ಐಎಸ್‌ಎಲ್: ಸೊರಗಿದ ಮುಂಬೈ ಸಿಟಿ ಎಫ್‌ಸಿಗೆ ಡೆಲ್ಲಿ ಡೈನಮೋಸ್ ಸವಾಲು

ಮುಂಬೈ ಅಕ್ಟೋಬರ್ 26: ಮುಂಬೈಯಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಶನಿವಾರ (ಅಕ್ಟೋಬರ್ 27) ಮುಂಬೈ ಸಿಟಿ ಎಫ್‌ಸಿ ಮತ್ತು ಡೆಲ್ಲಿ ಡೈನಮೋಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಸಿಟಿ ಎಫ್‌ಸಿ ತಂಡ ಪಣೆ ಸಿಟಿ ಎಫ್ ಸಿ ವಿರುದ್ಧದ ಪಂದ್ಯದ ನಂತರ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಡ್ರಾ ಹಾಗೂ ಎರಡು ಸೋಲು ಅನುಭವಿಸಿದೆ. ಡೆಲ್ಲಿ ಡೈನಮೋಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಡ್ರಾ ಹಾಗೂ ಒಂದು ಸೋಲು ಕಂಡಿದೆ. ಡೆಲ್ಲಿಗೆ ಇಲ್ಲಿ ಜಯದ ಅಗತ್ಯವಿದೆ.
ಚೆನ್ನೈಯನ್ ವಿರುದ್ಧ ಡ್ರಾ ಸಾಧಿಸಿದ ಡೆಲ್ಲಿ ತಂಡ ಅತ್ಯಂತ ಆತ್ಮವಿಶ್ವಾಸದಲ್ಲಿ ಮುಂಬೈಗೆ ಆಗಮಿಸಿತು. ಗೋವಾ ವಿರುದ್ಧ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ 5-0 ಗೋಲುಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿರುವುದು ತಂಡದ ಮನೋಬಲವನ್ನು ಕುಸಿಯುವಂತೆ ಮಾಡಿದೆ.
ಪುಣೆ ಸಿಟಿ ಹಾಗೂ ಚೆನ್ನೈಯಿನ್ ತಂಡಗಳ ಜತೆಯಲ್ಲಿ ಡೆಲ್ಲಿ ಕೂಡ ಮೊದಲ ಜಯದ ನಿರೀಕ್ಷೆಯಲ್ಲಿದೆ. ಗೋಲ್‌ಬಾಕ್ಸ್‌ಗೆ ಗುರಿ ಇಟ್ಟು ಹೊಡೆಯುವಲ್ಲಿ ಡೆಲ್ಲಿ ಡೈನಮೋಸ್ ತಂಡದ ವಿಫಲವಾಗಿದೆ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಅಟ್ಯಾಕಿಂಗ್ ಹಾಗೂ ಶಾಟ್ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಗೋಲು ಗಳಿಕೆಯಲ್ಲಿ ತಂಡ ಹಿಂದೆ ಬಿದ್ದಿದೆ. ತಂಡದ ನಿಖರತೆ ಕೂಡ ಉತ್ತಮವಾಗಿಲ್ಲ.
ಎಟಿಕೆ ವಿರುದ್ಧ ಮನೆಯಂಗಣದಲ್ಲಿ ಸೋತಿರುವುದು ಡೆಲ್ಲಿ ತಂಡದ ಮೊದಲ ಆಘಾತ ಅನುಭವಿಸಿತ್ತು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಡೆಲ್ಲಿತಂಡ ಹತ್ತು ಗೋಲು ಗಳಿಸಿತ್ತು, ಆದರೆ ಇತ್ತೀಚಿನ ಒಂಬತ್ತು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ಒಂದು ಗೋಲು.
ಮುಂಬೈ ಸಿಟಿ ತಂಡ ಗೋವಾ ವಿರುದ್ಧ ಸೋತಿರುವುದನ್ನು ಕೂಡಲೇ ಮರೆಯಬೇಕಾಗಿದೆ. ಜಾರ್ಜ್ ಕೋಸ್ಟಾ ಅವರಲ್ಲಿ ತರಬೇತಿ ಪಡೆಯುತ್ತಿರುವ ಮುಂಬೈ ಸಿಟಿ ತಂಡ 0-5 ಅಂತರದಲ್ಲಿ ಸೋಲನುಭವಿಸಿತ್ತು. ಆದರೆ ಶನಿವಾರ ಮುಂಬೈ ಅರೆನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲ್ಲಬೇಕಾದರೆ ಹಿಂದಿನ ಸೋಲನ್ನು ಮರೆಯಬೇಕಾಗಿದೆ. ಗೋವಾ ವಿರುದ್ಧ ತಂಡ ಸೋತಿರುವು ಮಾತ್ರವಲ್ಲ ಸೋತಿರುವ ರೀತಿ ಕೋಚ್ ಕೋಸ್ಟಾ ಅವರನ್ನು ಸಾಕಷ್ಟು ನೋವಿಗೆ ಗುರಿಯಾಗುವಂತೆ ಮಾಡಿದೆ.
'ಗೋವಾ ವಿರುದ್ಧದ ಮೊದಲಾರ್ಧದಲ್ಲಿ ನಾವು ಉತ್ತಮವಾಗಿ ಆಡಿದೆವು. ನಾನು ಹೇಳಿದಂತೆ ಆಟಗಾರರು ಆಡಿದ್ದಾರೆ. ದ್ವಿತೀಯಾರ್ಧ 20 ನಿಮಿಷಗಳ ಆಟವೂ ಉತ್ತಮವಾಗಿತ್ತು. ಆ ನಂತರ ನಾವು ಅವರಿಗೆ ಅವಕಾಶವನ್ನು ನೋಡಿದೆವು. ಅದಕ್ಕಾಗಿ ನನಗೆ ನೋವಾಗಿದೆ. ಸೋತ ರೀತಿ. ಕೊನೆಯ 15 ನಿಮಿಷಗಳಲ್ಲಿ ತಂಡ ಪಂದ್ಯವನ್ನು ಯಾವಾಗ ಮುಗಿಸುವುದು ಎಂದು ಬಿಡುತ್ತಿತ್ತು. ಅವರು ಓಡುತ್ತಿರಲಿಲ್ಲ, ಚೆಂಡಿನ ಮೇಲೆ ನಿಯಂತ್ರಣವನ್ನೂ ಸಾಧಿಸುತ್ತಿರಲಿಲ್ಲ' ಎಂದು ಕೋಸ್ಟಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications