Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್‌ Live Score: ನಾರ್ತ್ ಈಸ್ಟ್ ಯುನೈಟೆಡ್‌ಗೆ ಪುಣೆ ಸಿಟಿ ಸವಾಲು

ISL 2018: FC Pune City vs NorthEast United FC, Preview, Live Score

ಪುಣೆ ನವೆಂಬರ್ 27: ಆಕ್ರಮಣಕಾರಿ ಆಟದಿಂದಲೂ ಯಶಸ್ಸು ಕಾಣುವಲ್ಲಿ ವಿಲವಾಗಿರುವ ಪುಣೆ ಸಿಟಿ ತಂಡ ಈಗ ಜೆಮ್ಷೆಡ್ಪುರ ವಿರುದ್ಧದ ಪಂದ್ಯದ ವೇಳೆ ತನ್ನ ರಣತಂತ್ರವನ್ನು ಬದಲಾಯಿಸಿ ಹೊಸ ಆಟಕ್ಕೆ ಮುಂದಾಗಿದೆ. ಮಂಗಳವಾರ (ನವೆಂಬರ್ 27) ನಡೆಯಲಿರುವ ಪಂದ್ಯದಲ್ಲಿ ಪುಣೆ ತಂಡಕ್ಕೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022340

ಆಡಿರುವ ಎಂಟು ಪಂದ್ಯಗಳಲ್ಲಿ ಕೇವಲ ಐದು ಅಂಕಗಳನ್ನು ಗಳಿಸಿರುವ ಪುಣೆ ತಂಡ ಅಂತಿಮ ನಾಲ್ಕರ ಹಂತ ತಲುಪಬೇಕಾದರೆ ನಿರಂತರ ಜಯ ಕಾಣಬೇಕಾಗಿದೆ. ಪ್ಲೇ ಆಫ್ ಹಂತ ತಲುಬೇಕಾದರೆ ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿಯೊಂದಿಗೆ ಅಂಗಣಕ್ಕಿಳಿಯಲಿದೆ.

ಸಾಕಷ್ಟು ವಿರಾಮದ ನಂತರ ಚೇತರಿಸಿಕೊಂಡು ಅಂಗಣಕ್ಕಿಳಿದ ಪುಣೆ ತಂಡಕ್ಕೆ ಕಳೆದ ವಾರ ಜೆಮ್ಷೆಡ್ಪುರ ವಿರುದ್ಧದ ಪಂದ್ಯದಲ್ಲಿ ಮೊದಲ ಜಯ ದಕ್ಕಿತ್ತು. ಇಯಾನ್ ಹ್ಯೂಮೆ ಅವರ ಆಗಮನದಿಂದ ತಂಡದ ಆಟಗಾರರ ಮನೋಬಲ ಹೆಚ್ಚಿದೆ. ಈ ಕಾರಣ ಜಯ ದಕ್ಕಿತ್ತು.

ಆಶಿಕ್ ಕರುನಿಯಾನ್ ಅವರು ಉತ್ತಮ ಆಟ ಪ್ರದರ್ಶಿಸುತ್ತಿರುವುದು ಎದುರಾಳಿ ತಂಡದ ಡಿಫೆನ್ಸ್ ವಿಭಾಗವನ್ನು ಚದುರಿಸಲು ಸಾಧ್ಯವಾಗುತ್ತಿದೆ. ಮಾರ್ಸೆಲಿನೊ ಅವರಿಂದ ಉತ್ತಮ ಪ್ರದರ್ಶನ ಸಾಬೀತಾದರೆ ಪುಣೆ ತಂಡವನ್ನು ನಿಯಂತ್ರಿಸುವುದು ಕಷ್ಟ. ಬ್ರೆಜಿಲ್‌ನ ಆಟಗಾರ ಉತ್ತಮವಾಗಿ ಆಡುತ್ತಾರೆಂಬ ನಿರೀಕ್ಷೆ ಮಧ್ಯಂತರ ಕೋಚ್ ಪ್ರದ್ಯುಮ್ನ ರೆಡ್ಡಿ. ಈ ಫಾರ್ವರ್ಡ್ ಆಟಗಾರ ಉತ್ತಮವಾಗಿ ಆಡಿದರೆ ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಕಷ್ಟವಾಗುವುದು ಸಹಜ ಎನ್ನುತ್ತಾರೆ ರೆಡ್ಡಿ.

'ವಿರಾಮಕ್ಕೆ ಮುನ್ನ ನಾವು ಕೆಲವು ಪಂದ್ಯಗಳಲ್ಲಿ ಜಯಕ್ಕಾಗಿ ಉತ್ತಮ ಹೋರಾಟ ನೀಡಿದೆವು. ಆದರೆ ನಮಗೆ ಉತ್ತಮ ಲಿತಾಂಶ ಸಿಗಲಿಲ್ಲ. ನಮ್ಮ ತಂಡ ಆಕ್ರಮಣಕಾರಿ ಆಟ ಆಡಬಲ್ಲದು. ನಾಳೆಯ ಪಂದ್ಯದಲ್ಲೂ ನಾವು ಆಕ್ರಮಣಕಾರಿ ಆಟ ಪ್ರದರ್ಶಿಸುತ್ತೇವೆ, ಏಕೆಂದರೆ ನಮಗೆ ಮೂರು ಅಂಕಗಳ ಅಗತ್ಯವಿದೆ' ಎಂದು ರೆಡ್ಡಿ ಹೇಳಿದರು.

Story first published: Tuesday, November 27, 2018, 16:38 [IST]
Other articles published on Nov 27, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+