ಐಎಸ್‌ಎಲ್: ನಾರ್ಥ್‌ಈಸ್ಟ್‌ಗೆ ಸೋಲುಣಿಸಿದ ಎಟಿಕೆ ಮೋಹನ್ ಬಾಗನ್
{image-tkmbssecondgoalagainstneufc46-1609730359.jpg kannada.mykhel.com}
ಗೋವಾ, ಜನವರಿ 4: ಬರಾಯ್ ಕೃಷ್ಣ (51ನೇ ನಿಮಿಷ) ಗಳಿಸಿದ ಗೋಲು ಮತ್ತು ಎದುರಾಳಿ ತಂಡದ ಆಟಗಾರ ಬೆಂಜಮಿನ್ ಲ್ಯಾಂಬೊಟ್ (58ನೇ ನಿಮಿಷ) ಗೋಲಿನ ನೆರವಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧ 2-0 ಗೋಲಿನಿಂದ ಜಯ ಗಳಿಸಿದ ಎಟಿಕೆ ಮೋಹನ್ ಬಾಗನ್ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ.
ಗೋಲಿಲ್ಲದ ಪ್ರಥಮಾರ್ಧ: ಸಮಾನ ಸಾಮರ್ಥ್ಯದ ತಂಡಗಳೆರಡು ಮುಖಾಮುಖಿಯಾದಾಗ ಅಲ್ಲಿ ಸಮಬಲದ ಹೋರಾಟ ನಡೆಯುತ್ತದೆ ಎಂಬುದಕ್ಕೆ ನಾರ್ಥ್ ಈಸ್ಟ್ ಯುನೈಟೆಡ್ ಮತ್ತು ಎಟಿಕೆ ಮೋಹನ್ ಬಾಗನ್ ನಡುವಿನ ಪಂದ್ಯದ ಪ್ರಥಮಾರ್ಧ ಸಾಕ್ಷಿಯಾಯಿತು. ಇತ್ತಂಡಗಳು ಸಮಾನ ರೀತಿಯಲ್ಲಿ ಆಟ ಪ್ರದರ್ಶಿಸಿದವು. ಎಟಿಕೆ ಹೆಚ್ಚು ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿತ್ತು.
ನಾರ್ಥ್ ಈಸ್ಟ್ ನ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ತಿರುಗೇಟು ನೀಡಿ ಕೋಲ್ಕತಾ ತಂಡದ ಗೋಲು ಗಳಿಕೆಗೆ ಅಟ್ಟಿ ಮಾಡಿತ್ತು. ಆದರೆ ಸ್ಪಷ್ಟವಾದ ಅವಕಾಶ ಎರಡೂ ತಂಡಗಳಿಗೆ ಸಿಗಲಿಲ್ಲ. ಕೋಲ್ಕತಾದ ಆಟಗಾರರು ಒಂದೆರಡು ಬಾರಿ ಗೋಲ್ ಬಾಕ್ಸ್ ಕಡೆಗೆ ಟಾರ್ಗೆಟ್ ಮಾಡಿದರೂ ಹೊಡೆತಲ್ಲಿ ಶಕ್ತಿ ಇಲ್ಲದ ಕಾರಣ ಗೋಲು ಗಳಿಕೆಗೆ ಅವಕಾಶ ಇರಲಿಲ್ಲ. ಇದರಿಂದಾಗಿ ಕುತೂಹಲ ದ್ವಿತಿಯಾರ್ಧದ ಕಡೆಗೆ ಮುಖ ಮಾಡಿತು.

ಕುತೂಹಲದ ಪಂದ್ಯ
ಹೀರೋ ಇಂಡಿಯನ್ ಸೂಪರ್ ಲೀಗ್ ನ ಸೂಪರ್ ಸಂಡೆಯಲ್ಲಿ ಎಟಿಕೆ ಮೋಹನ್ ಬಾಗನ್ ಮತ್ತು ನಾರ್ಥ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾದವು. ಇಲ್ಲಿ ಜಯ ಗಳಿಸಿದರೆ ಎಟಿಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ತಲುಪಲಿದೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ಗೋಲಿಲ್ಲದ ಡ್ರಾ ಕಂಡ ಬಳಿಕ ಎಟಿಕೆ ಈ ಪಂದ್ಯಕ್ಕೆ ಪ್ರವೇಶಿಸಿತು.

ಗೋಲ್‌ಕೀಪಿಂಗ್‌ನಲ್ಲಿ ಅರಿಂದಂ ಭಟ್ಟಾಚಾರ್ಯ ಮಿಂಚು
ಆಂಟೋನಿಯೋ ಹಬ್ಬಾಸ್ ಪಡೆ 6 ಪಂದ್ಯಗಳಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡಿದೆ. ಇದರೊಂದಿಗೆ ಭಾರತದ ಗೋಲ್ ಕೀಪರ್ ಅರಿಂದಂ ಭಟ್ಟಾಚಾರ್ಯ ಗೋಲ್ಟನ್ ಗ್ಲೋವ್ ಪ್ರಶಸ್ತಿಗೆ ಮುಂಚೂಣಿಯಲ್ಲಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ತಂಡದ ಸ್ಟಾರ್ ಆಟಗಾರ ರಾಯ್ ಕೃಷ್ಣ ಗೋಲು ಗಳಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ತಂಡ ಗಳಿಸಿರುವ 8 ಗೋಲುಗಳಲ್ಲಿ ಕೃಷ್ಣ ಅವರು 5 ನ್ನು ತಮ್ಮ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾರೆ. ಎಟಿಕೆ ಮೋಹನ್ ಬಾಗನ್ ಪಡೆ ಪ್ರತಿದಾಳಿ ನೀಡುವಲ್ಲಿ ನಿಸ್ಸೀಮರು. ಆವೇಶದ ಆಟ ಮತ್ತೊಂದು ಅಸ್ತ್ರ.

ನಾರ್ಥ್‌ಈಸ್ಟ್ ಯುನೈಟೆಡ್ ಆಕ್ರಮಣಕಾರಿ ಆಟ
ನಾರ್ಥ್ ಈಸ್ಟ್ ಯುನೈಟೆಡ್ ಕೂಡ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದೆ. ಪರ್ವತಪ್ರದೇಶದ ತಂಡ ಈ ಬಾರಿ ಲೀಗ್ ನಲ್ಲಿ ಉತ್ತಮ ಆರಂಭ ಕಂಡು ಸ್ಥಿರ ಪ್ರದರ್ಶನ ನೀಡುತ್ತಿದೆ. ತಂಡವು ಇದುವರೆಗೂ ಐದು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಯಾವುದೇ ತಂಡವು ಈ ಮೈಲಿಗಲ್ಲನ್ನು ತಲುಪಿಲ್ಲ. ಗೆರಾರ್ಡ್ ನಸ್ ಪಡೆ ಕಳೆದ ನಾಲ್ಕು ಪಂದ್ಯಗಳಲ್ಲಿ ಜಯ ಕಂಡಿಲ್ಲ.

ಅವಕಾಶ ಉಪಯೋಗಿಸಲು ವಿಫಲ
ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಮತ್ತು ಪೆನಾಲ್ಟಿಯನ್ನು ಕೈ ಚೆಲ್ಲಿರುವುದು ತಂಡದ ದೌರ್ಬಲ್ಯವಾಗಿದೆ. 4 ಪಂದ್ಯಗಳಲ್ಲಿ 5 ಗೋಲುಗಳನ್ನು ಗಳಿಸಲು ಎದುರಾಳಿ ತಂಡಕ್ಕೆ ನೀಡಿರುವುದು ನಸ್ ಅವರಿಗೆ ಚಿಂತೆಯನ್ನುಂಟು ಮಾಡಿದೆ. ಡಿಫೆನ್ಸ್ ವಿಭಾಗ ನೈಜ ಸಾಮರ್ಥ್ಯ ತೋರಿದರೆ ಎಟಿಕೆಯನ್ನು ಸೋಲಿಸುವುದು ಕಷ್ಟವಲ್ಲ ಎಂಬ ಆತ್ಮವಿಶ್ವಾಸದೊಂದಿಗೆ ತಂಡ ಅಂಗಣಕ್ಕಿಳಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications