ಐಎಲ್‌ಎಸ್ ಉದ್ಘಾಟನಾ ಪಂದ್ಯ: ಕೇರಳಾ ಬ್ಲಾಸ್ಟರ್ಸ್ vs ಎಟಿಕೆ ಮುಖಾಮುಖಿ, ಹೆಡ್ ಟು ಹೆಡ್ ದಾಖಲೆ

ಇಂಡಿಯನ್ ಸೂಪರ್ ಲೀಗ್ 2020-21ನೇ ಆವೃತ್ತಿಯ ಪಂದ್ಯಗಳು ಇಂದಿನಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಕೇರಳಾ ಬ್ಲಾಸ್ಟರ್ಸ್ ಹಾಗೂ ಎಟಿಕೆ ಮೋಹುನ್ ಬಗನ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯ ಗೋವಾದ ಬಾಮ್‌ಬೊಲಿಮ್ ಗಿಚಿಎಂ ಸ್ಟೇಡಿಯಮ್‌ನಲ್ಲಿ ನಡೆಯಲಿದೆ.
ಎಲ್ಲೋ ಆರ್ಮಿ ಎಂದು ಗುರುತಿಸಿಕೊಂಡಿರುವ ಕೇರಳಾ ತಂಡ 7ನೇ ಆವೃತ್ತಿಯಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಕೇರಳ ಎರಡು ಬಾರಿಯ ರನ್ನರ್‌ಅಪ್ ತಂಡವಾಗಿದ್ದು ಈವರಗೆ 102 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಇದರಲ್ಲಿ 29 ಪಂದ್ಯಗಳಲ್ಲಿ ಗೆಲುವು ಕಂಡಿದೆ.
ಎರಡು ಬಾರಿಯ ಐಎಸ್‌ಎಲ್ ಚಾಂಪಿಯನ್ ಎಟಿಕೆ ಈ ಬಾರಿ ಎರಡು ಬಾರಿ ಐ-ಲೀಗ್ ಚಾಂಪಿಯನ್ ಮೋಹುನ್ ಬಗುನ್ ಜೊತೆಗೆ ವಿಲೀನವಾಗಿದೆ. ಎಟಿಕೆ ಐಎಸ್‌ಎಲ್ ಇತಿಹಾಸದಲ್ಲಿ 41 ಗೆಲುವುಗಳೊಂದಿಗೆ ಅತಿ ಹೆಚ್ಚು ಗೆಲುವು ಕಂಡ ತಂಡವೆನಿಸಿದೆ.
ಕೇರಳಾ ಹಾಗೂ ಎಟಿಕೆ ಐಎಸ್‌ಎಲ್‌ನಲ್ಲಿ ಒಟ್ಟಾರೆ 14 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಎಟಿಕೆ 5 ಗೆಲುವು ಕಂಡಿದ್ದರೆ ಕೇರಳಾ 4 ಗೆಲುವು ಸಾಧಿಸಿದೆ. 2014 ಹಾಗೂ 2016ರಲ್ಲಿ ಈ ಎರಡು ತಂಡಗಳು ಪೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಎರಡರಲ್ಲೂ ಎಟಿಕೆ ಗೆದ್ದು ಬೀಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications