ಐಎಸ್‌ಎಲ್: ನಾರ್ತ್‌ಈಸ್ಟ್ ಎದುರು ಗೆದ್ದ ಗೋವಾ ಮತ್ತೊಮ್ಮೆ ಫೈವ್ ಸ್ಟಾರ್!

ಗೋವಾ, ಡಿಸೆಂಬರ್ 14: ಫರಾನ್ ಕೊರೊಮಿನಾಸ್ (59 ಮತ್ತು 84ನೇ ನಿಮಿಷ ), ಎಡು ಬೇಡಿಯ (69ನೇ ನಿಮಿಷ), ಹ್ಯೂಗೋ ಬೌಮಸ್ (71ನೇ ನಿಮಿಷ), ಹಾಗೂ ಮಿಗ್ವೆಲ್ ಫೆರ್ನಾಂಡಿಸ್ ( 90ನೇ ನಿಮಿಷ) ಗಳಿಸಿದ ಗೋಲಿನ ನೆರವಿನಿಂದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. ನಾರ್ತ್ ಈಸ್ಟ್ ಯುನೈಟೆಡ್ ಪರ ನಾಯಕ ಬಾರ್ತಲೋಮ್ಯೊ ಒಗ್ಬಚೆ 90ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು. ಈ ಜಯದೊಂದಿಗೆ ಗೋವಾ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪಿತು.
ದ್ವಿತೀಯಾರ್ಧದಲ್ಲಿ ನಾರ್ತ್ ಈಸ್ಟ್ ತಂಡ ಅತ್ಯಂತ ಹೀನಾಯ ಪ್ರದರ್ಶನ ತೋರಿತು. ಇದುವರೆಗಿನ ಅತ್ಯಂತ ಕೆಟ್ಟ ಆಟ ಎಂದರೂ ಅತಿಶಯೋಕ್ತಿ ಆಗಲಾರದು. ಪರಿಣಾಮ 59ನೇ ನಿಮಿಷದಲ್ಲಿ ಫರಾನ್ ಕೋರಿಮಿನಾಸ್ ಗಳಿಸಿದ ಗೋಲಿನಿಂದ ತಂಡ ಜಯಕ್ಕೆ ವೇದಿಕೆ ಹಾಕಿತು. ಈ ಗೋಲಿನೊಂದಿಗೆ ಕೊರೋಮಿನಾಸ್ ಗೋಲ್ಡನ್ ಬೂಟ್ ಗೆ ತನಗೆ ಎಂಬಂತೆ 9ನೇ ಗೋಲು ಗಳಿಸಿದಿರು. ಹತ್ತು ನಿಮಿಷ ಕಳೆಯುತ್ತಿದಂತೆ ಎಡು ಬೇಡಿಯ 69ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲು ಗಳಿಸಿದರು.
ಗೋವಾದ ಗೋಲಿನ ಸಂಭ್ರಮಕ್ಕೆ ಎಣಿ ಇರಲಿಲ್ಲ. ಮೂರು ನಿಮಿಷ ಕಳೆಯುತ್ತಿದಂತೆ ಹ್ಯೂಗೋ ಬೌಮೌಸ್ 71ನೇ ನಿಮಿಷದಲ್ಲಿ ತಂಡದ ಪರ ಮೂರನೇ ಗೋಲು ಗಳಿಸಿ ಜಯ ಖಚಿತ ಪಡಿಸಿದರು. 84ನೇ ನಿಮಿಷದಲ್ಲಿ ಫರಾನ್ ಕೊರೊಮಿನಾಸ್ ಪಂದ್ಯದ ಎರಡನೇ ಗೋಲು ಗಳಿಸಿ ತಮ್ಮ ವಯಕ್ತಿಕ ಗೋಲುಗಳನ್ನು ಹತ್ತಕ್ಕೆ ಕೊಂಡೊಯ್ದರು.
ಮೊದಲ 45 ನಿಮಿಷಗಳ ಪಂದ್ಯದಲ್ಲಿ ಇತ್ತಂಡಗಳು ಅತ್ಯಂತ ಎಚ್ಚರಿಕೆ ವಹಿಸಿ ಆಡಿದವು. ಪರಿಣಾಮ ಗೋಲು ದಾಖಲಾಗಲಿಲ್ಲ. ನಾರ್ತ್ ಈಸ್ಟ್ ತಂಡ ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಿಸಿದ್ದರೂ ಗೋಲು ಗಳಿಸುವಲ್ಲಿ ವಿಲವಾಗಿತ್ತು. ಒಂದೆರಡು ಅವಕಾಶ ಇತ್ತಂಡಗಳಿಗೆ ಸಿಕ್ಕಿದರೂ ಅಲ್ಲಿ ಗೋಲಿನ ಅವಕಾಶ ಅಷ್ಟು ಸುಲ'ವಾಗಿರಲಿಲ್ಲ. ಇದರೊಂದಿಗೆ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು.
ಇಂಡಿಯನ್ ಸೂಪರ್ ಲೀಗ್‌ನ 57ನೇ ಪಂದ್ಯದಲ್ಲಿ ಗೋವಾ ಹಾಗೂ ನಾರ್ತ್ ಈಸ್ಟ್ ತಂಡಗಳು ಮುಖಾಮುಖಿಯಾದವು. ಗೋವಾ ತಂಡ ಆರಂಭದಲ್ಲಿ ಮೇಲುಗೈ ಸಾಧಿಸಿದ್ದರೂ ಇತ್ತೀಚಿನ ಮೂರು ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿದೆ. ನಾಲ್ಕನೇ ಸ್ಥಾನದಲ್ಲಿ ಉಳಿದುಕೊಳ್ಳಬೇಕಾದರೆ ಗೋವಾ ತಂಡಕ್ಕೆ ಇಲ್ಲಿ ಜಯದ ಅನಿವಾರ್ಯತೆ ಇದೆ.ಗೋವಾ ತಂಡದ ಪ್ರಮುಖ ಆಟಗಾರ ಫೆರಾನ್ ಕೊರೊಮಿನಾಸ್ ಅವರಿಂದ ಗೋಲುದಾಖಲಾಗುತ್ತಿಲ್ಲ.
ಇದು ತಂಡದ ಮುನ್ನಡೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಎಂಟು ಗೋಲುಗಳನ್ನು ಗಳಿಸಿರುವ ಕೊರೊಮಿನಾಸ್ ಒಂದು ಪಂದ್ಯ ಅಮಾನತುಗೊಂಡ ನಂತರ ಮತ್ತೆ ಗೋಲು ಗಳಿಸಲೇ ಇಲ್ಲ. ನಾರ್ತ್ ಈಸ್ಟ್ ತಂಡ ಈಬಾರಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಈಗಾಗಲೇ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಾರ್ತಲೋಮ್ಯೊ ಒಗ್ಬಚೆ ಕೂಡ ಎಂಟು ಗೋಲುಗಳನ್ನು ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಆದರೆ ಇತ್ತೀಚಿನ ಪಂದ್ಯಗಳಲ್ಲಿ ಅವರು ಗೋಲು ಗಳಿಸುತ್ತಿಲ್ಲ. ನೈಜೀರಿಯಾದ ಆಟಗಾರನ ಇತ್ತೀಚಿನ ವೈಲ್ಯ ಕೂಡ ತಂಡದ ಮುನ್ನಡೆಗೆ ಅಡ್ಡಿಯಾಗಿದೆ.
22 ಗೋಲುಗಳನ್ನು ಗಳಿಸಿರುವ ಗೋವಾ ತಂಡ ಐಎಸ್‌ಎಲ್‌ನಲ್ಲಿ ಅತಿ ಹೆಚ್ಚು ಗೋಲುಗಳಿಸಿರುವ ತಂಡವೆನಿಸಿದೆ. ನಾರ್ತ್ ಈಸ್ಟ್ ತಂಡ ಗೋಲು ಗಳಿಕೆಯಲ್ಲಿ ಗೋವಾಕ್ಕಿಂತ ಹಿಂದೆ ಇರಬಹುದು, ಆದರೆ ಕೇವಲ ಆರು ಗೋಲುಗಳ ಹಿಂದೆ ಇದೆ.ಅಂಕ ಕಳೆದುಕೊಂಡಿರುವ ನಾಲ್ಕು ಪಂದ್ಯಗಳಲ್ಲಿ ಗೋವಾ ತಂಡವನ್ನು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮೊದಲು ಎದುರಾಳಿ ತಂಡಕ್ಕೆ ಗೋಲು ನೀಡಿ ನಂತರ ಗೋಲಿಗಾಗಿ ಪರದಾಡಿದ್ದು. ಬಳಿಕ ಸಮಬಲ ಸಾಧಿಸಲು ಹೆಣಗಾಡಿದ್ದು. ಈ ಗೊಂದಲದಿಂದ ಹೊರ ಬಂದು ತಂಡ ಜಯದ ಹಾದಿ ಕಂಡುಕೊಳ್ಳಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications