ಐಎಸ್‌ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್‌ಈಸ್ಟ್

ಗೋವಾ, ಜನವರಿ 17 : ಹೀರೋ ಇಂಡಿಯನ್ ಸೂಪರ್ ಲೀಗ್ ನ 61ನೇ ಪಂದ್ಯದಲ್ಲಿ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ, ಸತತ 7 ಪಂದ್ಯಗಳ ನಂತರ ಮೊದಲ ಯಶಸ್ಸು ಕಂಡಿತು. ಅಶುತೋಶ್ ಮೆಹ್ತಾ (36ನೇ ನಿಮಿಷ) ದೆಶಾರ್ನ್ ಬ್ರೌನ್ (61ನೇ ನಿಮಿಷ) ಗಳಿಸಿದ ಗೋಲು ನಾರ್ಥ್ ಈಸ್ಟ್ ಗೆ ಜಯ ತಂದುಕೊಟ್ಟಿತು. ಜೆಮ್ಷೆಡ್ಪುರ ಪರ ಪೀಟರ್ ಹರ್ಟ್ಲೀ (89ನೇ ನಿಮಿಷ) ಗೋಲು ಗಳಿಸಿದರೂ ಆಗಲೇ ಕಾಲ ಮಿಂಚಿತ್ತು. ಈ ಜಯದೊಂದಿಗೆ ನಾರ್ಥ್ ಈಸ್ಟ್ 5ನೇ ಸ್ಥಾನಕ್ಕೆ ಜಿಗಿಯಿತು. ಜೆಮ್ಷೆಡ್ಪುರ ಮತ್ತೊಂದು ಸ್ಥಾನ ಕುಸಿದು ಎಂಟನೇ ಸ್ಥಾನ ತಲುಪಿತು.
ಮುನ್ನಡೆದ ನಾರ್ಥ್ ಈಸ್ಟ್ : ಅಶುತೋಶ್ ಮೆಹ್ತಾ (36ನೇ ನಿಮಿಷ) ಗಳಿಸಿದ ಗೋಲಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ತಂಡ ಜೆಮ್ಷೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 1-0 ಗೋಲಿನ ಅಂತರದಲ್ಲಿ ಮೇಲುಗೈ ಸಾಧಿಸಿತು. ಕಳೆದ ಏಳು ಪಂದ್ಯಗಳಿಂದ ಜಯ ಕಾಣದೆ ಕಂಗೆಟಟ್ಟಿದ್ದ ನಾರ್ಥ್ ಈಸ್ಟ್ ಈಗ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಇಟ್ಟಿತು.ಚೆಂಡನ್ನು ಹೆಚ್ಚು ಕಾಲ ತಮ್ಮ ಸ್ವಾಧೀನದಲ್ಲಿರಿಸಿಕೊಳ್ಳುವುದು ಮಾತ್ರವಲ್ಲ, ನಾರ್ಥ್ ಈಸ್ಟ್ ಹೆಚ್ಚಿನ ಅವಕಾಶಗಳನ್ನೂ ಹುಟ್ಟುಹಾಕಿತ್ತು, ಆದರೆ ಗೋಲಿನ ರೂಪು ನೀಡುವಲ್ಲಿ ವಿಫಲವಾಯಿತು.
ಜಯದ ನಿರೀಕ್ಷೆಯಲ್ಲಿ: ಹೀರೋ ಇಂಡಿಯನ್ ಸೂಪರ್ ಲೀಗ್ ನ 61ನೇ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ ಸಿ ನಾಲ್ಕನೇ ಸ್ಥಾನವನ್ನು ತತಲಪುವ ಗುರಿಯೊಂದಿಗೆ ನಾರ್ಥ್ ಈಸ್ಟ್ ಯುನೈಟೆಡ್ ನ ಸವಾಲು ಸ್ವೀಕರಿಸಲು ಸಜ್ಜಾಯಿತು. ಇವೆರಡು ತಂಡಗಳು ಹಿಂದಿನ ಪಂದ್ಯದಲ್ಲಿ ಮುಖಾಮುಖಿಯಾದಾಗ ಜೆಮದಷೆಡ್ಪುರ ಏಕೈಕ ಗೋಲಿನಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ಅಂದು ಅನಿಕೇತ್ ಜಾದವ್ ಗಳಿಸಿದ ಗೋಲು ತಂಡಕ್ಕೆ ಜಯ ತಂದುಕೊಟ್ಟಿತ್ತು, ಆದರೆ ತಂಡದ ಇತ್ತೀಚಿನ ಪ್ರದರ್ಶನ ತೃಪ್ತಿದಾಯಕವಾಗಿಲ್ಲ. ಸ್ಟೀಲ್ ಪಡೆ ಕಳೆದ ಎರಡು ಪಂದ್ಯಗಳಲ್ಲಿ ತಲಾ ಮೂರು ಗೋಲುಗಳಿಂದ ಸೋಲನುಭವಿಸಿತ್ತು, ಓವೆನ್ ಕೊಯ್ಲ್ ಪಡೆ ಮೂರು ಕ್ಲೀನ್ ಶೀಟ್ ಸಾಧನೆ ಮಾಡಿತ್ತು, ಆದರೆ ಸೋತಾಗ 15 ಗೋಲುಗಳನ್ನು ನೀಡಿತ್ತು.
ದ್ವಿತಿಯಾರ್ಧದಲ್ಲಿ ತಂಡ ಮಾಡಿದ ಪ್ರಮಾದಗಳಿಂದಲೇ ಸೋಲಿನ ಆಘಾತಕ್ಕೆ ಕಾರಣವಾಯಿತು. ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಬೇಕಾದರೆ ಜೆಮ್ಷೆಡ್ಪುರ ತಂಡ ಈ ಪ್ರಮಾದಗಳ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. 8ನೇ ಸ್ಥಾನದಲ್ಲಿರುನ ನಾರ್ಥ್ ಈಸ್ಟ್ ಯುನೈಟೆಡ್ ಒಂದು ಸ್ಥಾನ ಮತ್ತು ಒಂದು ಅಂಕ ಕೆಳಗಿದೆ. 7 ಪಂದ್ಯಗಳಲ್ಲಿ ಜಯ ಕಾಣದ ಪರಿಣಾಮ ನಾರ್ಥ್ ಈಸ್ಟ್ ತನ್ನ ಕೋಚನ್ನು ಕಳೆದುಕೊಳ್ಳಬೇಕಾಯಿತು. ಕ್ವೆಸಿ ಅಪ್ಪಿಯ್ಯ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಡೆಶ್ರೋಮ್ ಬ್ರೌನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಾಯಿತು. 11 ಪಂದ್ಯಗಳಲ್ಲಿ ತಂಡ 6 ಪಂದ್ಯಗಳನ್ನು ಡ್ರಾಗೊಳಿಸಿರುವುದು ಮುನ್ನಡೆಗೆ ಅಡ್ಡಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications