Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಜೆಮ್ಷೆಡ್ಪುರ ವಿರುದ್ಧ ಜಯದೊಂದಿಗೆ ಅಗ್ರ ಸ್ಥಾನಕ್ಕೇರಿದ ಎಟಿಕೆಎಂಬಿ

isl 2020 21, atk mohun bagan vs jemshedpur fc match 94, highlights

ಗೋವಾ : ರಾಯ್ ಕೃಷ್ಣ (85ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಜೆಮ್ಷೆಡ್ಪುರ ಎಫ್ ಸಿ ಯನ್ನು 1-0 ಗೋಲಿನಿಂದ ಮಣಿಸಿದ ಎಟಿಕೆ ಮೂಹನ್ ಬಾಗನ್ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು. 36 ಅಂಕ ಗಳಿಸಿದ ಎಟಿಕೆ ಮೋಹನ್ ಬಾಗನ್ ಲೀಗ್ ನಲ್ಲಿ ಅಗ್ರ ಸ್ಥಾನಕ್ಕೇರಿತು. ಹಲವು ಸಮಯದಿಂದ ಎರಡನೇ ಸ್ಥಾನದಲ್ಲೇ ಸಿಕ್ಕಿಹಾಕಿಕೊಂಡಿದ್ದ ಎಟಿಕೆ ಅಲ್ಪ ಅವಧಿಗಾದರೂ ಅಗ್ರ ಸ್ಥಾನ ತಲುಪಿತು. ಜೆಮ್ಷೆಡ್ಪುರದ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದರೂ ರಾಯ್ ಕೃಷ್ನ ಅವರು ಗೋಲು ಗಳಿಸುವುದನ್ನು ತಡೆಯಲಾಗಲಿಲ್ಲ. ಈ ಸೋಲಿನೊಂದಗೆ ಜೆಮ್ಷೆಡ್ಪುರ ಆರನೇ ಸ್ಥಾನದಲ್ಲೇ ಉಳಿಯಿತು.

ದ್ವಿತಿಯಾರ್ಧದಲ್ಲಿ ಜೆಮ್ಷೆಡ್ಪುರ ಆಕ್ರಮಣಕಾರಿ ಆಟವಾಡಿತ್ತು. ಅವಕಾಶಗಳನ್ನು ನಿರ್ಮಿಸಿತ್ತು. ಆದರೆ ಅದಕ್ಕೆ ಗೋಲಿನ ರೂಪು ನೀಡುವಲ್ಲಿ ವಿಫಲವಾಗಿತ್ತು. ಎಟಿಕೆ ಕೂಡ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಗೋಲು ಗಳಿಸಲು ಹಲವು ರೀತಿಯಲ್ಲಿ ಶ್ರಮಿಸಿತ್ತು. 85ನೇ ನಿಮಿಷದವರೆಗೂ ರಾಯ್ ಕೃಷ್ಣ ಹಲವು ಬಾರಿ ಹಲವು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಜೆಮ್ಷೆಡ್ಪುರ ಬಹಳ ತಡವಾಗಿ ವಾಸ್ಕೀಸ್ ಅವರನ್ನು ಅಂಗಣಕ್ಕಿಳಿಸಿತ್ತು.

ಕದನ ಕುತೂಹಲ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲೇ ಅತ್ಯಂತ ನಿರೀಕ್ಷಿತ ಪಂದ್ಯ ಎಟಿಕೆ ಮೋಹನ್ ಬಾಗನ್ ಹಾಗೂ ಜೆಮ್ಷೆಡ್ಪುರ ಎಫ್ ಸಿ ನಡುವೆ ನಡೆಯಲಿದೆ. ಮೋಹನ್ ಬಾಗನ್ ಈಗಾಲೇ ಪ್ಲೇ ಆಫ್ ನಲ್ಲಿ ಸ್ಥಾನ ಪಡೆದಿದ್ದು, ಜೆಮ್ಷೆಡ್ಪುರ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಜೆಮ್ಷೆಡ್ಪುರಕ್ಕೆ ಪ್ಲೇ ಆಫ್ ತಲುಪಬೇಕಾದರೆ ಇಲ್ಲಿ ಜಯ ಗಳಿಸಲೇಬೇಕು ಅದು ತನ್ನಲ್ಲಿರುವ ಎಲ್ಲ ಅಸ್ತ್ರಗಳನ್ನು ಬಲಿಷ್ಠ ಮೋಹನ್ ಬಾಗನ್ ವಿರುದ್ಧ ಬಳಸಬೇಕಾಗಿದೆ. ಹಿಂದಿನ ಪಂದ್ಯದಲ್ಲಿ ಜೆಮ್ಷೆಡ್ಪುರ ಏಕೈಕ ಗೋಲಿನಿಂದ ಜಯ ಗಳಿಸಿತ್ತು. 17 ಪಂದ್ಯಗಳಿಂದ 21 ಅಂಕಗಳಿಸಿರುವ ಜೆಮ್ಷೆಡ್ಪುರ ಕಳೆದ ನಾಲ್ಕು ಪಂದ್ಯಗಳಲ್ಲಿ ಗಳಿಸಿರುವುದು ಕೇವಲ ಒಂದು ಗೋಲು. ಇದು ಕೋಚ್ ಓವೆನ್ ಕೊಯ್ಲ್ ಅವರನ್ನು ಕಾಡಲಿದೆ. ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿರುವ (8) ನೆರಿಜಸ್ ವಾಸ್ಕಿಸ್ ಕಳೆದ 7 ಪಂದ್ಯಗಳಿಂದ ಗೋಲು ಗಳಿಸಿರಲಿಲ್ಲ.

ಎಟಿಕೆ ಮೋಹನ್ ಬಾಗನ್ ವಿರುದ್ಧ ಗೋಲು ಗಳಿಸುವುದು ಮಾತ್ರವಲ್ಲಿ ಗೋಲನ್ನು ತಡೆಯುವುದು ಕೂಡ ಕಷ್ಟ. ಬೆಂಗಳೂರು ವಿರುದ್ಧ 2-0 ಗೋಲಿನಿಂದ ಜಯ ಗಳಿಸಿದ ನಂತರ ಅತ್ಯಂತ ಆತ್ಮವಿಶ್ವಾಸದಲ್ಲಿ ಎಟಿಕೆಮೋಹನ್ ಬಾಗನ್ ಈ ಪಂದ್ಯಕ್ಕೆ ಆಗಮಿಸಿದೆ. ಮಾರ್ಸೆಲೋ ಪೆರೇರಾ ಅವರನ್ನು ತಂಡಕ್ಕೆ ಸೇರಿಸಕೊಂಡ ನಂತರ ಎಟಿಕೆ ಮೋಹನ್ ಬಾಗನ್ ಮೂರು ಪಂದ್ಯಗಳಲ್ಲಿ 9 ಗೋಲುಗಳನ್ನು ಗಳಿಸಿದೆ. ಆದ್ದರಿಂದ ಜೆಮ್ಷೆಡ್ಪುರ ತಂಡ ಜಯ ಗಳಿಸಬೇಕಾದರೆ ಕಠಿಣ ಹೋರಾಟ ನೀಡಬೇಕಾಗಿದೆ.

Story first published: Monday, February 15, 2021, 8:58 [IST]
Other articles published on Feb 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+