ಐಎಸ್‌ಎಲ್: ಬೆಂಗಳೂರು ವಿರುದ್ಧ ಜಯದ ಒತ್ತಡದಲ್ಲಿ ಈಸ್ಟ್ ಬೆಂಗಾಲ್

ಗೋವಾ, ಫೆಬ್ರವರಿ 2: ಪ್ಲೇ ಆಫ್ ತಲುಪಬೇಕಾದರೆ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಎಸ್ ಸಿ ಈಸ್ಟ್ ಬೆಂಗಾಲ್, ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನದಲ್ಲಿದ್ದು ರಾಬಿ ಫ್ಲವರ್ ಪಡೆ 14 ಪಂದ್ಯಗಳನ್ನಾಡಿ 13 ಅಂಕಗಳನ್ನು ಗಳಿಸಿದೆ. ಜಯದ ಫಲಿತಾಂಶ ಬಂದಲ್ಲಿ ಈಸ್ಟ್ ಬೆಂಗಾಲ್ ಖಂಡಿತವಾಗಿಯೂ ಪ್ಲೇ ಆಫ್ ತಲುಪಲಿದೆ.
ಮಂಗಳವಾರ ತಿಲಕ್ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಕೋಲ್ಕೊತಾ ಪಡೆ ಗೆದ್ದು ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಗುರಿ ಹೊಂದಿದೆ. ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿರು ಈಸ್ಟ್ ಬೆಂಗಾಲ್ ಅಂಕಪಟ್ಟಿಯಲ್ಲಿ ತಳ ಸೇರಲು ಪ್ರಮುಖ ಕಾರಣವಾಗಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿರುವ ತಂಡ ಒಟ್ಟು 12 ಗೋಲುಗಳನ್ನು ಗಳಿಸಿದೆ. ಇದು ಲೀಗ್ ನಲ್ಲೇ ಅತಿ ಕಡಿಮೆಯಲ್ಲಿ ಎರಡನೇ ಸ್ಥಾನವೆನಿಸಿದೆ. ಎಸ್ ಸಿ ಈಸ್ಟ್ ಬೆಂಗಾಲ್ ಗೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಲು ಕೇವಲ ನಾಲ್ಕು ಅಂಕಗಳ ಅಗತ್ಯ ಇದೆ. ಆದರೆ ಫ್ಲವರ್ ಪಡೆ ಯಾವ ಸ್ಥಾನದಲ್ಲಿದೆಯೋ ಅದರ ಹೊರತಾಗಿ ಈಗಲೂ ಪ್ಲೇ ಆಫ್ ತಲುಪುವ ಅವಕಾಶ ಹೊಂದಿದೆ.
"ನಾವು ಪ್ಲೇ ಆಫ್ ತಲುಪಬೇಕಾದರೆ ಫಲಿತಾಂಶ ಪರವಾಗಿರಬೇಕು. ನಾವು ಪಂದ್ಯವನ್ನಾಡಿ ಫಲಿತಾಂಶವನ್ನು ಗಳಿಸಬಯಸುತ್ತೇವೆ. ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಲಾಕ್ಕಾಚಾರದಲ್ಲಿ ಸಾಧ್ಯತೆ ಇರುವ ತನಕವೂ ಹೋರಾಟ ನೀಡುತ್ತೇವೆ. ಸದ್ಯದ ಸ್ಥಿತಿಯಲ್ಲಿ ಇದು ಸಾಧ್ಯವಿದೆ, ಆದರೆ ಫಲಿತಾಂಶ ಎಲ್ಲವನ್ನೂ ನಿರ್ಧರಿಸಲಿದೆ," ಎಂದು ಫ್ಲವರ್ ಹೇಳಿದ್ದಾರೆ.

8 ಪಂದ್ಯಗಳಿಂದ ಜಯ ಕಾಣದ ಬೆಂಗಳೂರು
ಎಸ್ ಸಿ ಈಸ್ಟ್ ಬೆಂಗಾಲ್ ಪರಿಸ್ಥಿತಿಯೇ ಬೆಂಗಳೂರು ತಂಡಕ್ಕೆ. ಕಳೆದ 8 ಪಂದ್ಯಗಳಿಂದ ಬೆಂಗಳೂರು ಜಯ ಕಂಡಿಲ್ಲ. ಅದರಲ್ಲಿ 5 ಸೋಲು. ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅನುವುಮಾಡಿಕೊಡುವುದು ಬೆಂಗಳೂರಿನ ದೊಡ್ಡ ಸಮಸ್ಯೆಯಾಗಿದೆ. 11 ಪಂದ್ಯಗಳಲ್ಲಿ ತಂಡ ಕ್ಲೀನ್ ಶೀಟ್ ಸಾಧನೆ ಮಾಡುವಲ್ಲಿ ವಿಫಲವಾಗಿದೆ. 19 ಗೋಲುಗಳನ್ನು ನೀಡಿರುವ ಬೆಂಗಳೂರು ಈ ವಿಷಯದಲ್ಲಿ ಕೇರಳ ಮತ್ತು ಒಡಿಶಾದ ಜತೆ ಕೈ ಜೋಡಿಸಿದೆ. ಬಿಎಫ್ ಸಿ ಈ ಋತುವಿನಲ್ಲಿ ಜಯದ ಹಂತದಿಂದ 9 ಅಂಕಗಳನ್ನು ಕಳೆದುಕೊಂಡಿದೆ. ಹೈದರಾಬಾದ್ ವಿರುದ್ಧ ಪಂದ್ಯ ಗೆಲುವು ನಿಶ್ಚಿತವಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಪಂದ್ಯ 2-2 ರಲ್ಲಿ ಸಮಬಲಗೊಂಡಿತು.

ಪ್ಲೇ ಆಫ್ ಆಸೆ ಜೀವಂತ
ಈಗ ತಂಡ ಬದಲಾವಣೆಗೆ ಮುಂದಾಗಿದೆ. ಎರಿಕ್ ಪಾರ್ಥಲು ಮತ್ತು ಜುವಾನನ್ ಅವರು ನಾಳೆಯ ಪಂದ್ಯದಿಂದ ವಂಚಿತರಾಗಲಿದ್ದಾರೆ. ತಂಡದಲ್ಲಿ ಆಟಗಾರರ ಮನಸ್ಥಿತಿ ಉತ್ತಮವಾಗಿಲ್ಲ ಎಂದು ಕೋಚ್ ನೌಶಾದ್ ಮೂಸಾ ಹೇಳಿದ್ದಾರೆ. ಇತ್ತೀಚಿನ ಫಲಿತಾಂಶಗಳನ್ನು ಕಂಡಾಗ ತಂಡದಲ್ಲಿ ಪ್ಲೇ ಆಫ್ ತಲಪುವ ಆಸೆ ಜೀವಂತವಾಗಿದೆ ಎಂದಿದ್ದಾರೆ.

ಒಂದು ಗೆಲುವು ಸಾಕು
"ನೀವು ಅಂಕಪಟ್ಟಿಯನ್ನು ಗಮನಿಸಿದಾಗ ಹೆಚ್ಚು ಅಂತರ ಕಾಣುವುದಿಲ್ಲ. ಕೇವಲ ಒಂದು ಜಯ ಗಳಿಸಿದರೆ ಅಲ್ಲಿಗೆ ತಲುಪಲಿದ್ದೇವೆ. ಇದು ನಮ್ಮಲ್ಲಿ ಧನಾತ್ಮಕ ಫಲಿತಾಂಶವನ್ನು ಕಾಣಲು ಪ್ರೇರಣೆ ನೀಡಿದೆ. ಒಂದು ಪಂದ್ಯ, ಒಂದು ಜಯ ಗಳಿಸಿದರೆ ಸಾಕು ನಾವು ಅಲ್ಲಿಗೆ ತಲುಪುತ್ತೇವೆ. ನಾವು ಕಠಿಣ ಶ್ರಮವಹಿಸಿ ಪ್ಲೇ ಆಫ್ ತಲುಪಲಿದ್ದೇವೆ," ಎಂದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications