ಐಎಸ್‌ಎಲ್: ಬೆಂಗಳೂರು ಎಫ್‌ಸಿ vs ನಾರ್ಥ್‌ಈಸ್ಟ್ ಯುನೈಟೆಡ್, Live ಸ್ಕೋರ್

ಗೋವಾ, ಜನವರಿ 12: ಸತತ ಸೋಲುಗಳಿಂದ ಕಂಗೆಟ್ಟಿರುವ ಬೆಂಗಳೂರು ಎಫ್‌ಸಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದೆ. ಇಂದು ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿಗೆ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ
ಸವಾಲೊಡ್ಡಿದೆ. ಈ ಎರಡು ತಂಡಗಳ ಸ್ಥಿತಿಯೂ ಬಹುತೇಕ ಒಂದೇ ರೀತಿಯಿದೆ. ಎರಡೂ ತಂಡಗಳು ಆರಂಭದಲ್ಲಿ ಅದ್ಭುತ ಆಟವಾಡಿ ಅಂಕಪಟ್ಟಿಯ ಅಗ್ರ ನಾಲ್ಕರಲ್ಲಿ ಸ್ಥಾನ ಕಾಯ್ದುಕೊಂಡಿದ್ದವು. ಆದರೀಗ ಸತತ ಸೋಲುಗಳಿಂದಾಗಿ ಕುಸಿದಿವೆ. ಇದೀಗ ಸಂಕಷ್ಟದಲ್ಲಿ ಇರುವ ಈ ಎರಡೂ ತಂಡಗಳು ಇಲ್ಲಿನ ತಿಲಕ್ ಮೈದಾನ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು, ಕಳೆದುಕೊಂಡಿರುವ ತಮ್ಮ ಗೆಲುವಿನ ಲಯ ಕಂಡುಕೊಳ್ಳಲು ಕದನಕ್ಕಿಳಿದಿದೆ.
ಹೈಲ್ಯಾಂಡರ್ಸ್ ಖ್ಯಾತಿಯ ನಾರ್ತ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಕೇವಲ ಒಂದು ಅಂಕಗಳ ಹಿನ್ನಡೆಯಲ್ಲಿ 6ನೇ ಸ್ಥಾನದಲ್ಲಿರುವ ಬೆಂಗಳೂರು ಎಫ್‌ಸಿಗಿಂತ ಒಂದು ಸ್ಥಾನ ಕೆಳಗಿದೆ. 10 ಪಂದ್ಯಗಳನ್ನು ಆಡಿರುವ ಬಿಎಫ್‌ಸಿ ಒಟ್ಟು 12 ಅಂಕಗಳನ್ನು ಗಳಿಸಿದೆ. ಹೀಗಾಗಿ ಈ ಪಂದ್ಯದಲ್ಲಿ ಯಾವುದೇ ತಂಡ ಗೆದ್ದರೂ ಅಂಕಪಟ್ಟಿಯಲ್ಲಿ ಮೇಲೇರುವ ಉತ್ತಮ ಅವಕಾಶ ಹೊಂದಿವೆ. ಕನಿಷ್ಠ 5ನೇ ಸ್ಥಾನ ಪಡೆದುಕೊಳ್ಳಲಿವೆ.
Live ಸ್ಕೋರ್ ಪಟ್ಟಿ ಹೀಗಿದೆ:
ಬೆಂಗಳೂರು ಎಫ್‌ಸಿ ಆಡುವ ಬಳಗ:
ಗುರ್‌ಪ್ರೀತ್ ಸಿಂಗ್ ಸಂಧು (ಗೋಲ್‌ಕೀಪರ್), ರಾಹುಲ್ ಭೆಕೆ, ಪ್ರತೀಕ್ ಚೌಧರಿ, ಜುವಾನಾನ್, ಪರಾಗ್ ಶ್ರೀವಾಸ್, ಕ್ಲೀಟನ್ ಸಿಲ್ವಾ, ಹರ್ಮನ್‌ಜೋತ್ ಖಬ್ರಾ, ಎರಿಕ್ ಪಾರ್ತಲು, ಡಿಮಾಸ್ ಡೆಲ್ಗಾಡೊ, ಕ್ರಿಸ್ಟಿಯನ್ ಒಪ್ಸೆತ್, ಸುನಿಲ್ ಛೇತ್ರಿ (ನಾಯಕ).
ನಾರ್ಥ್‌ಈಸ್ಟ್ ಯುನೈಟೆಡ್ ಆಡುವ ಬಳಗ:
ಗುರ್ಮೀತ್ (ಗೋಲ್‌ಕೀಪರ್), ಗುರ್ಜಿಂದರ್ ಕುಮಾರ್, ಅಶುತೋಷ್ ಮೆಹ್ತಾ, ಡೈಲನ್ ಫಾಕ್ಸ್, ಬೆಂಜಮಿನ್ ಲ್ಯಾಂಬೋಟ್ (ನಾಯಕ), ಖಸ್ಸಾ ಕ್ಯಾಮರಾ, ರೋಚಾರ್ಜೆಲಾ, ಫೆಡೆರಿಕೊ ಗ್ಯಾಲೆಗೊ, ಲಾಲ್ರೆಂಪುಯಾ ಫಾನೈ, ಸುಹೇರ್ ವಡಕ್ಕೀಪೀಡಿಕಾ, ಲೂಯಿಸ್ ಮಚಾದೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications