ಐಎಸ್‌ಎಲ್ Live Score: ತವರಿನಲ್ಲಿ ಪುಣೆಗೆ ಸೋಲುಣಿಸಲಿದೆ ಬೆಂಗಳೂರು

ಬೆಂಗಳೂರು, ನವೆಂಬರ್ 30: ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ಎಫ್ಸಿಯನ್ನು ಎದುರಿಸಲು ಪುಣೆ ಸಿಟಿ ತಂಡ ಆಗಮಿಸುವುದರೊಂದಿಗೆ ಪುಣೆ ತಂಡದ ಮಧ್ಯಂತರ ಕೋಚ್ ಪ್ರದ್ಯುಮ್ನ ರೆಡ್ಡಿಗೆ ಒಂದು ರೀತಿಯಲ್ಲಿ ಮನೆಯಂಗಣಕ್ಕೆ ಆಗಮಿಸಿದ ಅನುಭವಾಗಲಿದೆ.
2013ರಲ್ಲಿ ರೆಡ್ಡಿ ಅವರು ಬೆಂಗಳೂರು ತಂಡದ ಕೋಚಿಂಗ್ ಟೀಮ್‌ನ ಭಾಗವಾಗಿದ್ದರು. ಭಾರತ ತಂಡದ ಪ್ರಮುಖ ಆಟಗಾರರನ್ನು ಬೆಂಗಳೂರು ತಂಡಕ್ಕೆ ಸೇರಿಸುವಲ್ಲಿ ರೆಡ್ಡಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅವರು ಬೆಂಗಳೂರು ತಂಡದಲ್ಲಿದ್ದಾಗ ಬಿಎಫ್ಸಿ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿ ಯಶಸ್ಸು ಕಂಡಿತ್ತು, 2017ರಿಂದ ರೆಡ್ಡಿ ಅವರು ಪುಣೆ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಬೆಂಗಳೂರು ತಂಡದಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದರೂ, ರೆಡ್ಡಿ ಅವರಿಗೆ ಈಗ ಅದೇ ತಂಡವನ್ನು ಸೋಲಿಸುವ ಗುರಿ.ನಿರಂತರ ಜಯದಲ್ಲಿ ಮುಂದೆ ಸಾಗುತ್ತಿರುವ ಕಾರ್ಲ್ಸ್ ಕ್ವಾಡ್ರಾಟ್ ಅವರ ಪಡೆಗೆ ಸೋಲಿನ ಆಘಾತ ನೀಡಬೇಕಾಗಿದೆ.

ಗೆದ್ದಿರುವುದು ಒಂದೇ ಪಂದ್ಯ
ಆಡಿರುವ ಒಂಬತ್ತು ಪಂದ್ಯಗಳಲ್ಲಿ ಪುಣೆ ಗೆದ್ದಿರುವುದು ಕೇವಲ ಒಂದು ಪಂದ್ಯ. ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ತಂಡವನ್ನು ಸೋಲಿಸುವುದು ಕೆಳ ಹಂತದಲ್ಲಿರುವ ಪುಣೆಗೆ ಅಷ್ಟು ಸುಲಭವಾದುದಲ್ಲ. ಜೆಮ್ಷೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ 2-1 ಗೋಲಿನಿಂದ ಗೆದ್ದ ಪುಣೆ ತಂಡ ಆತ್ಮವಿಶ್ವಾಸವನ್ನು ಮರಳಿ ಪಡೆದಿತ್ತು, ಆದರೆ ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧದ ಸೋಲು ತಂಡವನ್ನು ಮತ್ತೆ ಚಿಂತೆಗೀಡುಮಾಡಿದೆ.

ಡಿಫೆನ್ಸ್ ವಿಭಾಗ ಸರಿಪಡಿಸಿಕೊಳ್ಳಬೇಕು
ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪುಣೆ ತನ್ನ ಡಿಫೆನ್ಸ್ ವಿಭಾಗದ ಬಗ್ಗೆ ಹೆಚ್ಚು ಯೋಚಿಸಬೇಕಾಗಿದೆ. ಏಕೆಂದರೆ ಈಗಾಗಲೇ 19 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ. ಪುಣೆ ಡಿಫೆನ್ಸ್ ವಿಭಾಗದ ಇದುವರೆಗೂ 141 ಬಾರಿ ಗುರಿ ಇಟ್ಟ ಹೊಡೆತಗಳನ್ನು ಎದುರಿಸಿದೆ.ಇದು ಆ ತಂಡದ ಡಿಫೆನ್ಸ್ ವಿಭಾಗ ಎಷ್ಟು ದುರ್ಬಲವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. 'ಈ ಋತುವಿನುದ್ದಕ್ಕೂ ನಮ್ಮ ತಂಡ ಡಿಫೆನ್ಸ್ ವಿಭಾಗದಲ್ಲಿ ಸಮಸ್ಯೆಯನ್ನು ಎದುರಿಸುತ್ತಿತ್ತು, ಆದರೆ ಕಳೆದ ಪಂದ್ಯದಲ್ಲಿ ನಮ್ಮ ತಂಡ 90 ನಿಮಿಷಗಳ ಕಾಲ ಅತ್ಯಂತ ಮಾರ್ಮಿಕವಾಗಿ ಆಡಿದೆ. ಅದೇ ರೀತಿಯಲ್ಲಿ ನಾವು ಬೆಂಗಳೂರು ವಿರುದ್ಧ ಆಡಲಿದ್ದೇವೆ' ಎಂದು ರೆಡ್ಡಿ ಹೇಳಿದ್ದಾರೆ.

ಸುನಿಲ್ ಛೆಟ್ರಿಯಿರುವ ಬಲಿಷ್ಠ ತಂಡ
ಸುನಿಲ್ ಛೆಟ್ರಿ ಹಾಗೂ ತಂಡವನ್ನು ಸಮರ್ಥವಾಗಿ ಎದುರಿಸುವುದು ಕಷ್ಟ. ಆದರೆ ಜನವರಿವರೆಗೂ ಮಿಕು ಅವರು ಅಲಭ್ಯ ಎಂಬ ಸುದ್ದಿ ಪುಣೆ ತಂಡಕ್ಕೆ ಯೋಜನೆಯನ್ನು ರೂಪಿಸಲು ನೆರವಾಗಲಿದೆ. ಗಾಯಗೊಂಡಿರುವ ಮಿಕು ಚಿಕಿತ್ಸೆಗಾಗಿ ಸ್ಪೇನ್‌ಗೆ ತೆರಳಿದ್ದಾರೆ. ಆದರೆ ಪುಣೆ ವಿರುದ್ಧ ಛೆಟ್ರಿ ಆರು ಪಂದ್ಯಗಳನ್ನಾಡಿದ್ದು, ಆರು ಗೋಲುಗಳನ್ನು ಗಳಿಸಿರುವುದನ್ನು ಪುಣೆ ಮರೆಯುಂತಿಲ್ಲ. ‘ಮಿಕು ಅವರಂಥ ಆಟಗಾರರನ್ನು ಬದಲಾಯಿಸಲು ಸಾಧ್ಯವಿಲ್ಲ. ಏಕೆಂದರೆ ಮಿಕು ಅವರ ಆಟಕ್ಕೆ ಹೊಂದಿಕೊಳ್ಳಬೇಕಾದರೆ ನೀವು ಆಡುವ ಆಟದ ಶೈಲಿಯನ್ನು ಮರೆಯಬೇಕಾಗುತ್ತದೆ. ಅವರ ಅನುಪಸ್ಥಿತಿಯಲ್ಲಿ ನಾವು ನಮ್ಮ ನೈಜ ಆಟವನ್ನು ಪ್ರದರ್ಶಿಸಲಿದ್ದೇವೆ,‘ ಎಂದು ಕ್ವಾಡ್ರಾಟ್ ಹೇಳಿದ್ದಾರೆ.

ಬೆಂಗಳೂರು ಉತ್ತಮವಾಗಿದೆ
ಬೆಂಗಳೂರು ತಂಡ ಡಿಫೆನ್ಸ್ ವಿಭಾಗದಲ್ಲಿ ಉತ್ತಮವಾಗಿದೆ. ಇದುವರೆಗೂ ಕೇವಲ 5 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ. ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಗೋಲ್‌ಕೀಪರರ್ ಗುರ್‌ಪ್ರೀತ್ ಸಿಂಗ್ ಸಂಧೂ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ತಂಡ ಏಕೈಕ ಗೋಲಿನಿಂದ ಜಯ ಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications