For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಫುಟ್ಬಾಲ್ ಪ್ರತಿಭೆಗಳ ಫ್ಯಾಕ್ಟರಿ 'ಚೆನ್ನೈಯಿನ್ ಎಫ್‌ಸಿ'

By Isl Media
ISL 2019: The talent factory Chennaiyin FC

ಚೆನ್ನೈ, ಅಕ್ಟೋಬರ್ 14: ಕಳೆದ ಋತು ಚೆನ್ನೈಯಿನ್ ಎಫ್‌ಸಿ ಪಾಲಿಗೆ ಮರೆಯಲೇ ಬೇಕಾದ ಋತುವಾಗಿತ್ತು. ಅವರು ಹಾಲಿ ಚಾಂಪಿಯನ್ ಆಗಿದ್ದರು, ಆದರೆ ತಂಡದ ಅದೃಷ್ಟ ಬೇಗನೆ ಕೈಕೊಟ್ಟಿತು. ಕೋಚ್ ಜಾನ್ ಗ್ರೆಗೋರಿ ಕೂಡ ಅಸಹಾಯಕರಾದರು. ಅವರಿಂದ ಏನೂ ಮಾಡಲಾಗಲಿಲ್ಲ, ಪರಿಣಾಮ 10 ತಂಡಗಳನ್ನೊಳಗೊಂಡ ಇಂಡಿಯನ್ ಸೂಪರ್ ಲೀಗ್ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿತ್ತು.

ಎರಡು ಬಾರಿ ಐಎಸ್ ಎಲ್ ಪ್ರಶಸ್ತಿ ಗೆದ್ದಿರುವ ಕ್ಲಬ್ ನಂಬಲು ಅಸಾಧ್ಯವಾದ ಹಂತ ತಲುಪಿತ್ತು. ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಲಿರುವ ಆರನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ ಮತ್ತೆ ತನ್ನ ನೈಜ ಸಾಮರ್ಥ್ಯ ತೋರಲು ಸಜ್ಜಾಗಿದೆ.

ಚೆನ್ನೈಯಿನ್ ತಂಡದ ಐಎಸ್ ಎಲ್ ಪ್ರಯಾಣ ಏರಿಳಿತಗಳಿಂದ ಕೂಡಿದೆ. ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ತಂಡದ ಅಂಗಣದಲ್ಲಿನ ಫಲಿತಾಂಶ ಮಾತ್ರವಲ್ಲ, ಅಭಿಷೇಕ್ ಬಚ್ಚನ್, ಮಹೇಂದ್ರ ಸಿಂಗ್ ಧೋನಿ ಮತ್ತು ವಿಟಾ ದಾನಿ ಅವರ ಸಹ ಮಾಲೀಕತ್ವ ಹೊಂದಿರುವ ತಂಡ, 2014ರಲ್ಲಿ ಐಎಸ್ ಎಲ್ ಆರಂಭವಾದಾಗಿನಿಂದ ಯುವ ಆಟಗಾರರ ಮೇಲೆ ಹೆಚ್ಚು ನಂಬಿಕೆ ಹಾಗೂ ಅವರ ಅಭಿವೃದ್ಧಿಗೆ ಮಹತ್ವ ನೇಡಿರುವಂತೆ ಬೇರೆ ಯಾವುದೇ ಕ್ಲಬ್ ನೀಡಿರಲಿಲ್ಲ.

ಕಳೆದ ಎರಡು ಋತುಗಳಿಂದ ಚೆನ್ನೈಯಿನ್ ಎಫ್ ಸಿ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನ (ಎ ಐ ಎಫ್ ಎಫ್ ) ಅಕಾಡೆಮಿಯಲ್ಲಿ ಪಳಗಿದ ಐವರು ಆಟಗಾರರಿಗೆ ಎಫ್ ಸಿ ಮೆಟ್ಜ್ ನಲ್ಲಿ ತರಬೇತಿ ಪಡೆಯಲು ಸಂಪೂರ್ಣ ಪ್ರಾಯೋಜಕತ್ವ ನೀಡಿತ್ತು. ಮೂರು ವರ್ಷಗಳಲ್ಲಿ ಐವರು ಯುವ ಆಟಗಾರರು ಅದ್ಭುತ ರೀತಿಯಲ್ಲಿ ಪಳಗಿದರು ಮತ್ತು ಆಟಗಾರರ ಮೇಲೆ ಮಾಡಿದ ವೆಚ್ಚ ಉತ್ತಮ ರೀತಿಯಲ್ಲಿ ಬೆಲೆ ನೀಡಿತು.

ಅನಿರುಧ್ ಥಾಪಾ, ಜೆರ್ರಿ ಲಾಲ್ರಿಂಜುವಾಲ, ಬಾವೋರಿಂಗ್ದೋ ಬೋಡೋ, ಬೆದಶ್ವರ್ ಸಿಂಗ್ ಮತ್ತು ಪ್ರಸಂಜಿತ್ ಚಕ್ರವರ್ತಿ ತರಬೇತಿ ಪಡೆದವರು. ಎಲ್ಲ ಐವರು ಆಟಗಾರರು ಈಗ ವೃತ್ತಿಪರರಾಗಿದ್ದರೆ. ಥಾಪಾ ಮತ್ತು ಲಾಲ್ರಿಂಜುವಾಲ ಚೆನ್ನೈಯಿನ್ ಎಫ್ ಸಿ ತಂಡದ ಮೊದಲ ಹಂತದ ಆಟಗಾರರಾಗಿದ್ದಾರೆ.

ಕಳೆದ ಎರಡು ಋತುಗಳಲ್ಲಿ ಥಾಪಾ 34 ಲೀಗ್ ಪಂದ್ಯಗಳಲ್ಲಿ ಆಡಿದ್ದಾರೆ. 17 ಪಂದ್ಯಗಳಲ್ಲಿ ಆರಂಭ ಕಂಡಿದ್ದು, ಎರಡು ಗೋಲು ಹಾಗೂ ಮೂರು ಗೋಲು ಗಳಿಸುವಲ್ಲಿ ನೆರವಾಗಿದ್ದಾರೆ. ವಿದೇಶದಲ್ಲಿ ತರಬೇತಿ ಪಡೆದು ಬಂದ ನಂತರ ಲಾಲ್ರಿಂಜುವಾಲ ಐಎಸ್ ಎಲ್ ನಲ್ಲಿ 3658ನಿಮಿಷಗಳ ಕಾಲ ಆಡಿ, ಒಂದು ಗೋಲು ಮತ್ತು ನಾಲ್ಕುಗೋಲುಗಳನ್ನು ಗಳಿಸುವಲ್ಲಿ ನೆರವಾಗಿದ್ದಾರೆ. ಲೆಫ್ಟ್ ಬ್ಯಾಕ್ ನಲ್ಲಿ ಉತ್ತಮವಾಗಿ ಆಡಬಲ್ಲ ಲಾಲ್ರಿಂಜುವಾಲ ಈ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಚೆನ್ನೈಯಿನ್ ಎಫ್ ಸಿ ತಂಡ ಎಐಎಫ್ ಎಫ್ ನ ಮೂವರು ಆಟಗಾರರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ರಹೀಮ್ ಅಲಿ, ಅಭಿಜಿತ್ ಸರ್ಕಾರ್ ಮತ್ತು ದೀಪಕ್ ತಂಗ್ರಿ ಆ ಮೂವರು ಆಟಗಾರ್ರಾಗಿದ್ದು, 20 ವರ್ಷ ವಯೋಮಿತಿಯವರಾಗಿರುತ್ತಾರೆ.

''ದೇಶದ ಎಲ್ಲ 13 ರಾಷ್ಟ್ರೀಯ ಆಟಗಾರರನ್ನು ನಾವು ಹೊಂದಿದ್ದೇವೆ ಎಂಬುದಕ್ಕೆ ಹೆಮ್ಮೆ ಅನಿಸುತ್ತಿದೆ. ಯುವಕರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂಬುದಕ್ಕೆ ಅಭಿಜಿತ್, ರಹೀಮ್ ಮತ್ತು ದೀಪಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದೇ ಸಾಕ್ಷಿ,'' ಎಂದು ಚೆನ್ನೈಯಿನ್ ಎಫ್ ಸಿ ತಂಡದ ಸಹ ಮಾಲೀಕ ವಿಟಾ ದಾನಿ ಹೇಳಿದ್ದಾರೆ.

ಸಹಿ ಮಾಡಿದ ಯುವ ಆಟಗಾರರಲ್ಲಿ ಥಾಪಾ ಕ್ಲಬ್ ಮತ್ತು ದೇಶಕ್ಕಾಗಿ ಕ್ರಾಂತಿಯನ್ನೇ ಉಂಟುಮಾಡಿದ್ದಾರೆ. ಅವರು ತೋರಿದ ಅದ್ಭುತ ಪ್ರದರ್ಶನ ದೇಶದಲ್ಲೇ ಅವರೊಬ್ಬ ಯುವ ಪ್ರತಿಭಾವಂತ ಆಟಗಾರ ಎಂಬುದನ್ನು ಸಾಬೀತುಪಡಿಸಿದೆ. ಲಾಲ್ರಿಂಜುವಾಲ 2018ರಲ್ಲಿ ಚೆನ್ನೈಯಿನ್ ತಂಡ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಲೆಫ್ಟ್ ಬ್ಯಾಕ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂದಿನ ದಿನಗಳಲ್ಲಿ ಅವ್ರು ಭಾರತ ತಂಡದ ಉತ್ತಮ ಫುಲ್ ಬ್ಯಾಕ್ ಆಟಗಾರರಾಗಿ ಅಭಿವೃದ್ಧಿ ಹೊಂದಲಿದ್ದಾರೆ.

ಮಿನರ್ವಾ ಪಂಜಾಬ್ ತಂಡದ ಪ್ರೊಸೆಂಜಿತ್, ಟ್ರಾವ್ ಎಫ್ ಸಿ ಯ ಬೇಡೇಶ್ವರ್ ಸಿಂಗ್, ಮಿನರ್ವಾ, ಗೋಕುಲಂ ಕೇರಳ ಮತ್ತು ಕೇರಳ ಎಫ್ ಸಿಯ ಬೋಡೋ ಇವರೆಲ್ಲರ ಪ್ರತಿಭೆಗೆ ಪ್ರೋತ್ಸಾಹ ನೀಡಿದ್ದು ಚೆನ್ನೈಯಿನ್. ಯುವ ಆಟಗಾರರಲ್ಲಿ ಅವರಿಟ್ಟಿರುವ ನಂಬಿಕೆಯೇ ಅದೊಂದು ವಿಭಿನ್ನ ತಂಡವಾಗಿ ಕಾಣಲು ಸಾಧ್ಯವಾಯಿತು.

Story first published: Sunday, October 13, 2019, 18:23 [IST]
Other articles published on Oct 13, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+