ಐಎಸ್‌ಎಲ್: ನಾರ್ತ್ ಈಸ್ಟ್ ಯುನೈಟೆಡ್ vs ಜೆಮ್ಶೆಡ್ಪುರ್ ಪಂದ್ಯ ಸಮಬಲ

ಗುವಾಹಟಿ, ಅಕ್ಟೋಬರ್ 25: ಅಸ್ಸಾಂನ ಗುವಾಹಟಿಯ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಗುರುವಾರದ (ಅಕ್ಟೋಬರ್ 25) ನಾರ್ತ್ ಈಸ್ಟ್ ಯುನೈಟೆಡ್ ಮತ್ತು ಜೆಮ್ಶೆಡ್ ಪುರ್ ಎಫ್ಸಿ ನಡುವಿನ ಕಾದಾಟ 1-1ರ ಡ್ರಾದೊಂದಿಗೆ ಅಂತ್ಯ ಕಂಡಿದೆ.
ಪಂದ್ಯಾರಂಭದಲ್ಲಿ ಅಂದರೆ 19ನೇ ನಿಮಿಷದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ನ ಬಾರ್ಥೊಲೊಮೆವ್ ಓಗ್ಬೆಚೆ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಅದಾಗಿ ಜೆಮ್ಶೆಡ್ಪುರದಿಂದ ಫರೂಕ್ ಚೌಧರಿ ಅವರು 48ನೇ ನಿಮಿಷದಲ್ಲಿ ಗೋಲ್ ಬಾರಿಸಿ ಫಲಿತಾಂಶವನ್ನು ಸರಿದೂಗಿಸಿಕೊಂಡರು.
ಪಂದ್ಯದ ವೇಳೆ ಎರಡೂ ತಂಡಗಳು ತಲಾ ಮೂರು ಬಾರಿ ಆಟಗಾರರನ್ನು ಬದಲಿಸಿಕೊಂಡವು. ನಾರ್ತ್ ಈಸ್ಟ್ ಯುನೈಟೆಡ್ ನ ರೌಲಿನ್ ಬೋರ್ಜೆಸ್ ಮತ್ತು ರೆದೀಮ್ ಟ್ಲ್ಯಾಂಗ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ದ್ವಿತೀಯಾರ್ಧದಲ್ಲಿ 7 ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಗೋಲ್ ದಾಖಲಾಗಲಿಲ್ಲ.
Story first published: Thursday, October 25, 2018, 21:53 [IST]
Other articles published on Oct 25, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications