ಐಎಸ್‌ಎಲ್ 2018: ಜೆಮ್ಷೆಡ್ಪುರ ಎಫ್‌ಸಿ-ಕೇರಳ ಎಫ್‌ಸಿ ಸಮಬಲದ ಹೋರಾಟ

ಜೆಮ್ಷೆಡ್ಪುರ, ಅಕ್ಟೋಬರ್ 29: ಪ್ರಥಮಾರ್ಧದಲ್ಲಿ ಜೆಮ್ಷೆಡ್ಪುರ ಪರ ಟಿಮ್ ಕಾಹಿಲ್ (3ನೇ ನಿಮಿಷ) ಹಾಗೂ ಮೈಕಲ್ ಸುಸೈರಾಜ್ (31ನೇ ನಿಮಿಷ) ಗಳಿಸಿದ ಗೋಲು ಹಾಗೂ ಕೇರಳ ಪರ ಸ್ಲಾವಿಸ್ಲ ಸ್ಟೋಜನೊವಿಚ್ ( 71ನೇ ನಿಮಿಷ) ಸಿ ಕೆ ವಿನೀತ್ (86 ನೇ ನಿಮಿಷದಲ್ಲಿ) ಗಳಿಸಿದ ಗೋಲಿನಿಂದ ಪಂದ್ಯ 2-2 ಗೋಲಿನಿಂದ ಸಮಬಲಗೊಂಡು ಅಂಕ ಹಂಚಿಕೊಂಡರು.
ಸ್ಲಾವಿಸ್ಲ ಸ್ಟೋಜನೊವಿಚ್ 71ನೇ ನಿಮಿಷ ಹಾಗೂ ಸಿ ಕೆ ವಿನೀತ್ 86 ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಕೇರಳ ಬ್ಲಾಸ್ಟರ್ಸ್ ತಂಡ ದ್ವಿತೀಯಾರ್ಧದಲ್ಲಿ ತಕ್ಕ ತಿರುಗೇಟು ನೀಡುವ ಮೂಲಕ ಪಂದ್ಯ ಕೊನೆಯ ಕ್ಷಣದಲ್ಲಿ ಸಮಬಲ ಸಾಧಿಸಿತು. ಪ್ರಥಮಾರ್ಧ ಜೆಮ್ಷೆಡ್ಪುರ ಮೇಲುಗೈಸಾಧಿಸಿದರೆ ಕೇರಳ ದ್ವಿತೀಯಾರ್ಧದಲ್ಲಿ ಪ್ರಭುತ್ವ ಕಂಡಿತು.
ಕೇರಳ ಮೌನ, ಟಾಟಾ ಮೇಲುಗೈ
31ನೇ ನಿಮಿಷದಲ್ಲಿ ಮೈಕಲ್ ಸುಸೈರಾಜ್ ಎಡಭಾಗದಿಂದ ಬಂದ ಚೆಂಡನ್ನು ಸುಲಭವಾಗಿ ನೆಟ್‌ಗೆ ತಳ್ಳುವಲ್ಲಿ ಸಲರಾದರು. ನವೀನ್ ಕುಮಾರ್ ಅವರ ಪ್ರಯತ್ನಕ್ಕೆ ಚೆಂಡನ್ನು ತಡೆಯಲಾಗಲಿಲ್ಲ. ಟಾಟಾ ಪಡೆಗೆ 2-0 ಗೋಲಿನಿಂದ ಮುನ್ನಡೆ. 41ನೇ ನಿಮಿಷದಲ್ಲಿ ಸರ್ಗಿಯೋ ಸಿಡೊಂಚಾ ನೀಡಿದ ಪಾಸ್ ಮೂಲಕ ಗೋಲು ದಾಖಲಾಗುವ ಸಾಧ್ಯತೆ ಇದ್ದಿತ್ತು. ಆದರೆ ಹೆಡರ್ ಮೂಲಕ ಸಿಡಿದ ಚೆಂಡು ಗೋಲ್‌ಬಾಕ್ಸ್‌ನಿಂದ ಹೊರ ಸಾಗಿತು. ಕೇರಳ ಆಟಕ್ಕೆ ಹೊಂದಿಕೊಳ್ಳುತ್ತಿದ್ದಂತೆಯೇ ಜೆಮ್ಷೆಡ್ಪುರ ಗೋಲು ಗಳಿಸಿ ಮೇಲುಗೈ ಸಾಧಿಸಿತು.
ಖಾತೆ ತೆರೆದ ಟಿಮ್ ಕಾಹಿಲ್
ಆಸ್ಟ್ರೇಲಿಯಾದ ಪರ ನಾಲ್ಕು ಫಿಫಾ ವಿಶ್ವಕಪ್ ಪಂದ್ಯಗಳನ್ನು ಆಡಿರುವ ಟಿಮ್ ಕಾಹಿಲ್ ಇದುವರೆಗೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುವಲ್ಲಿ ವಿಲರಾಗಿದ್ದರು. ಆದರೆ ಕೇರಳ ಬ್ಲಾಸ್ಟರ್ಸ್ ವಿರುದ್ಧ ಮನೆಯಂಗಣದಲ್ಲಿ ನಡೆದ ಪಂದ್ಯದ ಆರಂಭದಲ್ಲೇ ಗೋಲು ಗಳಿಸಿ ತಾನೊಬ್ಬ ಶ್ರೇಷ್ಠ ಆಟಗಾರ ಎಂಬುದನ್ನು ತೋರಿಸಿದರು. ಆರಂಭದಲ್ಲೇ ತಮ್ಮ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ ಜೆಮ್ಷೆಡ್ಪುರ ತಂಡದ ಆಟಗಾರರಿಗೆ ಯಶಸ್ಸು ಸಿಕ್ಕಿತು. 3ನೇ ನಿಮಿಷದಲ್ಲಿ ಸರ್ಗಿಯೋ ಸಿಡೊಂಚಾ ಬಲಭಾಗದಿಂದ ನೀಡಿದ ಉತ್ತಮ ಪಾಸ್‌ಗೆ ಕಾಹಿಲ್ ಹೆಡರ್ ಮೂಲಕ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು.
ಸಮಬಲರ ಹೋರಾಟ
ಇಂಡಿಯನ್ ಸೂಪರ್ ಲೀಗ್‌ನ 22ನೇ ಪಂದ್ಯದಲ್ಲಿ ಸೆಣಸಲು ಸಜ್ಜಾದ ಕೇರಳ ಬ್ಲಾಸ್ಟರ್ಸ್ ಹಾಗೂ ಜೆಮ್ಷೆಡ್ಪುರ ಎಫ್ಸಿ ತಂಡಗಳು ಸಮರಕ್ಕೆ ಸಜ್ಜಾದವು. ಅಂಕ ಪಟ್ಟಿಯಲ್ಲಿ ಇತ್ತಂಡಗಳು ಮಧ್ಯಂತರದಲ್ಲಿವೆ. ಇಲ್ಲಿ ಗೆಲ್ಲುವ ತಂಡ ನೇರವಾಗಿ ಎರಡನೇ ಸ್ಥಾನ ತಲುಪಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications