ಐಎಸ್‌ಎಲ್: ನಾರ್ತ್ ಈಸ್ಟ್ ಯುನೈಟೆಡ್ ಸೋಲಿಸಿದ ಬೆಂಗಳೂರು ಅಗ್ರ ಸ್ಥಾನಕ್ಕೆ

ಬೆಂಗಳೂರು ಜನವರಿ, 31: 14ನೇ ನಿಮಿಷದಲ್ಲಿ ಮಿಸ್ಲಾವ್ ಕೊಮೊರ್ಸ್‌ಕಿ ನೀಡಿದ ಉಡುಗೊರೆ ಗೋಲು ಹಾಗೂ ಚೆಂಕೊ ಗಿಲ್ಷೆನ್ 71ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು 2-1 ಗೋಲಿನಿಂದ ಮಣಿಸಿದ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನಕ್ಕೇರಿದೆ. ನಾರ್ತ್ ಈಸ್ಟ್ ಯುನೈಟೆಡ್ ಪರ ಫೆಡ್ರಿಕೋ ಗಲ್ಲೆಗೊ 60ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರ ಕಡಿಮೆ ಮಾಡಿತು.
ಕೋಚ್ ಕಾರ್ಲಸ್ ಕ್ವಾಡ್ರಾಟ್ ಅವರು ರಣತಂತ್ರಕ್ಕೆ ನಾರ್ತ್ ಈಸ್ಟ್ ಯುನೈಟೆಡ್ ಆರಂಭದಲ್ಲೇ ಶರಣಾಯಿತು. ಮಿಸ್ಲಾವ್ ಕೊಮೊರ್ಸ್‌ಕಿ ಅವರು ನೀಡಿದ ಉಡುಗೊರೆ ಗೋಲಿನಿಂದ ಬೆಂಗಳೂರು ತಂಡ 14ನೇ ನಿಮಿಷದಲ್ಲಿ ಮೇಲುಗೈ ಸಾಧಿಸಿತು. ಆದರೆ ಸುನಿಲ್ ಛೆಟ್ರಿ ಪಡೆಗೆ ಈ ರೀತಿಯ ಗೋಲಿನ ಅಗತ್ಯವಿರಲಿಲ್ಲ. ಆಟದಲ್ಲಿ ಈ ರೀತಿಯ ಪ್ರಮಾದ ಸಾಮಾನ್ಯವಾಗಿರುತ್ತದೆ. ಮಧ್ಯ ಭಾಗದಲ್ಲಿ ಸಿಕ್ಕ ಫ್ರೀಕಿಕ್ ಇದೆಲ್ಲ ಅವಕಾಶ ತಂದುಕೊಟ್ಟಿತು.
ಇದು ಗೋಲು ತಂದು ಕೊಡುವ ಕಿಕ್ ಎಂದು ಯಾರೂ ಊಹಿಸಿರಲಿಲ್ಲ. ಚೆಂಡು ನಾಯಕ ಛೆಟ್ರಿ ಕಡೆ ತಲುಪಿತು. ಛೆಟ್ರಿ ತಂಡನ್ನು ಉದಾಂತ್ ಸಿಂಗ್ ಕಡೆಗೆ ಕಳುಹಿಸಿದರು. ಉದಾಂತ್ ಚೆಂಡನ್ನು ಬಾಕ್ಸ್ ಕಡೆಗೆ ತಳ್ಳಿದರು. ಚೆಂಡು ಫೆಡರಿಕೊ ಗಲ್ಲೆಗೋ ಮೂಲಕ ಮಿಸ್ಲಾವ್ ಕೊಮೊರ್ಸ್‌ಕಿ ಕಡೆಗೆ ಸಾಗಿತು. ಮಿಸ್ಲಾವ್ ಚೆಂಡನ್ನು ದೂರಕ್ಕೆ ತುಳಿಯಲು ಯತ್ನಿಸಿದರು. ಆದರೆ ಚೆಂಡನ್ನು ತಮ್ಮದೇ ನೆಟ್ ಕಡೆಗೆ ತುಳಿದು ಪ್ರಮಾದ ಮಾಡಿದರು. ಇದು ಫುಟ್ಬಾಲ್‌ನಲ್ಲಿ ಸಾಮಾನ್ಯ. ಮಿಸ್ಲಾವ್ ಪ್ರಥಮಾರ್ಧ ದುರಂತ ನಾಯಕರೆನಿಸಿದರು.

ತಂಡದ ಮನೋಬಲ ಹೆಚ್ಚಳ
ಏನೇ ಇರಲಿ ಮೊದಲ ಹಂತದಲ್ಲಿ ಮುನ್ನಡೆ ಕಂಡಿರುವುದು ಬೆಂಗಳೂರು ತಂಡದ ಮನೋಬಲವನ್ನು ಹೆಚ್ಚಿಸಿತು. ಅಂತಿಮ ಹಂತದಲ್ಲಿ ಗುರ್‌ಪ್ರೀತ್ ಸಿಂಗ್ ಸಂಧೂ ಗೋಲನ್ನು ತಡೆದ ಪರಿಣಾಮ ನಾರ್ತ್ ಈಸ್ಟ್ ಸಮಬಲಕ್ಕೆ ಅಡ್ಡಿಯಾದರು. ಒಗ್ಬಚೆ ಇದು ಅಚ್ಚರಿಯನ್ನುಂಡು ಮಾಡಿತು. ಗುರ್‌ಪ್ರೀತ್ ಅವರ ಈ ಮಿಂಚಿನ ರಕ್ಷಣೆ ಬೆಂಗಳೂರು ಅಭಿಮಾನಿಗಳಲ್ಲಿ ಸಂಭ್ರಮವನ್ನುಂಟು ಮಾಡಿತು.

ಅಗ್ರಸ್ಥನಾದಲ್ಲಿ ಬೆಂಗಳೂರು
ಮುಂಬೈ ವಿರುದ್ಧ ಸೋಲುಂಡು ಎರಡನೇ ಸ್ಥಾನಕ್ಕೆ ಕುಸಿದ ಬೆಂಗಳೂರು ತಂಡಕ್ಕೆ ಈಗ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮತ್ತೆ ನಂಬರ್‌ಒನ್ ಸ್ಥಾನ ತಲಪುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಬೆಂಗಳೂರು ತಂಡ ಈ ಹಿಂದಿನ ಋತುವಿನ ಎಲ್ಲ ದಾಖಲೆಗಳನ್ನು ಮುರಿದು ಮುಂಬೈ ವಿರುದ್ಧ ಸೋಲಿಗೆ ಶರಣಾಗಿತ್ತು.

ನಾರ್ತ್ ಈಸ್ಟ್ ಯುನೈಟೆಡ್ 13 ಅಂಕ
ಮನೆಯಿಂದ ಹೊರಗಡೆ ಆಡಿದ ಪಂದ್ಯಗಳಲ್ಲಿ ನಾರ್ತ ಈಸ್ಟ್ ಯುನೈಟೆಡ್ 13 ಅಂಕಗಳನ್ನು ಗಳಿಸಿದ್ದು ಬೇರೆ ಯಾವುದೇ ತಂಡ ಈ ರೀತಿಯಲ್ಲಿ ಅಂಕ ಗಳಿಸಿರಲಿಲ್ಲ. ಅದೇ ರೀತಿ ಮನೆಯಂಗಣದಿಂದ ಹೊರಗಡೆ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ತಂಡವೆನಿಸಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡ ಈ ಹಿಂದಿನ ಪಂದ್ಯದಲ್ಲಿ ಜಯ ಗಳಿಸಿ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಆದರೆ ಬೆಂಗಳೂರಿನ ಸೋಲಿನ ಕಹಿಯೊಂದಿಗೆ ಮನೆಯಂಗಣ ಪ್ರವೇಶಿಸಿತು. ಆದರೆ ಬೆಂಗಳೂರು ವಿರುದ್ಧ ನಾರ್ತ್ ಈಸ್ಟ್‌ಗೆ ಗೆಲ್ಲಬೇಕಾದ ಅನಿವಾರ್ಯತೆ ಇದೆ.

ಛೆಟ್ರಿ ಹಿನ್ನಡೆ
ಛೆಟ್ರಿ ಅವರು ಹಲವು ಪಂದ್ಯಗಳಿಂದ ಗೋಲ ಗಳಿಸುವಲ್ಲಿ ವಿಫಲರಾಗಿದ್ದಾರೆ. ಅದೇ ರೀತಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಅವರ ಸಾಧನೆ ಅಷ್ಟೇನು ಹೇಳಿಕೊಳ್ಳವಂತದ್ದಾಗಿಲ್ಲ. ಮಿಕು ಅವರ ಗೈರು ತಂಡವನ್ನು ಕಾಡಲಿರುವುದು ಸ್ಪಷ್ಟ. ಆದರೆ ಮಿಕು ಇಲ್ಲದೆಯೂ ತಂಡ ಹಲವು ಪಂದ್ಯಗಳನ್ನು ಗೆದ್ದಿರುವುದು ಸ್ಪಷ್ಟ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications