Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಸಮಬಲದ ಪ್ರದರ್ಶನ ನೀಡಿ ಡ್ರಾ ಮಾಡಿಕೊಂಡ ಎಟಿಕೆಎಂಬಿ, ಗೋವಾ

isl 2020 21, ATK Mohun Bagan vs FC Goa Highlights

ಗೋವಾ, ಜನವರಿ 17: ಹೀರೋ ಇಂಡಿಯನ್ ಸೂಪರ್ ಲೀಗ್ ನ 62ನೇ ಪಂದ್ಯದಲ್ಲಿ ಎಫ್ ಸಿ ಗೋವಾ ಮತ್ತು ಎಟಿಕೆ ಮೋಹನ್ ಬಾಗನ್ ತಂಡಗಳ ನಡುವಿನ ಪಂದ್ಯ 1-1ರಲ್ಲಿ ಸಮಬಲಗೊಂಡಿತು. ಪಂದ್ಯದ ದ್ವಿತಿಯಾರ್ಧದಲ್ಲಿ ಎಟಿಕೆ ಮೋಹನ್ ಬಾಗನ್ ಪರ ಎಡು ಗಾರ್ಸಿಯಾ (75ನೇ ನಿಮಿಷ) ಹಾಗೂ ಎಫ್ ಸಿ ಗೋವಾ ಪರ ಇಶಾನ್ ಪಂಡಿತ್ (85ನೇ ನಿಮಿಷ) ಗೋಲು ಗಳಿಸುವುದರ ಮೂಲಕ ಪಂದ್ಯ 1-1ರಲ್ಲಿ ಸಮಬಲಗೊಂಡಿತು.

ಎಡು ಗಾರ್ಸಿಯಾ ಪೆನಾಲ್ಟಿ ಮೂಲಕ ಗೋಲು ಗಳಿಸಿದರೆ, ಇಶಾನ್ ಪಂಡಿತ್ ಓಪನ್ ಗೋಲ್ ಮೂಲಕ ಸಮಬಲಗೊಳಿಸಿದರು. ಈ ಪಲಿತಾಂಶ ಇತ್ತಂಡಗಳ ಸ್ಥಾನಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಎಟಿಕೆ ಮೋಹನ್ ಬಾಗನ್ 21 ಅಂಕ ಗಳಿಸಿ ಎರಡನೇ ಸ್ಥಾನದಲ್ಲೇ ಉಳಿದರೆ 19 ಅಂಕ ಗಳಿಸಿದ ಎಫ್ ಸಿ ಗೋವಾ ಮೂರನೇ ಸ್ಥಾನಲ್ಲೇ ಮುಂದುವರಿಯಿತು.

ಗೋಲಿಲ್ಲದ ಪ್ರಥಮಾರ್ಧ: ಹಿಂದಿನ ಸೋಲಿನಿಂದ ಪಾಠ ಕಲಿತ ಗೋವಾ ತಂಡ ಈ ಬಾರಿ ಎರಡನೇ ಸ್ಥಾನದಲ್ಲಿರು ಎಟಿಕೆ ಮೋಹನ್ ಬಾಗನ್ ವಿರುದ್ಧ ಬಹಳ ಎಚ್ಚರಿಕೆಯಿಂದಲೇ ಆಟ ಪ್ರದರ್ಶಿಸಿತ್ತು. ಇತ್ತಂಡಗಳ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲೇ ಪ್ರದರ್ಶನ ತೋರಿತ್ತು. ಎಟಿಕೆಎಂಬಿ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತು. ಉತ್ತಮ ಅವಕಾಶಗಳು ಸಿಗದ ಕಾರಣ 45 ನಿಮಿಷಗಳ ಪಂದ್ಯ ಗೋಲಿಲ್ಲದೆ ಅಂತ್ಯಗೊಂಡಿತು.

ಬಲಿಷ್ಠರ ನಡುವೆ ಗೆಲ್ಲುವವರು ಯಾರು?: ಹೀರೋ ಇಂಡಿಯನ್ ಸೂಪರ್ ಲೀಗ್ ನ ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿ ಬಲಿಷ್ಠ ಗೋವಾ ಹಾಗೂ ಎಟಿಕೆಎಂಬಿ ತಂಡಗಳು ಮುಖಾಮುಖಿಯಾದವು. ಹಿಂದೆ ಈ ತಂಡಗಳು ಮುಖಾಮುಖಿಯಾದಾಗ ಎಟಿಕೆ ಮೋಹನ್ ಬಾಗಾನ್ ಏಕೈಕ ಗೋಲಿನಿಂದ ಜಯ ಗಳಿಸಿತ್ತು. ಅಂದಿನ ಪಂದ್ಯದಲ್ಲಿ ರಾಯ್ ಕೃಷ್ಣ ಅವರು ಜಯದ ಗೋಲು ಗಳಿಸಿದ್ದರು. ಗೋವಾ ತಂಡ ಕಳೆದ ನಾಲ್ಕು ಪಂದ್ಯಗಳಿಂದ ಸೋಲು ಕಂಡಿರಲಿಲ್ಲ. ಜೆಮ್ಷೆಡ್ಪುರ ವಿರುದ್ಧ ನಡೆದ ಹಿಂದಿನ ಪಂದ್ಯದಲ್ಲಿ ಗೋವಾ ತಂಡ 3-0 ಗೋಲಿನಿಂದ ಜಯ ಗಳಿಸಿತ್ತು. ಜಾರ್ಜ್ ಮೆಂಡೊನ್ಸಾ ಅವರು ಎರಡು ಗೋಲುಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಎಟಿಕೆ ಮೋಹನ್ ಬಾಗನ್ ತಂಡ ಮುಂಬೈ ಸಿಟಿ ಎಫ್ ಸಿ ವಿರುದ್ಧ ಸೋಲನುಭವಿಸಿ ಈ ಪಂದ್ಯಕ್ಕೆ ಆಗಮಿಸಿತು. ಆಂಟೋನಿಯೊ ಹಬ್ಬಾಸ್ ಪಡೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರಲು ತಂಡದ ಡಿಫೆನ್ಸ್ ವಿಭಾಗವೇ ಕಾರಣ. 10 ಪಂದ್ಯಗಳಲ್ಲಿ ತಂಡ ನೀಡಿರುವುದು ಕೇವಲ 4 ಗೋಲು, ತಂಡದ ಗೋಲ್ ಕೀಪರ್ ಅರಿಂದಮ್ ಭಟ್ಟಾಚಾರ್ಯ ಅವರು ಗೋಲ್ಡನ್ ಗ್ಲೋವ್ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲು ಹಾಕುತ್ತಿದ್ದಾರೆ. ಈ ಪಂದ್ಯ ನಿಜವಾಗಿಯೂ ಕುತೂಹಲದ ಪಂದ್ಯವಾಗಿ ಮೂಡಿಬರು ನಿರೀಕ್ಷೆ ಇದೆ.

Story first published: Monday, January 18, 2021, 15:19 [IST]
Other articles published on Jan 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+