
ಪುಣೆ, ನವೆಂಬರ್ 1: ಇಂಡಿಯನ್ ಸೂಪರ್ ಲೀಗ್‌ನ ಮತ್ತೊಂದು ಹೋರಾಟದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಹೋರಾಟ ನಡೆಸಲಿರುವ ಎಫ್ಸಿ ಪುಣೆ ಸಿಟಿ ತಂಡ ಶುಕ್ರವಾರ (ನ.2) ಮನೆಯಂಗಣದಲ್ಲಿ ಜಯದ ಹೆಜ್ಜೆ ಇಡಲು ಸಜ್ಜಾಗಿದೆ.
ಡೆಲ್ಲಿ ಡೈನಮೋಸ್ ವಿರುದ್ದದ ಮೊದಲ ಪಂದ್ಯದಲ್ಲಿ ಡ್ರಾ ಕಂಡ ಪುಣೆ ತಂಡ ನಂತರ ನಡೆದ ಮೂರು ಪಂದ್ಯಗಳಲ್ಲಿ ಸೋಲನು'ವಿಸಿತ್ತು. ಕೋಚ್ ಮ್ಯುಗೆಲ್ ಏಂಜಲ್ ಪೋರ್ಚುಗಲ್ ಕೆಲಸವನ್ನೂ ಕಳೆದುಕೊಂಡರು. ಈಗ ಮಧ್ಯಂತರದ ಕೋಚ್ ಪ್ರದ್ಯುಮ್ನ ರೆಡ್ಡಿ ಅವರಿಗೆ ತಂಡವನ್ನು ಮುನ್ನಡೆಸುವ ಕೆಲಸ ನೀಡಲಾಗಿದೆ.
ತಂಡವನ್ನು ಜಯದ ಲಯಕ್ಕೆ ತರುವಲ್ಲಿ ರೆಡ್ಡಿ ಅವರು ಉತ್ತಮ ರೀತಿಯಲ್ಲಿ ಯತ್ನಿಸಿದರು, ಆದರೂ ಜಯದ ನಾಗಾಲೋಟದಲ್ಲಿ ಮುನ್ನಡೆಯುತ್ತಿರುವ ಗೋವಾದ ವಿರುದ್ಧ 2-4 ಗೋಲುಗಳಿಂದ ಸೋಲಾಯಿತು. ರೆಡ್ ಕಾರ್ಡ್ ಪಡೆದ ಡಿಯಾಗೊ ಕಾರ್ಲೋಸ್ ಒಲಿವೆರಾ ಅವರ ಅನುಪಸ್ಥಿತಿ ಕೇರಳ ವಿರುದ್ಧದ ಪಂದ್ಯದಲ್ಲಿ ತಂಡವನ್ನು ಕಾಡಲಿದೆ.
'ಈಗ ಲೀಗ್‌ನಲ್ಲಿ ನಮ್ಮ ಹಂತವನ್ನು ನೋಡಿದಾಗ ಮುಂದಿನ ಪ್ರತಿಯೊಂದು ಪಂದ್ಯವೂ ನಮಗೆ ಗೆಲ್ಲಲೇಬೇಕಾದ ಪಂದ್ಯವಾಗಿದೆ. ನೀವು ಒಂದು ಪಂದ್ಯದಲ್ಲಿ ಜಯ ಗಳಿಸಿದರೆ ಅಂಕಪಟ್ಟಿಯಲ್ಲಿ ಪರಿಣಾಮಕಾರಿಯಾಗಿ ಮೇಲೇರಬಹುದು. ವಿಶೇಷವೆಂದರೆ ಇತರ ತಂಡಗಳು ಕೂಡ ಹೆಚ್ಚು ಜಯ ಕಂಡಿಲ್ಲ. ಇದು ನಮ್ಮಲ್ಲಿ ಹೊಸ ಭರವಸೆಯನ್ನು ಹುಟ್ಟಿಸಿದೆ,' ಎಂದು ರೆಡ್ಡಿ ಹೇಳಿದ್ದಾರೆ.
ಪ್ರವಾಸಿ ತಂಡವೂ ಉತ್ತಮ ಸ್ಥಿತಿಯಲ್ಲಿಲ್ಲ. ಮೂರು ಪಂದ್ಯಗಳಲ್ಲಿ ಡ್ರಾ ಕಂಡಿರುವುದು ಅವರ ಪ್ಲೇ ಆಫ್ ಹಂತಕ್ಕೆ ಅಡ್ಡಿಯಾಗಿದೆ. ತಂಡ ಇದುವರೆಗೂ ಸೋಲನುಭವಿಸಿಲ್ಲ.
ಅಜೇಯವಾಗಿದೆ
'ಕೇರಳ ತಂಡ ಅಜೇಯವಾಗಿದೆ. ಅವರನ್ನು ಸೋಲಿಸುವುದು ನಿಜವಾಗಿಯೂ ಕಠಿಣವೆನಿಸಲಿದೆ. ಅದಕ್ಕಾಗಿ ನಾವು ಯೋಜನೆಗಳನ್ನು ರೂಪಿಸಿದ್ದೇವೆ,' ಎಂದು ರೆಡ್ಡಿ ಹೇಳಿದ್ದಾರೆ.
ಕೇರಳ ತಂಡದ ಕೋಚ್ ಡೇವಿಡ್ ಜೇಮ್ಸ್ ಕೂಡ ತಮ್ಮ ತಂಡ ಮೂರು ಅಂಕ ಇಲ್ಲದೆ ಅಂಗಣದಿಂದ ಹೊರ ನಡೆಯುವುದಿಲ್ಲ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಮೊದಲ ಪಂದ್ಯದಲ್ಲಿ ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ಕೇರಳ ತಂಡ ಆಡಿದ ಮೂರು ಪಂದ್ಯಗಳಲ್ಲಿ ಜಯ ಗಳಿಸುವಲ್ಲಿ ವಿಲವಾಗಿದೆ.
ಪ್ರತಿಭಾವಂತ ಆಟಗಾರರು
'ಪುಣೆ ಸಿಟಿ ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ವಿಶಾಲ್ ಕೈಥ್ ಅವರಂಥ ಭಾರತದ ಶ್ರೇಷ್ಠ ಗೋಲ್‌ಕೀಪರ್ ತಂಡದಲ್ಲಿದ್ದಾರೆ. ಅವರ ಸ್ಟ್ರಕರ್ ರೇಟ್ ಗಮನಿಸಿದಾಗ ಅವರಲ್ಲಿರುವ ಶಕ್ತಿ ಸ್ಪಷ್ಟವಾಗುತ್ತದೆ. ಆದ್ದರಿಂದ ನಾವು ಒಂದಕ್ಕಿಂತ ಹೆಚ್ಚು ಗೋಲು ಗಳಿಸಬೇಕಾಗಿದೆ. ನಾವು ಒಂದಕ್ಕಿಂತ ಹೆಚ್ಚು ಗೋಲು ಗಳಿಸಿ ಕ್ಲೀನ್ ಶೀಟ್ ಸಾ'ನೆ ಮಾಡುತ್ತೇವೆಂಬ ನಂಬಿಕೆ ಇದೆ,' ಎಂದು ಇಂಗ್ಲೆಂಡ್‌ನ ಮಾಜಿ ಗೋಲ್‌ಕೀಪರ್ ಹೇಳಿದ್ದಾರೆ.
ಅನಿವಾರ್ಯತೆ
ಇಂಗ್ಲೆಂಡ್‌ನ ಕೋಚ್‌ಗೆ ಡ್ರಾ ಪಂದ್ಯಗಳನ್ನು ಜಯದ ಪಂದ್ಯಗಳನ್ನಾಡಿ ಪರಿವರ್ತಿಸಬೇಕಾದ ಅನಿವಾರ್ಯತೆ ಇದೆ. ಕಳೆದ ಋತುವಿನಲ್ಲಿ ತಂಡ ಏಳು ಪಂದ್ಯಗಳಲ್ಲಿ ಡ್ರಾ ಕಂಡು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇ ಕುಸಿದಿತ್ತು. ಪುಣೆ ತಂಡದ ಫಾರ್ವರ್ಡ್ ವಿಭಾಗ ಉತ್ತಮವಾಗಿದೆ. ಆದರೆ ಎಮಿಲಿಯಾನೋ ಅಲ್ಫಾರೋ ಹಾಗೂ ಮಾರ್ಸೆಲಿನೊ ಗೋಲು ಗಳಿಸುವಲ್ಲಿ ವಿಲರಾಗಿದ್ದಾರೆ. ಹಿಂದಿನ ಪಂದ್ಯದಲ್ಲಿ ಇಬ್ಬರೂ ಆಟಗಾರರ ಗೋಲಿನ ಖಾತೆ ತೆರೆದಿದ್ದಾರೆ. ಇದು ತಂಡದ ಮನೋಬಲವನ್ನು ಹೆಚ್ಚಿಸಿದೆ.