ಐಎಸ್‌ಎಲ್ 2018: ಸಮಬಲದೊಂದಿಗೆ ಅಂತ್ಯಕಂಡ ಪುಣೆ-ಕೇರಳ ಜಿದ್ದಾಜಿದ್ದಿ

ಪುಣೆ, ನವೆಂಬರ್ 2: ಪುಣೆಯ ಶ್ರೀ ಶಿವ್ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಕೇರಳ ಬ್ಲಾಸ್ಟರ್ಸ್ ಮತ್ತು ಪುಣೆ ಸಿಟಿ ಎಫ್ಸಿ ತಂಡಗಳ ಮುಖಾಮುಖಿ 1-1ರ ಸಮಬಲದೊಂದಿಗೆ ಅಂತ್ಯ ಕಂಡಿದೆ. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಪುಣೆ 8ನೇ ಸ್ಥಾನದಲ್ಲಿದ್ದರೆ, ಕೇರಳ 5ನೇ ಸ್ಥಾನದಲ್ಲಿದೆ.
ಪಂದ್ಯ ಆರಂಭಗೊಂಡ 13ನೇ ನಿಮಿಷದಲ್ಲಿ ಪುಣೆ ಗೋಲ್ ಖಾತೆ ತೆರಯಿತು. ಪುಣೆ ಎಫ್‌ಸಿಯ ಮಾರ್ಕೊ ಸ್ಟಾಂಕೋವಿಕ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ಪಂದ್ಯದ ದ್ವಿತೀಯಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ಪರ (61ನೇ ನಿಮಿಷ) ನಿಕೋಲಾ ಕ್ರಾಕ್ರೆವಿಕ್ ಗೋಲ್ ಬಾರಿಸಿ ಫಲಿತಾಂಶವನ್ನು ಸರಿದೂಗಿಸಿಕೊಂಡರು.
ಇಂದಿನ (ನವೆಂಬರ್ 2) ಪಂದ್ಯದಲ್ಲಿ ಆತಿಥೇಯ ಪುಣೆಗೆ ಗೆಲುವು ಅನಿವಾರ್ಯವಾಗಿತ್ತು. ಆದರೆ ಗೆಲ್ಲಲು ಕೇರಳ ಬಿಡಲಿಲ್ಲ. ಪಂದ್ಯದ ವೇಳೆ ಪುಣೆ ಎರಡುಬಾರಿ ಕೇರಳ ಮೂರುಬಾರಿ ತಂಡದ ಆಟಗಾರರನ್ನು ಬದಲಿಸಿಕೊಂಡಿತು. ಪುಣೆ ಆಟಗಾರರ ವಿರುದ್ಧ ಮೂರುಬಾರಿ ಯೆಲ್ಲೋ ಕಾರ್ಯಾ ಪ್ರದರ್ಶಿಸಲ್ಪಟ್ಟಿದ್ದು ಕಾಣಿಸಿತು.
42ನೇ ನಿಮಿಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೇರಳದ ನಿಕೊಲಾ ಕ್ರಾಕ್ಮರೇವಿಕ್ ಗೋಲು ಗಳಿಸಿ ಸಂಭ್ರಮಿಸಿದರು. ಕೇರಳದ ಆಟಗಾರರೂ ಸಂಭ್ರಮಿಸಿದ್ದರು. ಆದರೆ ಚೆಂಡು ನೆಟ್‌ಗೆ ತಗಲದ ಕಾರಣ ರೆಫರಿ ಗೋಲು ನೀಡಲು ನಿರಾಕರಿಸಿದರು. ಕೇರಳದ ಆಟಗಾರರು ರೆಫರಿ ಅವರಲ್ಲಿ ಮನವಿ ಮಾಡಿಕೊಂಡಾಗ ಅದು ಗೋಲ್ ಎಂಬ ತೀರ್ಪಾಯಿತು. ಆದರೆ ಪುಣೆ ಆಟಗಾರರು ಪುನಃ ಮನವಿ ಮಾಡಿದಾಗ ರೆಫರಿ ಗೋಲ್ ಅಲ್ಲವೆಂಬ ತೀರ್ಪು ನೀಡಿದರು. ಇದರೊಂದಿಗೆ ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮೊದಲ ಬಾರಿಗೆ ಗೊಂದಲದ ವಾತಾವರಣ ನಿರ್ಮಾಣವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications