ಪಂದ್ಯವನ್ನಾಡಲು ಸಜ್ಜಾಗಿದ್ದು, ಮೊದಲ ಜಯದ ನಿರೀಕ್ಷೆಯಲ್ಲಿದೆ.
ಪಂದ್ಯದ Live Score, ಸ್ಕೋರ್ ಕಾರ್ಡ್ ಇಲ್ಲಿದೆ
'ಅಂಕಗಳನ್ನು ಗಳಿಸುವ ಅವಕಾಶ ಇರುವುದರಿಂದ ನಾವು ಪಟ್ಟಿಯಲ್ಲಿ ಅಗ್ರ ನಾಲ್ಕನೇ ಸ್ಥಾನ ತಲುಪಲು ಹೋರಾಟ ನೀಡಲಿದ್ದೇವೆ. ವಿವಿಧ ರೀತಿಯ ಹೊಂದಾಣಿಕೆಯನ್ನು ನಾವು ಪ್ರದರ್ಶಿಸಲಿದ್ದೇವೆ, ಅದು ಅಷ್ಟು ಸುಲಭವಾದುದಲ್ಲ, ನಾವು ಆರು ಅಂಕಗಳಿಂದ ಹಿಂದೆ ಉಳಿದಿದ್ದೇವೆ,' ಎಂದು ಗೊಂಬಾವ್ ಹೇಳಿದ್ದಾರೆ.
ರೆನೆ ಮಿಹೆಲಿಕ್ ಹಾಗೂ ಆಡ್ರಿಯಾ ಕರ್ಮೋನಾ ಅವರು ತಂಡವನ್ನು ಸೇರಿಕೊಳ್ಳುತ್ತಿರುವುದು ಕೋಚ್ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ, ಅನಾರೋಗ್ಯದ ಕಾರಣ ಇಬ್ಬರೂ ಆಟಗಾರರು ಮನೆಯಂಗಣದಲ್ಲಿ ನಡೆದ ಈ ಹಿಂದಿನ ಪಂದ್ಯದಿಂದ ವಂಚಿತರಾಗಿದ್ದರು. ಈ ಇಬ್ಬರು ಆಟಗಾರರು 'ಭಾನುವಾರದ ಪಂದ್ಯಕ್ಕೆ ಲಭ್ಯವಾದರೆ ಜಯದ ನಾಗಾಲೋಟದಲ್ಲಿ ಓಡುತ್ತಿರುವ ಜೆಮ್ಷೆಡ್ಪುರ ತಂಡವನ್ನು ಸೋಲಿಸುವುದು ಕಷ್ಟವಲ್ಲ. ಜೆಮ್ಷೆಡ್ಪುರ ತಂಡ ಗೋವಾ ವಿರುದ್ಧದ ಪಂದ್ಯದಲ್ಲಿ 4-1 ಗೋಲಿನಿಂದ ಗೆದ್ದು ಲೀಗ್‌ನಲ್ಲಿರುವ ಇತರ ತಂಡಗಳಿಗೆ ಅಚ್ಚರಿ ಮೂಡಿಸಿದೆ.

ಜೆಮ್ಷೆಡ್ಪುರ ಉತ್ತಮ ತಂಡ
'ಜೆಮ್ಷೆಡ್ಪುರ ಉತ್ತಮ ತಂಡವೆಂಬುದನ್ನು ನಾನು ಒಪ್ಪಿಕೊಳ್ಳುವೆ. ಗೋವಾದಂಥ ಬಲಿಷ್ಠ ತಂಡವನ್ನೂ ಅದು ಮಣಿಸಿದೆ. ಆರಂಭದಿಂದಲೂ ಪ್ರತಿಯೊಂದು ಪಂದ್ಯವನ್ನು ಗೆಲ್ಲಬೇಕೆಂಬ ಲಕ್ಷಣವನ್ನು ತೋರಿ ಆಡುತ್ತಿವೆ. ಆದರೆ ನಾವು ಮೂರು ಅಂಕಗಳನ್ನು ಗಳಿಸುವ ಗುರಿ ಹೊಂದಿದ್ದೇವೆ., ಪ್ರತಿಯೊಂದು ಪಂದ್ಯವೂ ಭಿನ್ನವಾದುದು, ನಾವು ಟಾಟಾ ಪಡೆಯನ್ನು ಸೋಲಿಸುತ್ತೇವೆ' ಎಂದು ಹೇಳಿದರು.

ಅತ್ಯಂತ ಉಲ್ಲಾಸದಲ್ಲಿದೆ
ಗೋವಾ ವಿರುದ್ಧದ ಜಯದ ನಂತರ ಜೆಮ್ಷೆಡ್ಪುರ ತಂಡ ಅತ್ಯಂತ ಉಲ್ಲಾಸದಲ್ಲಿದೆ. ಅವರ ಆ ಜಯದ ಲಯವನ್ನು ಮುಂದುವರಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ವೇಳಾಪಟ್ಟಿ ಅತ್ಯಂತ ತ್ವರಗತಿಯಲ್ಲಿ ಸಾಗುತ್ತಿರುವುದರಿಂದ ಸೆಸಾರ್ ಫೆರಾಂಡೊ ಆಟಗಾರರನ್ನು ಬದಲಾಯಿಸುವ ಆಡುವುದಕ್ಕೆ ಯಾವುದೇ ರೀತಿಯಲ್ಲಿ ಹಿಂದೇಟು ಹಾಕುತ್ತಿಲ್ಲ. ‘ನಾವು ತಂಡವನ್ನು ಆಗಾಗ ಬದಲಾಯಿಸುತ್ತೇವೆ, ಏಕೆಂದರೆ ತಂಡದ ಪ್ರತಿಯೊಬ್ಬ ಆಟಗಾರರೂ ಉತ್ತೇಜನ ಪಡೆಯಬೇಕು. ಪ್ರತಿಯೊಬ್ಬ ಆಟಗಾರರಿಗೂ ಅವಕಾಶ ನೀಡುವುದು ನನ್ನ ಗುರಿ.

ಆಟಗಾರರನ್ನು ಗಮನಿಸುತ್ತಿರುತ್ತೇನೆ
ಆಟಗಾರನೊಬ್ಬ ಆಡಲು ಸಜ್ಜಾಗಿರುವನೇ ಎಂಬುದನ್ನು ಗಮನಿಸಿರುತ್ತೇನೆ. ಸತತ ನಾಲ್ಕು ಪಂದ್ಯಗಳನ್ನು ಆಡಬೇಕಾಗಿರುವುದರಿಂದ ತಂಡದ ಆಟಗಾರರ ಸ್ಥಿತಿಯನ್ನೂ ಗಮನಿಸುವುದು ಮುಖ್ಯವಾಗಿದೆ,ಇದು ನಾಣ್ಯವನ್ನು ಮೇಲಕ್ಕೆ ಚಿಮ್ಮಿದಂತೆ, ಕೆಲವೊಮ್ಮೆ ನಮ್ಮ ನಿರೀಕ್ಷೆಯಂತೆ ಒಳ್ಳೆದಾಗುತ್ತದೆ, ಕೊಲವೊಮ್ಮೆ ವಿರುದ್ಧವೂ ಆಗುತ್ತದೆ,‘ ಎಂದು ಫೆರಾಂಡೊ ಹೇಳಿದರು.

ಎದುರಾಳಿ ಮೇಲೆ ಒತ್ತಡ
ಎದುರಾಳಿ ತಂಡದ ಮೇಲೆ ಹೆಚ್ಚಿನ ಒತ್ತಡ ಹೇರುವ ಉದ್ದೇಶದಿಂದ ಸ್ಪೇನ್‌ನ ಕೋಚ್, ಮಿಡ್‌ಫೀಲ್ಡ್‌ನಲ್ಲಿ ವಿದೇಸಿ ಆಟಗಾರರನ್ನೇ ಹೆಚ್ಚು ಆಡಿಸುವುದಕ್ಕೆ ಹಿಂಜರಿಯುವುದಿಲ್ಲ ಎಂದಿದ್ದಾರೆ. ‘ಡೆಲ್ಲಿ ಅತ್ಯಂತ ಅಪಾಯಕಾರಿ ತಂಡ, ಅವರಲ್ಲಿ ಉತ್ತಮ ಕೋಚ್ ಹಾಗೂ ಉತ್ತಮ ಆಟಗಾರರಿದ್ದಾರೆ. ಅವರಿಗೂ ಗೆಲ್ಲುವ ಹಂಲವಿದೆ, ಆದ್ದರಿಂದ ಪಂದ್ಯ ಅತ್ಯಂತ ಕಠಿಣವೆನಿಸುವುದು ಸ್ಪಷ್ಟ,‘ ಎಂದು ಫೆರಾಂಡೊ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications