ಐಎಸ್‌ಎಲ್ 2018, Live Score: ದಾಖಲೆಗೆ ಮುಂಬೈ, ಪವಾಡಕ್ಕೆ ಚೆನ್ನೈ ಗುರಿ

ಮುಂಬೈ ಡಿಸೆಂಬರ್ 6: ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮುಂಬೈ ಸಿಟಿ ಫುಟ್ಬಾಲ್ ಕ್ಲಬ್ ಉತ್ತಮ ಸಾಧನೆ ಮಾಡಿದೆ, ಆದರೆ ಜಾರ್ಜ್ ಕೋಸ್ಟಾ ಪಡೆಗೆ ಇನ್ನೂ ಸಾಕಷ್ಟು ಯಶಸ್ಸು ಕಾಣಬೇಕಾದ ಅಗತ್ಯವಿದೆ. ಸೋತು ಕಂಗಾಲಾಗಿರುವ ಚೆನ್ನೈಯಿನ್ ತಂಡದ ವಿರುದ್ಧ ಗುರುವಾರ ನಡೆಯುವ ಪಂದ್ಯದಲ್ಲಿ ಜಯ ಗಳಿಸಿ ತನ್ನ ನಿರಂತರ ಜಯದ ಓಟವನ್ನು ಮುಂದುವರಿಸುವ ಗುರಿಯನ್ನು ಮುಂಬೈ ಹೊಂದಿದೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಇದುವರೆಗೂ ನಡೆದಿರುವ ಐದು ಪಂದ್ಯಗಳಲ್ಲಿ ಮುಂಬೈ ನಾಲ್ಕರಲ್ಲಿ ಜಯ ಗಳಿಸಿದೆ. ಚೆನ್ನೈ ತಂಡದ ವಿರುದ್ಧ ಜಯ ಗಳಿಸಿದರೆ ಮುಂಬೈ ಇಂಡಿಯನ್ ಸೂಪರ್ ಲೀಗ್ ಇತಿಹಾಸದಲ್ಲೇ ನಿರಂತರ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಬರೆಯಲಿದೆ. ಗೋವಾ ವಿರುದ್ಧದ ಪಂದ್ಯದಲ್ಲಿ ಐದು ಗೋಲುಗಳನ್ನು ನೀಡಿದ ಬಳಿಕ ಮುಂಬೈ ಆ ನಂತರದ ಪಂದ್ಯಗಳಲ್ಲಿ ಎದುರಾಳಿಗೆ ನೀಡಿದ್ದು ಬರೇ ಎರಡು ಗೋಲು. ಗೋವಾ ವಿರುದ್ದದ ಹೀನಾಯ ಸೋಲಿನಿಂತ ಪಾಠ ಕಲಿತ ಮುಂಬೈ ಆ ನಂತರದ ಪಂದ್ಯಗಳಲ್ಲಿ ನಿರಂತರ ಯಶಸ್ಸು ಕಂಡಿದೆ. ವಿದೇಶಿ ಆಟಗಾರರು ಕಂಡ ಯಶಸ್ಸು ತಂಡದ ಮುನ್ನಡೆಗೆ ಕಾರಣವಾಯಿತು.
'ಕಳೆದ ಋತುವಿಗೆ ಹೋಲಿಕೆ ಮಾಡಿದರೆ ನಾವು ಸಾಕಷ್ಟು ಬದಲಾವಣೆಗಳನ್ನು ಕಂಡಿದ್ದೇವೆ. ಋತುವಿನ ಆರಂಭದಲ್ಲಿ ನಮಗೆ ಹೆಚ್ಚಿನ ಸಮಯಾವಕಾಶ ಸಿಗಲಿಲ್ಲ, ನಮಗೆ ಹೊಂದಿಕೊಳ್ಳಲು ಕಾಲಾವಕಾಶ ಬೇಕಾಗಿತ್ತು. ಈಗ ಯಾವುದೇ ಕ್ಷಮೆ ಇಲ್ಲ, ನಿರಂತರ ಹೋರಾಟ ನೀಡಿ ಮೂರು ಅಂಕಗಳನ್ನು ಗಳಿಸಬೇಕಾಗಿದೆ' ಎಂದು ಕೋಸ್ಟಾ ಹೇಳಿದ್ದಾರೆ.

ಮುಂಬೈಯ ಪ್ರಮುಖ ಅಸ್ತ್ರ ಪೌಲೊ
ಮಿಡ್‌ಫೀಲ್ಡ್‌ನಲ್ಲಿ ಪೌಲೊ ಮಚಾಡೊ ಮುಂಬೈ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಅದೇ ರೀತಿ ಅರ್ನಾಲ್ಡೋ ಇಸ್ಸಾಕೋ ಕೂಡ ಉತ್ತಮವಾಗಿ ಚೆಂಡನ್ನು ನಿಯಂತ್ರಿಸುತ್ತಿರುವುದು ಎದುರಾಳಿ ತಂಡಕ್ಕೆ ಕಠಿಣ ಸವಾಲೆನಿಸಿದೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ 1-0 ಅಂತರದಲ್ಲಿ ಗೆದ್ದ ನಂತರ ಮೌಡೌ ಸೌಗೌ ಗೋಲು ಗಳಿಸುವಲ್ಲಿ ವಿಲರಾಗಿದ್ದಾರೆ. ಆದರೆ ಗುರುವಾರ ನಡೆಯುವ ಪಂದ್ಯದಲ್ಲಿ ಡಿಫೆನ್ಸ್ ವಿಭಾಗದಲ್ಲಿ ಕ್ಷೀಣವಾಗಿರುವ ಚೆನ್ನೈಯಿನ್ ವಿರುದ್ಧ ಅವರಿಗೆ ಗೋಲು ಗಳಿಸಲು ಉತ್ತಮ ಅವಕಾಶವಿದೆ.

ಸಾಧನೆಯ ಬಗ್ಗೆ ಮೆಚ್ಚುಗೆ
ಚೆನ್ನೈಯಿನ್ ತಂಡದ ಕೋಚ್ ಜಾನ್ ಗ್ರೆಗೋರಿ ಕೂಡ ಎದುರಾಳಿ ತಂಡದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ., ‘ನನ್ನ ಪ್ರಕಾರ ಮುಂಬೈ ತಂಡ ಉತ್ತಮ ರೀತಿಯಲ್ಲಿ ಸಮತೋಲನ ಹೊಂದಿರುವ ತಂಡ. ಅರ್ನಾಲ್ಡ್ ಅವರಿಂದ ಚೆಂಡನ್ನು ವಶಪಡಿಸಿಕೊಳ್ಳುವುದು ಕಷ್ಟ. ಮತಿಯಾಸ್ ಮಿರಾಬಜೆ ಕೂಡ ಉತ್ತಮ ಆಟಗಾರ. ಆದರೆ ಅವರು ಆಗಾಗ ಗಾಯಗೊಳ್ಳುತ್ತಿದ್ದಾರೆ. ನಾಯಕ ಲೂಸಿಯಾನ್ ಗೊಯೆನ್ ಕೂಡ ಉತ್ತಮ ಆಟಗಾರ. ಆದರೆ ಆ ತಂಡದ ಶಕ್ತಿ ಎಂಬುದು ಸಂಘಟಿತ ಶಕ್ತಿಯ ಮೇಲೆ ಅವಲಂಬಿಸಿದೆ, ಅವರಂತೆಯೇ ನಮ್ಮ ತಂಡ ಸಮತೋಲನದಿಂದ ಕೂಡಿದೆ,‘ ಎಂದು ಗ್ರೆಗೋರಿ ಹೇಳಿದರು.

ಕಳಪೆ ಪ್ರದರ್ಶನ
ಚೆನ್ನೈ ತಂಡ ಈ ಋತುವನ್ನು ಮರೆತು ಬಿಡುವ ರೀತಿಯಲ್ಲಿ ಕಳಪೆ ಪ್ರದರ್ಶನ ತೋರಿದೆ. ಆಡಿರುವ ಹತ್ತು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ಐದು ಅಂಕಗಳು. ಇನ್ನು ಎಂಟು ಪಂದ್ಯಗಳು ಬಾಕಿ ಇದ್ದು, ಪವಾಡ ನಡೆದರೆ ಮಾತ್ರ ಚೆನ್ನೆ' ಟಾಪ್ ನಾಲ್ಕರ ಸ್ಥಾನ ತಲುಪಲಿದೆ. 'ನಾವು ಪ್ಲೇ ಆಫ್ ಹಂತದಿಂದ ದೂರ ಉಳಿದಿದ್ದೇವೆ, ಉಳಿದಿರುವ ಎಲ್ಲ ಎಂಟು ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆ್‌ನ ಹತ್ತಿರ ತಲುಪಬಹುದು. ಫುಟ್ಬಾಲ್ ಅಂದರೆ ಫುಟ್ಬಾಲ್. ಇದರಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ನಮ್ಮ ಗೌರವಕ್ಕಾಗಿಯಾದರೂ ಕೆಲವು ಅಂಕಗಳನ್ನು ಗಳಿಸಬೇಕಾಗಿದೆ. ಈ ಋತುವಿನಲ್ಲಿ ನಾವು ನಮ್ಮ ಸಾಮರ್ಥ್ಯಕ್ಕೆ ಹತ್ತಿರವಾಗಿಯೂ ಆಡಲಿಲ್ಲ' ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications