Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಸೋಲಿಲ್ಲದ ಸರದಾರನಾಗಿ ಮುಂದುವರೆದ ಸುನಿಲ್ ಛೆಟ್ರಿ ಬಳಗ

ISL 2018: Mumbai City FC hold Bengaluru FC to 1-1 draw

ಬೆಂಗಳೂರು, ಡಿಸೆಂಬರ್ 10: ಇಂಡಿಯನ್ ಸೂಪರ್ ಲೀಗ್ 2018-19ರ ಆವೃತ್ತಿಯಲ್ಲಿ ಬೆಂಗಳೂರು ಎಫ್‌ಸಿ ಸೋಲಿಲ್ಲದ ಸರದಾರನಾಗಿ ಉಳಿದುಕೊಂಡಿದೆ. ಭಾನುವಾರ (ಡಿಸೆಂಬರ್ 10) ಮುಂಬೈ ಸಿಟಿ ಎಫ್‌ಸಿ ವಿರುದ್ಧದ ಪಂದ್ಯವನ್ನು 1-1ರಿಂದ ಡ್ರಾಗೊಳಿಸಿಕೊಂಡಿದ್ದರಿಂದ ಬೆಂಗಳೂರು, ಟೂರ್ನಿಯ ಅಜೇಯ ತಂಡವಾಗಿ ಗಮನ ಸೆಳೆದಿದೆ.

ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಭಾನುವಾರ (ಡಿ.10) ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಆತಿಥೇಯ ಬೆಂಗಳೂರು ಪಂದ್ಯವನ್ನು ಸಮಬಲಗೊಳಿಸಿಕೊಂಡಿತು. ಬೆಂಗಳೂರು ಪರ ಉದಂತ ಸಿಂಗ್ 23ನೇ ನಿಮಿಷದಲ್ಲಿ ಗೋಲ್ ಬಾರಿಸಿದರೆ, ಮುಂಬೈನಿಂದ ಮೊಡೌ ಸೌಗೌ ಅವರು 31ನೇ ನಿಮಿಷದಲ್ಲಿ ಗೋಲ್ ಬಾರಿಸಿ ಫಲಿತಾಂಶವನ್ನು ಹಿಡಿದಿಟ್ಟುಕೊಂಡರು.

ಸುನಿಲ್ ಛೆಟ್ರಿ ನಾಯಕತ್ವದ ಬೆಂಗಳೂರು ಎಫ್‌ಸಿ ಆಡಿರುವ 10 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ ಹೊರತು, ಒಂದರಲ್ಲೂ ಸೋತಿಲ್ಲ. ಹೀಗಾಗಿ ಬೆಂಗಳೂರು 24 ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. 11ರಲ್ಲಿ 6 ಪಂದ್ಯ ಗೆದ್ದು, 2 ಸೋತು, 3 ಪಂದ್ಯ ಡ್ರಾ ಮಾಡಿಕೊಂಡಿರುವ ಮುಂಬೈ 21 ಪಾಯಿಂಟ್ಸ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.

Story first published: Monday, December 10, 2018, 19:51 [IST]
Other articles published on Dec 10, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+