ಐಎಸ್‌ಎಲ್: ಸ್ಥಿರ ಪ್ರದರ್ಶನ ತೋರುತ್ತಿರುವ ಈಸ್ಟ್ ಬೆಂಗಾಲ್‌ಗೆ ಕೇರಳ ಎದುರಾಳಿ

ಗೋವಾ, ಜನವರಿ 14: ಕಳೆದ ಮೂರು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ತೋರುತ್ತಿರುವ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಶಕ್ರವಾರ ಇಲ್ಲಿನ ತಿಲಕ್ ಮೈದಾನದಲ್ಲಿ ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಪಂದ್ಯವನ್ನಾಡಲಿದೆ. ಈ ಎರಡು ತಂಡಗಳು ಡಿಸೆಂಬರ್ ನಲ್ಲಿ ಮುಖಾಮುಖಿಯಾದಾಗಿನಿಂದ ಲೀಗ್ ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಂದಿನ ಪಂದ್ಯದಲ್ಲಿ ಕೇರಳ ತಂಡ ಕೊನೆಯ ಕ್ಷಣದಲ್ಲಿ ಗೋಲು ಗಳಿಸುವ ಮೂಲಕ ಪಂದ್ಯ 1-1ರಲ್ಲಿ ಸಮಬಲಗೊಂಡಿತ್ತು. ಆದರೆ ಅಲ್ಲಿಂದ ಎಲ್ಲವೂ ವಿಭಿನ್ನ ಹಾದಿಯಲ್ಲಿ ಸಾಗಿದೆ. ಕಳೆದ ಐದು ಪಂದ್ಯಗಳಲ್ಲಿ ರಾಬಿ ಫ್ಲವರ್ಸ್ ಪಡೆ ಸೋಲನ್ನೆ ಕಂಡಿಲ್ಲ. ಎರಡು ಜಯ ಹಾಗೂ ಮೂರು ಡ್ರಾ ಕಂಡಿತ್ತು. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರೂ, ಇನ್ನು ಕೇವಲ ಐದು ಅಂಕಗಳನ್ನು ಗಳಿಸಿದರೆ ಪ್ಲೇ ಅಫ್ ಗೆ ಅರ್ಹತೆ ಪಡೆಯಲಿದೆ.
ತಂಡದ ಸದ್ಯದ ಪ್ರದರ್ಶನ ಕೋಚ್ ಫ್ಲವರ್ ಅವರಿಗೆ ಖುಷಿ ಕೊಟ್ಟಿರಬಹುದು, ಆದರೆ ಪ್ಲೇಆಫ್ ಸ್ಪರ್ಧೆಯಲ್ಲಿ ಜೀವಂತವಾಗಿರಬೇಕಾದರೆ ಎಸ್ ಸಿ ಇಬಿ ಕಠಿಣ ಶ್ರಮ ಪಡಬೇಕಾಗಿದೆ. "ಖಂಡಿತವಾಗಿಯೂ ನಮ್ಮ ಹಾದಿ ಸುಗಮವಾಗಿಲ್ಲ, ನಮ್ಮನ್ನು ಜನ ಟೀಕಿಸಲು ಆರಂಭಿಸಿದಾಗ ನಾವು ಚೇತರಿಸಿಕೊಂಡೆವು. ನಾವು ಮುಂದುವರಿಯಬೇಕಾದರೆ ಕಠಿಣ ಶ್ರಮವಹಿಸಬೇಕಾಗಿದೆ. ನಮ್ಮದು ಸಾಕಷ್ಟು ಆತ್ಮವಿಶ್ವಾಸ ಮತ್ತು ಹಾಗೂ ಭದ್ರ ತಳಪಾಯ ಹೊಂದಿರುವ ತಂಡ ನಮ್ಮ ಮುಂದೆ ಸಾಕಷ್ಟು ಅವಕಾಶವಿದೆ, ಆ ಕಾರಣ ನಾವು ನಿರಂತರವಾಗಿ ಬೆಳೆಯಬೇಕಾಗಿದೆ. ನಾವು ಆರಂಭದಲ್ಲಿ ಯಾವ ನಿರೀಕ್ಷೆ ಇಟ್ಟುಕೊಂಡಿದ್ದೇವೊ ಅದಕ್ಕಿಂತ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕೊಂಡಿದ್ದೇವೆ," ಎಂದು ಕೋಚ್ ಹೇಳಿದ್ದಾರೆ.

ಆಕ್ರಮಣಕಾರಿ ಆಟ
ಎಸ್‌ಸಿಇಬಿ ತಂಡದ ಈ ಅಜೇಯ ಯಶಸ್ಸಿನ ಹಾದಿಯಲ್ಲಿ ಕಂಡಿ ಬಂದ ಮುಖ್ಯ ಅಂಶವೆಂದರೆ ಅದು ತಂಡದ ಆಕ್ರಮಣಕಾರಿ ಆಟ. ಋತುವಿನ ಆರಂಭದಲ್ಲಿ ಯಾವ ವಿಭಾಗದಲ್ಲಿ ವೈಫಲ್ಯ ಕಂಡು ಗೋಲು ಗಳಿಸಲು ಆಥವಾ ಜಯ ಗಳಿಸಲು ತಂಡ ವಿಫಲವಾಗಿತ್ತೊ ಈಗ ಅದೇ ವಿಭಾಗದಲ್ಲಿ ಯಶಸ್ಸು ಕಂಡಿರುವುದು ಗಮನಾರ್ಹ. ಯುವ ಆಟಗಾರ ಎನೋಬಾಖರೆ ಆವರು ಹೊಸದಾಗಿ ತಂಡಕ್ಕೆ ಸೇರ್ಪಡೆಯಾಗಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ. ನೈಜಿರಿಯಾ ಮೂಲದ ಆಟಟಗಾರ ಕಳೆದ ಮೂರು ಪಂದ್ಯಗಳಲ್ಲಿ ಗೋಲು ಗಳಿಸುತ್ತಿದ್ದಾರೆ. ತಂಡದ ಮಿಡ್ ಫೀಲ್ಡ್ ವಿಭಾಗ ಇದುವರೆಗೂ ಹತ್ತು ಗೋಲುಗಳನ್ನು ಗಳಿಸಿದೆ. ಲೀಗ್ ನಲ್ಲಿ ಯಾವುದೇ ತಂಡ ಇದುವರೆಗೂ ಈ ಯಶಸ್ಸನ್ನು ಕಂಡಿರಲಿಲ್ಲ.

ಕೇರಳ ಅಟ್ಯಾಕ್ ಕೂಡ ಉತ್ತಮ
ಕೇರಳ ಬ್ಲಾಸ್ಟರ್ಸ್ ತಂಡ ಇದುವರೆಗೂ ಎದುರಾಳಿ ತಂಡಕ್ಕೆ 19 ಗೋಲುಗಳನ್ನು ಗಳಿಸಲು ಅವಕಾಶ ನೀಡಿದೆ. ಆದರೆ ಎಸ್ ಸಿ ಇ ಬಿ ರೀತಿಯಲ್ಲಿಯೇ ಕೇರಳದ ಅಟ್ಯಾಕ್ ವಿಭಾಗ ಸುಧಾರಣೆ ಕಂಡಿದೆ. 13 ಗೋಲುಗಳನ್ನು ಗಳಿಸಿರುವುದು ಗಮನಾರ್ಹ. ಮುಂಬೈ ಸಿಟಿ ಹಾಗೂ ಹೈದರಾಬಾದ್ ತಂಡಗಳು ಅತಿ ಹೆಚ್ಚು ಗೋಲುಗಳನ್ನು ಗಳಿಸಿವೆ. ಕಿಬು ವೆಕುನಾ ಪಡೆಯಲ್ಲಿ ಎಂಟು ವಿಭಿನ್ನ ರೀತಿಯಲ್ಲಿ ಗೋಲುಗಳು ದಾಖಲಾಗಿವೆ. ವಿಭಿನ್ನ ಆಟಗಾರರು ಗೋಲು ಗಳಿಸಿದ್ದಾರೆ. ಗೋಲು ಗಳಿಸುವ ವರೆಗೂ ತಂಡದ ಡಿಫೆನ್ಸ್ ವಿಭಾಗದ ಸಮಸ್ಯೆ ಸಮಸ್ಯೆಯಾಗಿ ಉಳಿಯುವುದಿಲ್ಲ.

ಗೋಲು ಗಳಿಸಲು ಅವಕಾಶ ನೀಡಬಾರದು
"ನಾವು ಎಷ್ಟು ಗೋಲುಗಳನ್ನು ನೀಡಿದ್ದೇವೆ ಎಂಬುದು ಮುಖ್ಯವಲ್ಲ, ಎಷ್ಟು ಗೋಲುಗಳನ್ನು ಗಳಿಸಿದ್ದೇವೆ ಎಂಬುದು ಮುಖ್ಯ. ನೀವು ನೀಡಿದ್ದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದರೆ ನಿಮ್ಮ ಆತ್ಮವಿಶ್ವಾಕ್ಕೆ ದಕ್ಕೆಯಾಗದು, ಹಿಂದಿನ ಕೆಲವು ಪಂದ್ಯಗಳಲ್ಲಿ ನಾವು ಅವಕಾಶಗಳನ್ನು ನಿರ್ಮಿಸುತ್ತಿದ್ದೇವೆ. ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶವನ್ನು ನೀಡದಿರುವುದೇ ನಮ್ಮ ಉದ್ದೇಶವಾಗಬೇಕು,' ಎಂದು ಬ್ಲಾಸ್ಟರ್ಸ್ ಕೋಚ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications