For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಪ್ರತಿಷ್ಠೆಗಾಗಿ ಚೆನ್ನೈಯಿನ್-ಡೆಲ್ಲಿ ಡೈನಮೋಸ್ ಕಾದಾಟ

By Isl Media
ISL 2018 Live Score: Chennaiyin FC vs Delhi Dynamos FC

ಚೆನ್ನೈ ಡಿಸೆಂಬರ್ 15: ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಂತಿಮ ನಾಲ್ಕರ ಹಂತ ತಲಪುವಲ್ಲಿ ವಿಲವಾಗಿರುವ ಹಾಲಿ ಚಾಂಪಿಯನ್ ಚೆನ್ನೈಯನ್ ಎಫ್ ಸಿ ಹಾಗೂ ಡೆಲ್ಲಿ ಡೈನಮೋಸ್ ತಂಡಗಳು ಉಳಿದಿರುವ ಪಂದ್ಯಗಳಲ್ಲಿ ತಮ್ಮ ಘನತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಶನಿವಾರ (ಡಿಸೆಂಬರ್ 15) ಇಲ್ಲಿನ ಮರಿನಾ ಅರೆನಾದಲ್ಲಿ ಹೋರಾಟ ನಡೆಸಲಿವೆ.

ಸ್ಕೋರ್‌ಕಾರ್ಡ್ ಕೆಳಗಿದೆ

1
1022357

ಈ ಋತುವಿನಲ್ಲಿ ಜಯಕ್ಕಾಗಿ ಪರದಾಡಿರುವ ಈ ಎರಡೂ ತಂಡಗಳು ಅಂಕ ಪಟ್ಟಿಯಲ್ಲಿ ಅನುಕ್ರಮವಾಗಿ ಒಂಬತ್ತು ಹಾಗೂ ಹತ್ತನೇ ಸ್ಥಾನದಲ್ಲಿವೆ. ಪ್ಲೇ ಆಫ್ ಆಸೆ ದೂರವಾಗಿರುವ ಹಿನ್ನೆಲೆಯಲ್ಲಿ ಉಳಿದಿರುವ ಪಂದ್ಯದಲ್ಲಿ ಮೂರು ಅಂಕಗಳನ್ನು ಗಳಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ಯತ್ನದಲ್ಲಿವೆ.

ಎರಡೂ ತಂಡಗಳು ಉತ್ತಮವಾಗಿ ಆಡಿದರೂ ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಲವಾಗಿವೆ. ಫಾರ್ವರ್ಡ್ ವಿಭಾಗದ ವೈಲ್ಯವೇ ಇದಕ್ಕೆ ಕಾರಣ ಎನ್ನಬಹುದು. ಜೆಜೆ ಲಾಲ್ ಫೆಖ್ಲುವಾ ಹಾಗೂ ಕಾರ್ಲೋಸ್ ಸಲೋಮ್ ವಿಲವಾಗಿರುವುದು ತಂಡದ ಯಶಸ್ಸಿನ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು. ಡೆಲ್ಲಿ ಡೈನಮೋಸ್ ಪರ ಅಂಡ್ರಿಜಾ ಕಲುಡೆರೊವಿಕ್ ಕೂಡ ಒಂದು ಗೋಲು ಗಳಿಸಿ ನಿರಾಸೆ ಮೂಡಿಸಿದ್ದಾರೆ.

'ಪ್ಲೇ ಆಫ್ ಹಂತ ತಲಪುವಲಿಲ ಡೆಲ್ಲಿ ಡೈನಮೋಸ್ ತಂಡಕ್ಕೆ ನಿಜವಾಗಿಯೂ ಸಾಮರ್ಥ್ಯ ಇದ್ದಿತ್ತು. ಪ್ರತಿಯೊಂದು ಪಂದ್ಯದಲ್ಲೂ ಪ್ರ'ುತ್ವ ಸಾಧಿಸಿದ ತಂಡ ಗೋಲು ಗಳಿಸುವಲ್ಲಿವಿವಾಗಿತ್ತು. ನಮ್ಮ ತಂಡವು ಕೂಡ ಇದೇ ರೀತಿಯ ಹಾದಿಯಲ್ಲಿ ಸಾಗಿ ಬಂದಿತ್ತು,' ಎಂದು ಚೆನ್ನೆ'ಯಿನ್ ತಂಡದ ಕೋಚ್ ಜಾನ್ ಗ್ರೆಗೋರಿ ಹೇಳಿದ್ದಾರೆ.

ಎರಡೂ ತಂಡಗಳ ತರಬೇತುದಾರರು ಯಶಸ್ಸಿನ ಹಾದಿ ತುಳಿಯಲು 19 ರಿಂದ 20 ಆಟಗಾರರನ್ನು ಆಡಿಸಿದರು. ಆದರೂ ಯಶಸ್ಸಿನ ಹಾದಿ ಸಿಗಲಿಲ್ಲ. ಕೋಚ್ ಗ್ರೆಗೋರಿ ಪ್ರಕಾರ ತಮ್ಮ ತಂಡದ ಡಿಫೆನ್ಸ್ ವಿಭಾಗ ವಿಫಲವಾಗಿದೆ ಎಂದಿದ್ದಾರೆ. 'ಇಂಡಿಯನ್ ಸೂಪರ್ ಲೀಗ್‌ನಲ್ಲಿ ಯಾರೂ ತಮ್ಮ ಪ್ರಶಸ್ತಿಯನ್ನು ಕಾಯ್ದುಕೊಳ್ಳಲು ಯತ್ನಿಸುತ್ತಿಲ್ಲ ಎಂಬುದು ಅಚ್ಚರಿಯನ್ನುಂಟು ಮಾಡಿದೆ. ಆದರೆ ನಮ್ಮ ತಂಡದಲ್ಲಿ ಪ್ರಶಸ್ತಿಯನ್ನು ಕಾಯ್ದುಕೊಳ್ಳುವ ಹಸಿವಿದ್ದರೂ ಆ ಹಸಿವನ್ನು ನೀಗಿಸಲಾಗಲಿಲ್ಲ, ನಾವು ಪ್ಲೆ' ಆಫ್ ಹಂತವನ್ನು ತಲಪುವಲ್ಲಿ ವಿಲವಾಗುವ ಮೂಲಕ ಪ್ರಶಸ್ತಿಯನ್ನು ಕಾಯ್ದುಕೊಳ್ಳುವ ಅವಕಾಶದಿಂದ ವಂಚಿತರಾದೆವು,' ಎಂದು ಗ್ರೆಗೋರಿ ಹೇಳಿದ್ದಾರೆ.

Story first published: Saturday, December 15, 2018, 19:19 [IST]
Other articles published on Dec 15, 2018
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+