ಐಎಸ್‌ಎಲ್ 2020:ಎಫ್‌ಸಿ ಗೋವಾ vs ಜೆಮ್ಷೆಡ್ಪುರ ಎಫ್‌ಸಿ ಮುಖಾಮುಖಿ, Live ಸ್ಕೋರ್

ಹೀರೋ ಇಂಡಿಯನ್ ಸೂಪರ್ ಲೀಗ್‌ನ 7ನೇ ಆವೃತ್ತಿಯ 38ನೇ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಜೆಮ್ಷೆಡ್ಪುರ ಎಫ್ ಸಿ ಹಣಾಹಣಿ ನಡೆಸಲು ಕಣಕ್ಕಿಳಿದಿದೆ. ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ತನ್ನ ಸ್ಥಾನವನ್ನು ಯಾವಾಗಲೂ ಕಾಯ್ದುಕೊಳ್ಳುತ್ತಿದ್ದ ಎಫ್ ಸಿ ಗೋವಾ ಸದ್ಯ 7ನೇ ಸ್ಥಾನದಲ್ಲಿದ್ದು ಕ್ರಿಸ್ಮಸ್ ಹಬ್ಬಕ್ಕೆ ಎರಡು ದಿನಗಳ ವಿಶ್ರಾಂತಿಗೆ ಮುಂಚಿತವಾಗಿ ನಡೆಯುವ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಗುರಿ ಹೊಂದಿದೆ.
7 ಪಂದ್ಯಗಳನ್ನು ಆಡಿರುವ ಟಾಟಾ ಪಡೆ 10 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ಯಶಸ್ಸಿನಲ್ಲಿ ನೆರಿಜಸ್ ವಾಸ್ಕಿಸ್ ಪಾತ್ರ ಪ್ರಮುಖವಾದುದು. ಗೋಲು ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ವಾಸಕ್‌ಇಸ್ ತಂಡ ಗಳಿಸಿರುವ 8 ಗೋಲುಗಳಲ್ಲಿ 6 ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಗೋಲು ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ಐರ್ಗ ಆಂಗುಲೊ ಮತ್ತು ನೆರಿಜಸ್ ವಾಸ್ಕಿಸ್ ಅವರ ಮುಖಾಮುಖಿ ಕುತೂಹಲವನ್ನು ಕೆರಳಿಸಿದೆ.
Live ಸ್ಕೋರ್ ಪಟ್ಟಿ ಇಲ್ಲಿದೆ ನೋಡಿ:
ಎಫ್‌ಸಿ ಗೋವಾ ಆಡುವ ಬಳಗ: ಮೊಹಮ್ಮದ್ ನವಾಜ್ (ಗೋಲ್ ಕೀಪರ್), ಇವಾನ್ ಗೊನ್ಜಾಲೆಜ್, ಜೇಮ್ಸ್ ಡೊನಾಚಿ, ಸೆರಿಟನ್ ಫರ್ನಾಂಡಿಸ್, ಸಂರಕ್ಷಕ ಗಾಮಾ, ಎಡು ಬೆಡಿಯಾ (ನಾಯಕ), ಅಲೆಕ್ಸಾಂಡರ್ ಜೆಸುರಾಜ್, ಪ್ರಿನ್ಸ್ಟನ್ ರೆಬೆಲ್ಲೊ, ಬ್ರಾಂಡನ್ ಫರ್ನಾಂಡಿಸ್, ಜಾರ್ಜ್ ಮೆಂಡೋಜ, ಇಗೊರ್ ಅಂಗುಲೋ.
ಜೆಪ್ಷೆಡ್‌ಪುರ ಎಫ್‌ಸಿ ಆಡುವ ಬಳಗ: ಟಿ.ಪಿ.ರೆಹನೇಶ್ (ಗೋಲ್ ಕೀಪರ್), ರಿಕಿ ಲಲ್ಲಾವ್ಮಾ, ಲಾಲ್ಡಿನ್ಲಿಯಾನಾ ರೆಂಥ್ಲೈ, ಪೀಟರ್ ಹಾರ್ಟ್ಲೆ (ನಾಯಕ), ಸ್ಟೀಫನ್ ಈಜ್, ಐಸಾಕ್ ವನ್ಮಲ್ಸಾವ್ಮಾ, ಜಾಕಿಚಂದ್ ಸಿಂಗ್, ಅಲೆಕ್ಸಾಂಡ್ರೆ ಲಿಮಾ, ಆಯಿಟರ್ ಮನ್ರಾಯ್, ನೆರಿಜಸ್ ವಾಲ್ಸ್ಕಿಸ್, ಅನಿಕೇತ್ ಜಾಧವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications