ಐಎಸ್‌ಎಲ್ 2018: ಎಟಿಕೆ ವಿರುದ್ಧ ಬೆಂಗಳೂರು ಎಫ್‌ಸಿಗೆ ಗೆಲುವು

ಬೆಂಗಳೂರು, ಅಕ್ಟೋಬರ್ 31: ಮಿಕು (45ನೇ ನಿಮಿಷ) ಹಾಗೂ ಎರಿಕ್ ಪಾರ್ಥಲು (47ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಬೆಂಗಳೂರು ಎಫ್ ಸಿ ತಂಡ ಎಟಿಕೆ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಎಟಿಕೆ ಪರ ಕೋಮಲ್ ಥಟಾಲ್ 15ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕೆಡಿಮೆ ಮಾಡಿತು. ಕೊನೆಗೂ ಎಟಿಕೆ ತಂಡಕ್ಕೆ ಬೆಂಗಳೂರು ವಿರುದ್ಧ ಜಯಗಳಿಸಲು ಸಾಧ್ಯವಾಗಲಿಲ್ಲ. ಈ ಜಯದೊಂದಿಗೆ ಒಟ್ಟು 10 ಅಂಕಗಳನ್ನು ಗಳಿಸಿದ ಬೆಂಗಳೂರು ಎಫ್ ಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ತಲುಪಿತು.
ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಎಟಿಕೆ ಪಂದ್ಯ ಆರಂಭಗೊಂಡ 15ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ಸುಸ್ಥಿತಿಯಲ್ಲಿತ್ತು. ಆದರೆ ಬೆಂಗಳೂರು ತನ್ನ ಹೋರಾಟವನ್ನು ಮುಂದುವರಿಸಿತು. ಪ್ರಥಮಾರ್ಧ ನಮ್ಮದೇ ಮೇಲುಗೈ ಎಂದು ಎಟಿಕೆ ಯೋಚಿಸುತ್ತಿರುವಾಗಲೇ ಕೊನೆಯ 45ನೇ ನಿಮಿಷದಲ್ಲಿ ಮಿಕು ಮ್ಯಾಜಿಕ್ ಫಲಿಸಿತು. ಅದೊಂದು ಅದ್ಭುತ ಗೋಲು. ಈ ಬಾರಿಯ ಐಎಸ್‌ಎಲ್‌ನಲ್ಲೇ ದಾಖಲಾದ ಉತ್ತಮ ಗೋಲೆಂದರೆ ಅತಿಶಯೋಕ್ತಿ ಆಗಲಾರದು. ಆ ಗೋಲು ಗಳಿಸಿರುವುದು ಮಿಕು.
ಮಿಕು ಚೆಂಡನ್ನು ದಿಮಾಸ್ ಡೆಲ್ಗಾಡೋ ನೀಡಿದ ಪಾಸ್ ಮೂಲಕ ಗೋಲು ದಾಖಲಾಗುತ್ತದೆ ಯಾರೂ ಊಹಿಸಿರಲಿಲ್ಲ. ಆದರೆ ಮಿಕು ಗುರಿ ಮಾತ್ರ ಗೋಲ್‌ಬಾಕ್ಸ್ ಕಡೆಗೇ ಇದ್ದಿತ್ತು. ಅತ್ಯಂತ ವೇಗದಲ್ಲಿ ತುಳಿದ ಚೆಂಡನ್ನು ಎಟಿಕೆ ಗೋಲ್‌ಕೀಪರ್ ಅರಿಂದಂ ಭಟ್ಟಾಚಾರ್ಯ ಅವರಿಗೆ ತಡೆಯಲಾಗಲಿಲ್ಲ. ಬಿಎಫ್ಸಿ ಪಡೆಯಲ್ಲಿ ಸಂಭ್ರಮ, ಕೋಲ್ಕೊತಾದ ಯುವಭಾರತಿ ಕ್ರೀಡಾಂಗಣದಲ್ಲಿ ಮೌನ. ಪ್ರಥಮಾರ್ಧ 1-1ರಲ್ಲಿ ಸಮಬಲ.
ಥಟಾಲ್ ಗೋಲಿಗೆ ಬಿಎಫ್ಸಿ ತಟಸ್ಥ
ಹಿಂದಿನ ಲೆಕ್ಕಾಚಾರಗಳು ಕೆಲವೊಮ್ಮೆ ಉಪಯೋಗಕ್ಕೆ ಬರುವುದಿಲ್ಲ. ಆ ದಿನವೇ ಬೇರೆ, ಈ ದಿನವೇ ಬೇರೆ. ಕೊಮಲ್ ಥಟಾಲ್ 15ನೇ ನಿಮಿಷದಲ್ಲಿ ಅದನ್ನು ಸಾಬೀತುಪಡಿಸಿದರು. ಎವರ್ಟನ್ ಸ್ಯಾಂಟೋಸ್ ನೀಡಿದ ಪಾಸ್ ಅನ್ನು ಸರಿಯಾದ ಮಾರ್ಗದಲ್ಲಿ ಕಳುಹಿಸಲು ಥಟಾಲ್‌ಗೆ ಅನುಕೂಲವಾಗಿತ್ತು. ಚೆಂಡನ್ನು ನಿಯಂತ್ರಿಸುತ್ತಲೇ ಗೋಲ್‌ಕೀಪರ್ ಅವರ ಚಲನೆಯನ್ನು ಗಮನಿಸಿದ ಥಾಟಲ್ ಅತ್ಯಂತ ಸುಲಭವಾಗಿ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಳ್ಳಿದರು. ಗುರ್‌ಪ್ರೀತ್ ಸಿಂಗ್ ಸಂಧೂ ಎಡಭಾಗಕ್ಕೆ ಹಾರಿ ಯತ್ನಿಸಿದರೂ ಚೆಂಡು ಅಷ್ಟರಲ್ಲೇ ನೆಟ್‌ಗೆ ಮುತ್ತಿಟ್ಟಿತ್ತು. ಬೆಂಗಳೂರು ಗೋಲಿನ ಖಾತೆ ತೆರೆಯುತ್ತದೆ ಎಂಬ ನಿರೀಕ್ಷೆ ಫುಟ್ಬಾಲ್ ಪಂಡಿತರದ್ದಾಗಿತ್ತು. ಆದರೆ ಎಟಿಕೆ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿತು. ಚೆನ್ನೈ ವಿರುದ್ಧ ಮನೆಯಂಗಣದಲ್ಲಿ ದಕ್ಕಿದ ಜಯವೇ ತಂಡದ ಈ ಆತ್ಮವಿಶ್ವಾಸದ ಆಕ್ರಮಣಕ್ಕೆ ಕಾರಣ ಎಂದರೆ ತಪ್ಪಾಗಲಾರದು.
{document1}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications