ಐಎಸ್‌ಎಲ್: ಮೋಹನ್ ಬಾಗನ್‌ಗೆ ಹೈದರಾಬಾದ್ ಸವಾಲು: Live ಸ್ಕೋರ್

ಇಂಡಿಯನ್ ಸೂಪರ್ ಲೀಗ್‌ ಇಂದು ಹೈದರಾಬಾದ್ ಎಫ್‌ಸಿ ಹಾಗೂ ಎಟಿಕೆ ಮೋಹನ್ ಭಾಗನ್ ನಡುವೆ ಹಣಾಹಣಿ ನಡೆಯಲಿದೆ. ಅದ್ಭುತ ಪ್ರದರ್ಶನ ತೋರಿ ಅಗ್ರ ಸ್ಥಾನ ಕಾಯ್ದುಕೊಂಡ ತಂಡ ಹೈದರಾಬಾದ್ ಎಫ್ ಸಿ. ಸದ್ಯ ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ಆಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಎಟಿಕೆಎಂಬಿ ವಿರುದ್ಧ ಜಯ ಗಳಿಸಿ ಪ್ಲೇ ಆಫ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಗುರಿಹೊಂದಿದೆ.

ಹೊಸವರ್ಷದ ಆರಂಭದದಿಂದ ಹೈದರಾಬಾದ್ ಸೋಲನ್ನು ಅನುಭವಿಸಿರಲಿಲ್ಲ, ಮತ್ತು ಕಳೆದ 10 ಪಂದ್ಯಗಳಲ್ಲಿ ಅಜೇಯವಾಗಿ ಸಾಗಿ ಬಂದಿದೆ. ನಾಳೆಯ ಪಂದ್ಯದಲ್ಲಿ ಜಯ ಗಳಿಸಿದರೆ ನಿಜಾಮರ ಪಡೆ ಪ್ಲೇ ಆಫ್ ಗೆ ಮತ್ತಷ್ಟು ಹತ್ತಿರವಾಗುವುದು ಮಾತ್ರವಲ್ಲದೆ, ಐಎಸ್ ಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಅಜೇಯವಾಗಿ ಸಾಗಿ ಬಂದ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಚುಟುಕು ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ

ಹೈದರಾಬಾದ್ ತಂಡ ಇತ್ತೀಚಿನ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದರೆ, ಎಟಿಕೆಎಂಬಿ ತಂಡ ಮುಂಬೈ ಸಿಟಿಯ ಅಗ್ರ ಸ್ಥಾನವನ್ನು ಕಬಳಿಸಿ ಲೀಗ್ ಚಾಂಪಿಯನ್ ಪಟ್ಟ ಗೆಲ್ಲುವ ಹಂತದಲ್ಲಿದೆ. ಕೋಲ್ಕೊತಾ ತಂಡ ಕಳೆ ಐದು ಪಂದ್ಯಗಳಲ್ಲಿ 13 ಗೋಲುಗಳನ್ನು ಗಳಿಸಿರುವುದು ಮಾತ್ರವಲ್ಲ ಕೇವಲ 5 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ.

Live ಸ್ಕೋರ್ ಪಟ್ಟಿ ಹೀಗಿದೆ:

1
2183427

ಎಟಿಕೆ ಮೋಹನ್ ಬಾಗನ್ ಆಡುವ ಬಳಗ

ಅರಿಂದಂ ಭಟ್ಟಾಚಾರ್ಯ (ಗೋಲ್‌ಕೀಪರ್), ಪ್ರೀತಮ್ ಕೋಟಾಲ್ (ನಾಯಕ), ತಿರಿ, ಸಂದೇಶ್ ಜಿಂಗನ್, ಸುಭಶಿಶ್ ಬೋಸ್, ಕಾರ್ಲ್ ಮೆಕ್‌ಹಗ್, ಜೇವಿಯರ್ ಹೆರ್ನಾಂಡೆಜ್, ಲೆನ್ನಿ ರೊಡ್ರಿಗಸ್, ಮನ್ವೀರ್ ಸಿಂಗ್, ಡೇವಿಡ್ ವಿಲಿಯಮ್ಸ್, ರಾಯ್ ಕೃಷ್ಣ.

ಎಟಿಕೆ ಮೋಹನ್ ಬಾಗನ್ ಆಡುವ ಬಳಗ

ಲಕ್ಷ್ಮೀಕಾಂತ್ ಕಟ್ಟಿಮಣಿ (ಗೋಲ್‌ಕೀಪರ್), ನಿಖಿಲ್ ಪೂಜಾರಿ, ಚಿಂಗ್ಲೆನ್ಸಾನಾ ಸಿಂಗ್, ಒಡೆ ಒನೈಂಡಿಯಾ, ಆಕಾಶ್ ಮಿಶ್ರಾ, ಲುಯಿಸ್ ಸಾಸ್ಟ್ರೆ, ಜೊವಾವೊ ವಿಕ್ಟರ್, ಲಿಸ್ಟನ್ ಕೊಲಾಕೊ, ಜೋಯಲ್ ಚಿಯಾನೀಸ್, ಹಲಿಚರಣ್ ನರ್ಜಾರಿ, ಅರಿಡಾನೆ ಸಂತಾನ (ನಾಯಕ)

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, February 22, 2021, 19:14 [IST]
Other articles published on Feb 22, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X