For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಸೋಲಿನ ಹಾದಿಯಲ್ಲಿ ಈಸ್ಟ್ ಬೆಂಗಾಲ್ ಗೆ ಜಯದ ಬೆಳಕು

By Isl Media
isl 2020 21, jamshedpur fc vs east bengal, match 85 highlights

ಗೋವಾ, ಫೆಬ್ರವರಿ 7: ವಿಲ್ಲೋ ಮಾಟ್ಟಿ ಸ್ಟಿನ್ಮನ್ (6ನೇ ನಿಮಿಷ) ಮತ್ತು ಆಂಥೊನಿ ಪಿಲ್ಕಿಂಗ್ಟನ್ (68ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಮಣಿಸಿದ ಎಸ್ ಸಿ ಈಸ್ಟ್ ಬೆಂಗಾಲ್ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೂರನೇ ಜಯ ಗಳಿಸಿತಲ್ಲದೆ, ಪ್ಲೇ ಆಫ್ ಆಸೆಯ ಹೋರಾಟವನ್ನು ಕಾಯ್ದುಕೊಂಡಿತು. ಜೆಮ್ಷೆಡ್ಪುರದ ಪರ ಪೀಟರ್ ವಿಲಿಯಂ ರಾರ್ಟ್ಲೀ (83ನೇ ನಿಮಿಷ) ಗೋಲು ಜೆಮ್ಷೆಡ್ಪುರ ತಂಡದ ಸಮಬಲಗೊಳಿಸುವ ಆಸೆಯನ್ನು ಜೀವಂತಗೊಳಿಸಿತ್ತು, ಆದರೆ ಆ ನಂತರ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಪರಿಣಾಮ ನಿರ್ಣಾಯಕ ಹಂತದಲ್ಲಿ ಮತ್ತೊಂದು ಸೋಲಿಗೆ ಶರಣಾಯಿತು.

ಮುನ್ನಡೆದ ಈಸ್ಟ್ ಬೆಂಗಾಲ್: ಪಂದ್ಯ ಆರಂಭಗೊಂಡ 6ನೇ ನಿಮಿಷದಲ್ಲಿ ಮ್ಯಾಟ್ ಸ್ಟಿನ್ಮನ್ ಹೆಡರ್ ಮೂಲಕ ಗಳಿಸಿದ ಗೋಲಿನಿಂದ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಪ್ರಥಮಾರ್ಧದ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಪ್ಲೇ ಆಫ್ ನ ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಇಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ತಂಡ ಅದಕ್ಕೆ ಪೂರಕವಾಗಿಯೇ ಆಟ ಪ್ರದರ್ಶಿಇಸತ್ತು. ಆರಂಭದಿಂದಲೂ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತಲ್ಲದೆ, ಡಿಫೆನ್ಸ್ ವಿಭಾಗದಲ್ಲಿ ಎದುರಾಳಿಯ ಮುನ್ನಡೆಗೆ ಅವಕಾಶ ಕಲ್ಪಿಸಲಿಲ್ಲ. ಬಿಎಫ್ ಸಿ ವಿರುದ್ಧ ಸೋತ ನಂತರ ತಂಡದಲ್ಲಿ ಆರು ಬದಲಾವಣೆಗಳನ್ನು ಮಾಡಿದ್ದ ಈಸ್ಟ್ ಬೆಂಗಾಲ್ ಯಶಸ್ಸಿನ ಹೆಜ್ಜೆ ಇಟ್ಟಿತು. ಜೆಮ್ಷೆಡ್ಪುರ ತಂಡದ ಆಟದಲ್ಲಿ ಹಿಂದಿನ ಆತ್ಮವಿಶ್ವಾಸ ಕಂಡು ಬರಲಿಲ್ಲ. ಮರೆಯಬಹುದು ಎನ್ನುವಂಥ 45 ನಿಮಿಷಗಳ ಆಟವನ್ನು ಟಾಟಾ ಪಡೆ ಪ್ರದರ್ಶಿಸಿತು. ಮುಂದಿನ 45 ನಿಮಿಷಗಳಲ್ಲಿ ದಿಟ್ಟ ಹೋರಾಟ ನೀಡಿದರೆ ಜೆಮ್ಷೆಡ್ಪುರಕ್ಕೆ ಸಮಬಲ ಸಾಧಿಸಬಹುದು.

ಈಸ್ಟ್ ಬೆಂಗಾಲ್ ಗೆ ಜಯದ ಅಗತ್ಯ: ಸತತ ಐದು ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾದ ಜೆಮ್ಷೆಡ್ಪುರ ತಂಡ ಅಂತಿಮವಾಗಿ ಒಡಿಶಾ ಎಫ್ ಸಿ ವಿರುದ್ಧ ಜಯ ಗಳಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ಋತುವಿನ ಕೊನೆಯ ತನಕವೂ ಜಯದ ಲಯವನ್ನು ಕಾಯ್ದುಕೊಳ್ಳಬೇಕೆಂಬುದನ್ನು ಮರೆಯುವಂತಿಲ್ಲ. ಜೆಮ್ಷೆಡ್ಪುರ ಮೂರು ಪಂದ್ಯಗಳಲ್ಲಿ ಕ್ಲೀನ್ ಶೀಟ್ ಕಾಯ್ದುಕೊಂಡಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ತಂಡ ಎಂಟು ಗೋಲುಗಳನ್ನು ಎದುರಾಳಿ ತಂಡಕ್ಕೆ ಗಳಿಸಲು ಅವಕಾಶಮಾಡಿಕೊಟ್ಟಿತ್ತು. ಇದಕ್ಕಾಗಿ ಉತ್ತಮ ಫಾರ್ಮ್ ಕಾಯ್ದುಕೊಳ್ಳಬೇಕು. ಹಿಂದಿನ ಪಂದ್ಯದಲ್ಲಿ ಇತ್ತಂಡಗಳು ಮುಖಾಮುಖಿಯಾದಾಗ ಈಸ್ಟ್ ಬೆಂಗಾಲ್ ತಂಡ ಕೇವಲ 10 ಮಂದಿ ಆಟಗಾರರಿದ್ದರೂ ಜೆಮ್ಷೆಡ್ಪುರದ ಬೆವರಿಳಿಸಿತ್ತು.

ಇನ್ನೊಂದೆಡೆ ಈಸ್ಟ್ ಬೆಂಗಾಲ್ ತಂಡ ಸಂಕಷ್ಟದಲ್ಲಿದೆ. ಇಲ್ಲಿ ಸೋತರೆ ಸೋಲು ತಂಡವನ್ನು ಬಹುತೇಕ ಪ್ಲೇ ಆಫ್ ನಿಂದ ಹೊರನಡೆಯುವಂತೆ ಮಾಡಲಿದೆ. ಕಳೆದ ಐದು ಪಂದ್ಯಗಳಲ್ಲಿ ತಂಡ ಜಯ ಕಂಡಿರಲಿಲ್ಲ. ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೋಲು ಗಳಿಸಿರಲಿಲ್ಲ. ಅಮಾನತುಗೊಂಡ ಕಾರಣ ಕೋಚ್ ರಾಬಿ ಫ್ಲವರ್ ಅವರ ಸೇವೆಯಿಂದ ತಂಡ ವಂಚಿತವಾಗಲಿದೆ. ಆದರೆ ಸಹಾಯಕ ಕೋಚ್ ಟೋನಿ ಗ್ರಾಂಟ್ ಅವರು ತಮ್ಮ ತಂಡ ಇದುವರೆಗೂ ಲೀಗ್ ನಲ್ಲಿ ತೋರಿದ ಪ್ರದರ್ಶನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.

Story first published: Sunday, February 7, 2021, 23:56 [IST]
Other articles published on Feb 7, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+