ಐಎಸ್‌ಎಲ್ Live Score: ಮುಂಬೈ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿ ಡೆಲ್ಲಿ

ಡೆಲ್ಲಿ ಡಿಸೆಂಬರ್ 3: ಕಳೆದ ಬಾರಿಯೂ ಪ್ಲೇ ಆಫ್ ಹಂತವನ್ನು ತಲಪುವಲ್ಲಿ ವಿಲವಾಗಿ ತನ್ನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ ಡೆಲ್ಲಿ ಡೈನಮೋಸ್ ತಂಡ ಈ ಬಾರಿಯೂ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ. ಮುಂಬೈ ಸಿಟಿ ವಿರುದ್ಧ ಸೋಮವಾರ (ಡಿಸೆಂಬರ್ 3) ನಡೆಯಲಿರುವ ಪಂದ್ಯದಲ್ಲಿ ಜಯ ಗಳಿಸಿದರೆ ಮಾತ್ರ ಡೆಲ್ಲಿ ಪ್ಲೇ ಆ್ ಹೋರಾಟದಲ್ಲಿ ಉಳಿದುಕೊಳ್ಳಲಿದೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಆಡಿರುವ ಒಂಬತ್ತು ಪಂದ್ಯಗಳಲ್ಲಿ ಕೇವಲ ನಾಲ್ಕು ಅಂಕಗಳನ್ನು ಗಳಿಸಿರುವ ಡೆಲ್ಲಿ ಅಂಕ ಪಟ್ಟಿಯಲ್ಲಿ ಈಗ ಕೊನೆಯ ಸ್ಥಾನದಲ್ಲಿದೆ. ಈ ತಂಡ ಇನ್ನೂ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ನಾಲ್ಕು ಪಂದ್ಯಗಳಲ್ಲಿ ಡ್ರಾ ಕಂಡಿದೆ. ಡೆಲ್ಲಿ ಹಲವು ಪಂದ್ಯಗಳಲ್ಲಿ ಗೆಲ್ಲುವ ಲಕ್ಷಣ ತೋರಿತ್ತು. ಆದರೆ ಅದು ಇದುವರೆಗೂ ಸಾಧ್ಯವಾಗಲಿಲ್ಲ. ಜಯ ಗಳಿಸುವಲ್ಲಿ ವಿಲವಾದರೆ ಡೆಲ್ಲಿ ತಂಡ ಪ್ಲೇ ಆಫ್ ಸ್ಪರ್ಧೆಯಿಂದ ಹೊರಗುಳಿಯುವುದು ಸ್ಪಷ್ಟ.
ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ (ಡಿಸೆಂಬರ್ 3) ನಡೆಯಲಿರುವ ಪಂದ್ಯದಲ್ಲಿ ಕೋಚ್ ಜೊಸೆಫ್ ಗೊಂಬಾವ್ ಅವರಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಮಾತನಾಡುತ್ತ ಅವರು, 'ಉತ್ತಮ ತಂಡದ ವಿರುದ್ಧ ನಮಗೆ ಅತ್ಯಂತ ಪ್ರಮುಖವಾದ ಪಂದ್ಯವನ್ನಾಡಪಬೇಕಾಗಿದೆ, ಮುಂಬೈ ಸಿಟಿ ತಂಡದ ವಿರುದ್ಧ ಪ್ರಮುಖಪಂದ್ಯವಿದೆ. ಇದು ನಮ್ಮ ಪಾಲಿಗೆ ಹತ್ತನೇ ಪಂದ್ಯ, ಆದರೆ ನಾವು ಇದುವರೆಗೂ ಜಯ ಕಂಡಿರಲಿಲ್ಲ. ಆದರೆ ಕೆಲವು ಪಂದ್ಯಗಳಿಂದ ನಾವು ಉತ್ತಮವಾಗಿಯೇ ಆಡುತ್ತಿದ್ದೇವೆ, ಮುಂಬೈ ಸಿಟಿ ತಂಡದ ಬಗ್ಗೆ ನಮಗೆ ಅಪಾರವಾದ ಗೌರರವಿದೆ, ಆದರೆ ಸೋಮವಾರದ ಪಂದ್ಯದಲ್ಲಿ ನಾವು ಜಯಕ್ಕಾಗಿ ಉತ್ತಮ ರೀತಿಯಲ್ಲಿ ಆಡಲಿದ್ದೇವೆ' ಎಂದು ಗೌಂಬಾವ್ ಹೇಳಿದ್ದಾರೆ.

ಗೆಲ್ಲಲು ಡೆಲ್ಲಿ ಉತ್ಸುಕ
ಡೆಲ್ಲಿ ತಂಡದಲ್ಲಿ ಸೃಜನಶೀಲತೆ ಇರುವ ಆಟಗಾರರ ಕೊರತೆ ಇದೆ. ಈ ಕಾರಣಕ್ಕಾಗಿ ಉತ್ತಮವಾಗಿ ಆಡಿದರೂ ಗೋಲು ಗಳಿಸುವಲ್ಲಿ ವಿಲವಾಗುತ್ತಿದೆ. ಅಂತಿಮ ಹಂತದಲ್ಲಿ ತಂಡ ವಿಲವಾಗುವುದು ಸಾಮಾನ್ಯವಾಗಿದೆ. ಋತುವಿನ ಮೊದಲ ಜಯ ಗಳಿಸಲು ಡೆಲ್ಲಿ ತಂಡ ಉತ್ಸುಕವಾಗಿದೆ.
'ಗೋವಾ ಹಾಗೂ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ನಮ್ಮ ತಂಡ ಉತ್ತಮವಾಗಿಯೇ ಆಡಿತ್ತು. ಆದರೆ ಅಂತಿಮ ಹಂತದಲ್ಲಿ ಗೋಲು ಗಳಿಸಲು ವಿಲವಾಗಿತ್ತು. ಈ ಬಾರಿ ತಂಡ ಗೋಲು ಗಳಿಸುವುದನ್ನೇ ಗುರಿಯಾಗಿಸಿಕೊಂಡಿದೆ' ಎಂದು ಡೆಲ್ಲಿ ಕೋಚ್ ಹೇಳಿದ್ದಾರೆ.

ಡೆಲ್ಲಿ ಬಗ್ಗೆ ಎಚ್ಚರಿಕೆ
ಮುಂಬೈ ಸಿಟಿ ತಂಡ ಒಂಬತ್ತು ದಿನಗಳ ಅವಧಿಯಲ್ಲಿ ಮೂರು ಪಂದ್ಯಗಳನ್ನು ಆಡಿಲಿದ್ದು, ಡೆಲ್ಲಿ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಎರಡು ಪಂದ್ಯಗಳು ಮನೆಯಂಗಣದ ಹೊರಗಡೆ ನಡೆಯಲಿದೆ. ಹಿಂದಿನ ಪಂದ್ಯದಲ್ಲಿ 2-0 ಅಂತರದಲ್ಲಿ ಜಯ ಗಳಿಸಿದರೂ ಮುಂಬೈ ಕೋಚ್ ಜಾರ್ಜ್ ಕೋಸ್ಟಾ ಡೆಲ್ಲಿ ತಂಡದ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ.
'ಡೆಲ್ಲಿ ತಂಡದ ಆಟವನ್ನು ನೋಡಿ, ಅವರ ಅಂಕ ಪಟ್ಟಿಯನ್ನು ಗಮನಿಸಿದಾಗ ನಿಜವಾಗಿಯೂ ಬೇಸರವಾಗುತ್ತದೆ. ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಡೆಲ್ಲಿಗೆ ಗೋಲು ಗಳಿಸುವ ಅವಕಾಶವನ್ನು ಹೊಂದಿತ್ತು,.ಆದರೆ ಅದುಸಾಧ್ಯವಾಗಲಿಲ್ಲ. ಡೆಲ್ಲಿ ತಂಡ ಉತ್ತಮವಾಗಿಯೂ ಆಡುತ್ತಿದೆ' ಎಂದು ಹೇಳಿದರು.

ಮುಂಬೈಯಿಂದ ಉತ್ತಮ ಆಟ
ಮನೆಯಂಗಣದ ಹೊರಗಡೆ ನಡೆದ ಪಂದ್ಯದಲ್ಲಿ ಮುಂಬೈ ಉತ್ತಮವಾಗಿ ಆಡಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಸೋತಿರುವುದ ಒಮ್ಮೆ ಮಾತ್ರ. ಪೌಲೊ ಮಚಾಡೊ ಮಿಡ್‌ಫೀಲ್ಡ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು. ಲೂಸಿಯಾನ್ ಗೊಯೇನ್ ಹಾಗೂ ಸುಭಾಶೀಶ್ ಬೋಸ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.

ತಲಾ ಏಳು ಗೋಲು
ಕುತೂಹಲದ ಸಂಗತಿಯೆಂದರೆ ಡೆಲ್ಲಿ ಹಾಗೂ ಮುಂಬೈ ತಲಾ ಏಳು ಗೋಲುಗಳನ್ನು ಗಳಿಸಿವೆ. ಇದು ಲೀಗ್‌ನಲ್ಲಿ ಜಂಟಿಯಾಗಿ ಅತಿ ಕಡಿಮೆ ಎನ್ನಬಹುದು. ಮುಂಬೈ ಗಳಿಸಿರುವ ಏಳು ಗೋಲುಗಳಲ್ಲಿ ಆರು ಗೋಲುಗಳನ್ನು ವಿದೇಶಿ ಆಟಗಾರರು ಗಳಿಸಿರುತ್ತಾರೆ. ಡೆಲ್ಲಿ ಗಳಿಸಿರುವ ಏಳು ಗೋಲುಗಳಲ್ಲಿ ಐದು ಗೋಲುಗಳನ್ನು ಭಾರತದ ಆಟಗಾರರು ಗಳಿಸಿರುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications