ಐಎಸ್‌ಎಲ್ 2018: ಎಫ್‌ಸಿ ಗೋವಾಕ್ಕೆ ಶಾಕ್ ನೀಡಿದ ಪುಣೆ ಸಿಟಿ ಎಫ್‌ಸಿ

ಪುಣೆ, ಡಿಸೆಂಬರ್ 11: 74ನೇ ನಿಮಿಷದಲ್ಲಿ ಮಾರ್ಸೆಲೋ ಪೆರೇರಾ ಹಾಗೂ ಮಾರ್ಕೊ ಸ್ಟಂಕೋವಿಚ್ 90ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಬಲಿಷ್ಠ ಗೋವಾ ತಂಡವನ್ನು 2-0 ಗೋಲಿನಿಂದ ಮಣಿಸಿದ ಪುಣೆ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಂತಿಮ ನಾಲ್ಕರ ಹಂತ ತಲಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮಾರ್ಸೆಲೋ ಅವರಂತ ಆಟಗಾರರು ಗೋಲು ಗಳಿಸುವ ಆಟ ಆಡಬೇಕು ಎಂದು ಪುಣೆ ಕೋಚ್ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಹೇಳಲಿದ್ದರು. ಜವಾಬ್ಧಾರಿಯ ಆಟವಾಡಿದ ಪೆರೇರಾಗೆ ಮೊದಲ ಹಂತದಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ದ್ವಿತಿಯಾರ್ಧದಲ್ಲಿ ಇತ್ತಂಡಗಳು ಆಕ್ರಮಣಕಾರಿ ಆಟ ಆಡಿದವು, ಲೀಗ್ ನ ಕೊನೆಯ ಹಂತದಲ್ಲಿ ಲಭಿಸುವ ಡ್ರಾ ಅಂಕಪಟ್ಟಿಯ ಮೇಲೆ ಹೆಚ್ಚು ಪರಿಣಾಮ ಬೀರದು. ಪುಣೆಗೆ ಇದು ಸ್ಪಷ್ಟ ವಾಗಿತ್ತು. ಸಾರ್ಥಕ್ ಗೌಳಿ ನೀಡಿದ ಪಾಸ್ ಮಾರ್ಸೆಲೋ ಅವರಿಗೆ ಗೋಲು ಗಳಿಸಲು ಉತ್ತಮವಾಗಿತ್ತು. ನೇರವಾಗಿ ಗೋಲ್ ಬಾಕ್ಸ್ ಗೆ ಗುರಿ ಇಟ್ಟಾಗ ಅದನ್ನು ನವಾಜ್ ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಪುಣೆ ತಂಡಕ್ಕೆ ಇಲ್ಲಿ ಜಯದ ಅನಿವಾರ್ಯತೆ ಇದೆ. ಗೋವಾ ತಂಡಕ್ಕೂ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಳ್ಳುವ ಗುರಿ ಇದೆ. ಹಾಗಾಗಿ ಇತ್ತಂಡಗಳು ಅತ್ಯಂತ ಎಚ್ಚರಿಕೆಯಿಂದ ಆಡಿದವು. ಪರಿಣಾಮ ಗೋಲು ಶೂನ್ಯ. ಕೆಲವು ಕ್ಷಣ ಫುಟ್ಬಾಲ್ ಹೊರತಾದ ಚಟುವಟಿಕೆ ನಡೆದರೂ ರೆಫರಿ ಅದನ್ನು ಉತ್ತಮ ರೀತಿಯಲ್ಲಿ ಪರಿಹರಿಸಿದರು.
ಗೋವಾ ತಂಡ ಚೆಂಡಿನ ಮೇಲೆ ಹಿಡಿತ ಸಾಧಿಸಿದರೂ ಗೋಲ್ ಬಾಕ್ಸ್ ಕಡೆಗೆ ಗುರಿ ಇಟ್ಟಿದ್ದು ವಿರಳ. ಒಂದು ಹಂತದಲ್ಲಿ ಎಡು ಬೇಡಿಯ ಅವರಿಗೆ ಗೋಲು ಗಳಿಸುವ ಅವಕಾಶ ಇದ್ದಿತ್ತು. ಆದರೆ ಪುಣೆಯ ಗೋಲ್ ಕೀಪರ್ ಅದಕ್ಕೆ ಆಸ್ಪದ ನೀಡಲಿಲ್ಲ. ಪುಣೆ ತಂಡಕ್ಕೆ ಇನ್ನೂ ಅವಕಾಶ ಇದೆ. ಹೀರೋ ಇಂಡಿಯನ್ ಸೂಪರ್ ಲೀಗ್‌ನ ಈ ಹಿಂದಿನ ಪಂದ್ಯದಲ್ಲಿ ಪುಣೆ ತಂಡ ಮನೆಯಂಗಣದಲ್ಲಿ ಜಯದ ಯಶಸ್ಸು ಕಂಡಿತ್ತು. ಆದರೆ ಈ ಬಾರಿ ಎದುರಾಳಿ ಗೋವಾ. ಈ ತಂಡದ ವಿರುದ್ಧ ಆಡುವಾಗ ಪುಣೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.
ಕಳೆದ ಋತುವಿನಲ್ಲಿ ಪ್ಲೇ ಆಫ್ ಹಂತ ತಲುಪಿದ್ದ ಪುಣೆ ತಂಡ ಬಾರಿ ಅಂತ್ಯತ ಕಳಪೆ ಪ್ರದರ್ಶನ ತೋರಿದೆ. ಕೇರಳ ಬ್ಲಾಸ್ಟರ್ಸ್‌ವಿರುದ್ಧದ ಈ ಹಿಂದಿನ ಪಂದ್ಯದಲ್ಲಿ ಜಯ ಗಳಿಸಿರುವ ಪುಣೆ ತಂಡ ಈಗ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿದೆ. ಎಂಟು ಪಂದ್ಯಗಳಿಂದ ಹನ್ನೊಂದು ಅಂಕ ಗಲಿಸಿರುವ ಪುಣೆ ತಂಡದ ಪ್ಲೇ ಆಫ್ ಆಸೆ ಅತಂತ್ರವಾಗಿದೆ. ಈಗ ಬಲಿಷ್ಠ ತಂಡವೆನಿಸಿರುವ ಗೋವಾ ವಿರುದ್ಧ ಮತ್ತೊಂದು ಪರೀಕ್ಷೆಗೆ ಮುಂದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications