ಐಎಸ್ಎಲ್ 2019: ಗೋವಾ ವಿರುದ್ಧ ಸೇಡಿಗೆ ಕಾದಿರುವ ಮುಂಬೈ
ಮುಂಬೈ, ಜನವರಿ 31: ಹೀರೋ ಇಂಡಿಯನ್ ಸೂಪರ್ ಲೀಗ್‌ನ ಮೊದಲ ಸುತ್ತಿನ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲನು'ವಿಸಿದ ಮುಂಬೈ ಸಿಟಿ ಎಫ್ ಸಿ ಈಗ ಗೋವಾ ವಿರುದ್ಧ ಶುಕ್ರವಾರ ಮುಂಬೈ ಫುಟ್ಬಾಲ್ ಅರೆನಾದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
13 ಪಂದ್ಯಗಳನ್ನಾಡಿರುವ ಮುಂಬೈ ಸಿಟಿ 27 ಅಂಕಗಳನ್ನು ಗಳಿಸಿದ್ದು, ಗೋವಾ ತಂಡ ಮುಂಬೈಗಿಂತ ಆರು ಅಂಕ ಹಿಂದೆ ಇದ್ದು, 12 ಪಂದ್ಯಗಳನಾನಾಡಿದೆ. ಅಂತಿಮ ನಾಲ್ಕರ ಹಂತಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ನಾಳೆಯ ಪಂದ್ಯ ಪ್ರಮುಖವೆನಿಸಿದೆ. ಇಲ್ಲಿ ಒಂದು ವೇಳೆ ಗೋವಾ ಸೋತರೆ ಜೆಮ್ಷೆಡ್ಪುರ ಅಥವಾ ಎಟಿಕೆ ತಂಡದ ಪ್ರಭುತ್ವಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ.
ಈ ಹಿಂದಿನ ಪಂದ್ಯದಲ್ಲಿ ಗೋವಾ ತಂಡ ಮುಂಬೈಗೆ ಗೋಲುಗಳ ಅತಂರದಲ್ಲಿ ಹೀನಾಯ ಸೋಲು ನೀಡಿತ್ತು.
ಆದರೆ, ಸೋಲಿನ ನಂತರ ಮುಂಬೈ ತಂಡ ಒಂದು ವಿಭಿನ್ನ ತಂಡವಾಗಿ ರೂಪುಗೊಂಡಿತು. ಸುಭಾಶಿಶ್ ಬೋಸ್ ಅವರನ್ನು ಜಾರ್ಜ್ ಕೋಸ್ಟಾ ಅವರು ಲೆಫ್ಟ್ ಬ್ಯಾಕ್ ವಿಭಾಗದಲ್ಲಿ ಆಡಿಸಿದ್ದು, ಪಂದ್ಯದ ಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಆ ನಂತರ ಆಡಿದ ಒಂಬತ್ತು ಪಂದ್ಯಗಳಲ್ಲಿ ಮುಂಬೈ ತಂಡ ಸೋಲನುಭವಿಸಲಿಲ್ಲ. ಅಲ್ಲದೆ ಅಜೇಯವಾಗಿ ಮುನ್ನಗ್ಗುತ್ತಿದ್ದ ಬೆಂಗಳೂರು ತಂಡಕ್ಕೆ ಸೋಲಿನ ಆಘಾತವನ್ನೂ ನೀಡಿ ಅಗ್ರ ಸ್ಥಾನ ತಲುಪಿತ್ತು.

ಆತ್ಮವಿಶ್ವಾಸಲ್ಲಿರುವ ಕೋಸ್ಟಾ
‘ಗೋವಾ ವಿರುದ್ಧದ ಹಿಂದಿನ ಪಂದ್ಯ ನಮ್ಮ ಪಾಲಿಗೆ ಕೆಟ್ಟದಿನ ಹಾಗೂ ಕೆಟ್ಟ ಫಲಿತಾಂಶವಾಗಿತ್ತು. ಆ ಪಂದ್ಯದ ನಂತರ ನಮ್ಮ ಆಟ ಉತ್ತಮ ರೀತಿಯಲ್ಲಿ ಸುಧಾರಣೆ ಕಂಡಿತು. ನಾವು ಯಾವುದೇ ರೀತಿಯಲ್ಲಿ ಹೆಚ್ಚಿನ ಬದಲಾವಣೆ ಮಾಡಲಿಲ್ಲ. ನಾಳೆ ನಾವು ವಿಭಿನ್ನವಾಗಿ ಆಡಲಿರುವುದು ಸ್ಪಷ್ಟ., ಅಂತಿಮ ಫಲಿತಾಂಶ ಏನಾಗುತ್ತದೆ ಎಂಬುದು ಗೊತ್ತಿಲ್ಲ, ಆದರೆ ಹಿಂದಿನ ಪಂದ್ಯದ ಫಲಿತಾಂಶದಂತೆ ಇರುವುದಿಲ್ಲ ಎಂಬುದು ಸ್ಪಷ್ಟ,‘ ಎಂದು ಕೋಸ್ಟಾ ಅತ್ಯಂತ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.

ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು ಗೊತ್ತು
‘ನಾವು ನಮ್ಮದೇ ರೀತಿಯ ಶೈಲಿಯಲ್ಲಿ ಆಡಲಿದ್ದೇವೆ, ಅವರು ಕೂಡ ಅವರದ್ದೇ ಶೈಲಿಯನ್ನು ಅನುಸರಿಸಲಿದ್ದಾರೆ. ಅವರದ್ದು ಉತ್ತಮ ತಂಡ, ಅದೇ ರೀತಿ ಉತ್ತಮ ಆಟಗಾರರೂ ಇದ್ದಾರೆ. ಚೆಂಡನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತು, ಅದೇ ರೀತಿ ನಮಗೂ ಕೂಡ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು ಎಂಬುದೂ ಗೊತ್ತು,‘ ಎಂದರು.
ಅಪಾಯಕಾರಿ ಎನಿಸಿರುವ ಅರ್ನಾಲ್ಡ್ ಇಸೋಕೊ
ಎದುರಾಳಿ ತಂಡಕ್ಕೆ ಫುಲ್‌ಬ್ಯಾಕ್ ವಿಭಾಗದಲ್ಲಿ ಅಪಾಯಕಾರಿ ಎನಿಸಿರುವ ಅರ್ನಾಲ್ಡ್ ಇಸೋಕೊ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸಣ್ಣ ಪುಟ್ಟ ಗಾಯದ ಕಾರಣ ಮೊಡೌ ಸೌಗೌ ಹಿಂದಿನ ಪಂದ್ಯದಲ್ಲಿ ಬದಲಿ ಆಟಗಾರರಾಗಿ ಅಂಗಣಕ್ಕಿಳಿದಿದ್ದರು. ಆಕ್ರಮಣಕಾರಿ ಆಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿರುವ ಮುಂಬೈ ಸಿಟಿ ತಂಡಕ್ಕೆ ವಿಂಗ್ಸ್‌ನಲ್ಲಿ ಗೋವಾ ದಿಟ್ಟ ಸವಾಲು ನೀಡಲಿದೆ. ಗೋವಾ ತಂಡ ಗಳಿಸಿರುವ 27 ಗೋಲುಗಳಲ್ಲಿ 12 ಗೋಲುಗಳು ಕ್ರಾಸ್ ಮೂಲಕ ದಾಖಲಾಗಿರುವುದು.
ಮುಂಬೈ ತಂಡದಲ್ಲಿ ಭಾರಿ ಬದಲಾವಣೆಯಾಗಿದೆ
‘ಮುಂಬೈ ತಂಡ ಗೋವಾ ವಿರುದ್ಧ ಸೋತಾಗಿನಿಂದ ತಂಡದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಅವರು ಉತ್ತಮ ರೀತಿಯಲ್ಲಿ ದಿಟ್ಟ ತಿರುಗೇಟು ನೀಡಿದ್ದಾರೆ. ಈಗ ಮುಂಬೈ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುತ್ತಿದೆ. ಲೀಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ತಂಡಕ್ಕೆ ಸೋಲುಣಿಸಿದ್ದಾರೆ, ನಾವು ಉತ್ತಮ ಪ್ರದರ್ಶನ ನೀಡದಿದ್ದರೆ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ,‘ ಗೋವಾದ ಸಹಾಯಕ ಕೋಚ್ ಜೆಸಸ್ ಟಾಟೊ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications