For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಟಿಕೆ ಮೋಹನ್ ಬಾಗನ್ ಗೆ ವರವಾದ ಕೃಷ್ಣ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲುವು

By Isl Media
ISL 2020 21, atk mohun bagan vs kerala blasters fc match 78 highlights

ಗೋವಾ : ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು 3-2 ಗೋಲುಗಳಿಂದ ಮಣಿಸಿದ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ನಾಲ್ಕರಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು. ಮೋಹನ್ ಬಾಗನ್ ಪರ ಮಾರ್ಸೆಲಿನೊ ಪೆರೆರಾ (59ನೇ ನಿಮಿಷ) ಹಾಗೂ ರಾಯ್ ಕೃಷ್ಣ (65 ಮತ್ತು 87ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ದ್ವಿತಿಯಾರ್ಧಲ್ಲಿ ದಿಟ್ಟ ಹೋರಾಟ: ದ್ವಿತಿಯಾರ್ಧದಲ್ಲಿ ಇತ್ತಂಡಗಳು ನೈಜ ಫುಟ್ಬಾಲ್ ಆಟ ಪ್ರದರ್ಶಿಸಿದವು, ಕೇರಳ ಬ್ಲಾಸ್ಟರ್ಸ್ ಪರ ಕೋಸ್ಟಾ (51ನೇ ನಿಮಿಷ) ದಲ್ಲಿ ಗೋಲು ಗಳಿಸಿದಾಗ ಕೇರಳಕ್ಕೆ ಪಂದ್ಯಗೆದ್ದಷ್ಟೇ ಸಂಭ್ರಮ. ಆದರೆ ನಂತರದ ಅವಧಿಯಲ್ಲಿ ಕೋಲ್ಕೊತಾದ ಪಡೆ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಮಾರ್ಸೆಲಿನೊ ಪೆರೆರಾ (59ನೇ ನಿಮಿಷ) ಗಳಿಸಿದ ಗೋಲು ಎಟಿಕೆ ಮೋಹನ್ ಬಾಗನ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿತು. 65ನೇ ನಿಮಿಷದಲ್ಲಿ ರಾಯ್ ಕೃಷ್ಣ ಪೆನಾಲ್ಟಿ ಮೂಲಕ ಗಳಿಸಿದ ಗೋಲು ಪಂದ್ಯವನ್ನು 22-2ರ ಸಮಬಲದಲ್ಲಿ ಸಾಗುವಂತೆ ಮಾಡಿತು, ನಂತರದ ಅವಧಿಯಲ್ಲಿ ಎಟಿಕೆ ಮೋಹನ್ ಬಾಗನ್ ಪಂದ್ಯ ಮೇಲೆ ಹೆಚ್ಚು ಹಿಡಿತ ಸಾಧಿಸಿತ್ತು.

ಕೇರಳಕ್ಕೆ ಮುನ್ನಡೆ: ಕೇರಳ ಬ್ಲಾಸ್ಟರ್ಸ್ ತಂಡ ಈ ಪಂದ್ಯದಲ್ಲಿ ತನ್ನೆಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡು ಅಂಗಣಕ್ಕಿಳಿದಿದೆ ಎಂದರೆ ತಪ್ಪಾಗಲಾರದು. ಅದು ಪಂದ್ಯದ ಆರಂಭದಿಂದಲೇ ಸ್ಪಷ್ಟವಾಗಿತ್ತು ಮತ್ತೆ 14ನೇ ನಿಮಿಷದಲ್ಲೇ ಸಾಬೀತಾಗಿತ್ತು. ಗ್ಯಾರಿ ಹೂಪರ್ ಟೂರ್ನಿಯಲ್ಲೇ ಸದ್ಭುತ ಎನಿಸಬಹುದಾದ ಗೋಲನ್ನು ಗಳಿಸಿದ ತಂಡಕ್ಕೆ ಪ್ರಥಮಾರ್ಧದಲ್ಲಿ 1-0 ಮುನ್ನಡೆ ಕಲ್ಪಿಸಿದರು. ನಂತರದ ಅವಧಿಯಲ್ಲಿ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತಲ್ಲದೆ, ಟಾರ್ಗೆಟ್ ದಾಖಲಿಸುವಲ್ಲಿಯೂ ಯಶಸ್ವಿಯಾಯಿತು. ಇತ್ತಂಡಗಳ ಗೋಲ್ ಕೀಪರ್ ಗಳು ಉತ್ತಮ ರೀತಿಯಲ್ಲಿ ಗೋಲುಗಳನ್ನು ತಡೆದದ್ದು ಪಂದ್ಯದ ಕುತೂಲದ ಕ್ಷಣಗಳಿಗೆ ಸಾಕ್ಷಿಯಾಯಿತು.

ಕೇರಳಕ್ಕೆ ಕಠಿಣ ಸವಾಲು: ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಾಗನ್ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾದವು. ಮರಿನರ್ಸ್ ಪಡೆ ಬೆಂಗಳೂರನ್ನು ಸೋಲಿಸಿದ ನಂತರ ಮತ್ತೆ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿತ್ತು. ಕಳೆದ ನಾಲ್ಕು ಪಂದ್ಯಗಳಲ್ಲಿ ತಂಡ ಗಳಿಸಿದ್ದು ಕೇವಲ ನಾಲ್ಕು ಅಂಕಗಳು. ಹಿಂದಿನ ಪಂದ್ಯದಲ್ಲಿ ನಾರ್ಥ್ ಈಸ್ಟ್ ವಿರುದ್ಧ 2-1 ಗೋಲುಗಳಿಂದ ಸೋಲನುಭವಿಸಿದ್ದ ಮೋಹನ್ ಬಾಗನ್ ಪಡೆ ಇಲ್ಲಿ ಮತ್ತೆ ಅಂಕ ಕಳೆದುಕೊಳ್ಳುವ ಗುರಿ ಹೊಂದಿಲ್ಲ ಎಂಬುದು ಸ್ಪಷ್ಟ. ಒಡಿಶಾ ಎಫ್ ಸಿ ಯಿಂದ ಮಾರ್ಸೆಲೋ ಪೆರೆರಾ ಅವರನ್ನು ಸಾಲದ ರೂಪದಲ್ಲಿ ಪಡೆದಿರುವ ಮೋಹನ್ ಬಾಗನ್ ಬಲ ಮತ್ತಷ್ಟು ಹೆಚ್ಚಿಸಿದೆ.

ಕೇರಳ ಬ್ಲಾಸ್ಟರ್ಸ್ ಪಡೆ ಕಳೆದ ಐದು ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಹಿಂದಿನ ಮುಖಾಮುಖಿಯಲ್ಲಿ ಕೇರಳ ಪಡೆ ಏಕೈಕ ಗೋಲಿನಿಂದ ಮೋಹನ್ ಬಾಗನ್ ವಿರುದ್ಧ ಸೋತಿತ್ತು. ಇಲ್ಲಿ ಗೆಲ್ಲಬೇಕಾದರೆ ಕೇರಳ ಬ್ಲಾಸ್ಟರ್ಸ್ ತಮ್ಮ ಡಿಫೆನ್ಸ್ ವಿಭಾಗವನ್ನು ಉತ್ತಮಪಡಿಸಕೊಳ್ಳಬೇಕು. ಬ್ಲಾಸ್ಟರ್ಸ್ ಇದುವರೆಗೂ ಎದುರಾಳಿ ತಂಡಕ್ಕೆ 22 ಗೋಲುಗಳನ್ನು ಗಳಿಸಲು ಅವಕಾಶ ನೀಡಿದೆ. ಇದನ್ನು ಬೇರೆ ಯಾವುದೇ ತಂಡ ಮಾಡಿಲ್ಲ. ಇದು ತಂಡದ ಡಿಫೆನ್ಸ್ ವಿಭಾಗದ ಶಕ್ತಿಯನ್ನು ತೋರಿಸುತ್ತದೆ. ರಾಹುಲ್ ಕೆಪಿ ಅಮಾನತಿನಿಂದ ವಾಪಾಸ಻ಗಿದ್ದು ತಂಡದ ಬಲವನ್ನು ಹೆಚ್ಚಿಸಿದೆ.

Story first published: Monday, February 1, 2021, 10:49 [IST]
Other articles published on Feb 1, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+